COVID-19 Resources for Mental Health Coaches... Learn More

0836-2773878

“ಪೂರ್ವಜರ ಸಾಂಪ್ರದಾಯಿಕ ಕಲೆಗಳು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ:ಡಾ.ಆನಂದಪಾಂಡುರಂಗಿ”

ನಮ್ಮ ಪೂರ್ವಜರ ಈ ಸಂಪ್ರದಾಯಿಕ ಕಲೆಗಳು ಮನಸ್ಸನ್ನು ಉಲ್ಲಸಿತಗೊಳ್ಳುತ್ತದೆ. ನಮ್ಮ ಸಂಪ್ರದಾಯಿಕ ಕಲೆಗಳು ನಮ್ಮ ಸಂಸ್ಕೃತಿಯು ಉಳಿಯುವಂತಾಗುತ್ತದೆ ಎಂದು ಮನೋ ಆರೋಗ್ಯತಜ್ಞಡಾ.ಆನಂದ ಪಾಂಡುರಂಗಿ
ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು, ಜಯಶ್ರೀ ಗುತ್ತಲ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಒಳನೋಟಗಳಿವೆ ತಮ್ಮ ಬದುಕಿನ ನೋವು-ನಲಿವುಗಳನ್ನು ಹಾಡಿನ ಮೂಲಕ ಹೊರ ಹಾಕಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುಟುಂಬ ನಿರ್ವಹಣೆ ಜೊತೆ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು. ಪೂರ್ಣಾ ಪಾಟೀಲ ಮಾತನಾಡಿ, ಜನಪದರಜೀವನದ ಸಮಗ್ರ ಚಿತ್ರಣವೇಜಾನಪದ ಸಾಹಿತ್ಯದಲ್ಲಿದೆ.ಕುಟ್ಟುವಾಗ, ಬೀಸುವಾಗ, ಮದುವೆ ಸಮಾರಂಭದಲ್ಲಿ ತವರು ಮನೆ ಸಿರಿ ಹೆಣ್ಣುಮಕ್ಕಳ ಹಬ್ಬದ ಹಾಡುಗಳ ನೈಜ ಚಿತ್ರಣಗಳಿವೆ. ಜೀವನದ ನೈಜತೆಯೇ ಜಾನಪದದಲ್ಲಿದೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಡಾ. ಹನಮಂತ ಡಂಬಳ ಮಾತನಾಡಿ, ಜಯಶ್ರೀ ಗುತ್ತಲ ಇಂದು ಭೌತಿಕವಾಗಿ ಇಲ್ಲದಿದ್ದರೂ ಎಸ್‌.ಬಿ. ಗುತ್ತಲ ಅವರು ದತ್ತಿ ಇಡುವ ಮೂಲಕ ಅವರನ್ನು ಸ್ಮರಿಸುತ್ತಾ ಜೀವಂತವಾಗಿರಿಸಿದ್ದಾರೆ.ಜಯಶ್ರೀ ಗುತ್ತಲ ಅವರು ಸಂಗೀತ ಪರಂಪರೆಯಿಂದ ಬಂದವರಾಗಿದ್ದಾರೆ. ಹೀಗಾಗಿ ಜಾನಪದದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಸ್ಪರ್ಧೆಯಲ್ಲಿ ಒಟ್ಟು 36 ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಹುಬ್ಬಳ್ಳಿಯ ವಾಗ್ಗೇವಿ ಮಹಿಳಾ ಮಂಡಳದವರು ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದುಕೊಂಡು 2025ರ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿ ಶ್ರೀಗೌರಿ ಭಜನಾ ಮ೦ಡಳ ಪಡೆದರೆ, ಧಾರವಾಡದರುಕ್ಷಿಣ ಪಾಂಡುರಂಗ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ,ಸತೀಶತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವೀರಣ್ಣಒಡ್ಡಿನ, ಡಾ.ಜಿನದತ್ತ ಹಡಗಲಿ, ಶ್ರೀಧರ ಕುಲಕರ್ಣಿ ಇದ್ದರು.

About Author: