COVID-19 Resources for Mental Health Coaches... Learn More

0836-2773878

“ಒತ್ತಡ ನಿವಾರಣೆ ಎಲ್ಲರ ಹೊಣೆ ಮನಸ್ಸಿಗೂ ಬೇಕು ರಕ್ಷಣೆ”


ಒತ್ತಡ. ಈ ಮೂರಕ್ಷರ ಇಂದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಒಬ್ಬೊಬ್ಬರದು ಒಂದು ರೀತಿಯ ಒತ್ತಡ. ಕೆಲವರು ಸಹಿಸಿಕೊಂಡರೆ ಇನ್ನು ಹಲವರು ಇದರ ಹೊಡೆತಕ್ಕೆ ಸಿಕ್ಕು ಬಳಲುತ್ತಾರೆ. ದಿಕ್ಕು ತೋಚದಂತಾಗುತ್ತಾರೆ. ಅಂದುಕೊಂಡದ್ದನ್ನು ಸಾಧಿಸಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಇಂದಿನ ಯುವಪೀಳಿಗೆ ಹಲವು ಒತ್ತಡಗಳಿಗೆ ಒಳಗಾಗುತ್ತಿದೆ. ವಾಸ್ತವದಲ್ಲಿ ಹೇಳುವುದಾದರೆ ಇದು ಬಲು ಅಪಾಯಕಾರಿ. ಇದು ವ್ಯಕ್ತಿಯ ಜೀವ ತೆಗೆಯುವ ಮಟ್ಟಕ್ಕೆ ಬಂದಿದೆ ಎಂದರೆ ತಪ್ಪಾಗದು. ಈ ಅಪಾಯಕಾರಿ ಬೆಳವಣಿಗೆ ಮನಗಂಡು ಸುಪ್ರೀಂಕೋರ್ಟ್ ಇತ್ತೀಚೆಗೆ ಕೆಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ. ಆದರೆ ಇವುಗಳ ಕಟ್ಟುನಿಟ್ಟಿನ ಅನುಷ್ಠಾನ ಇಂದಿನ ತುರ್ತು ಅಗತ್ಯವಾಗಿದೆ. ಈಗೇಕೆ ಸುಪ್ರೀಂ ಚಾಟಿ ಬೀಸಿದೆ ಎಂಬ ಪ್ರಶ್ನೆ ನಿಮಗೆ ಎದುರಾಗ ಬಹುದು. ಅದಕ್ಕೆ ಕಾರಣವಿದೆ. ಕಳೆದ ವರ್ಷ ಆಂಧ್ರಪ್ರದೇಶದ ಖಾಸಗಿ ಕೋಚಿಂಗ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಯೊಬ್ಬ ಟೆರೆಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಆ ವಿದ್ಯಾರ್ಥಿಯ ತಂದೆ ಮಗನ ಸಾವಿನ ತನಿಖೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ. ಮಗ ಎದುರಿಸುತ್ತಿದ್ದ ಮಾನಸಿಕ ಒತ್ತಡವನ್ನು ಮನೋವೈದ್ಯರ ಭೇಟಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ತಜ್ಞರನ್ನು ನೇಮಿಸಿಕೊಳ್ಳುವಂತೆ ತಾಕೀತು ಮಾಡಿದೆ. ಅಂಕಗಳಿಕೆಯೊಂದೇ ಜೀವನದ ಉದ್ದೇಶವಲ್ಲ ಅಥವಾ ಯಶಸ್ಸಿನ ಮಾನದಂಡವಲ್ಲ. ಜೀವ ಇದ್ದರೆ ಜೀವನ. ಚೆನ್ನಾಗಿ ಬದುಕಬೇಕು. ಅಂದುಕೊಂಡಿದ್ದು ಆಗಲಿಲ್ಲ ಎಂದರೆ ಪರ್ಯಾಯ ಹುಡುಕಬೇಕು. ಒತ್ತಡಕ್ಕೆ ಸಿಲುಕಿ ಹೇಡಿಯಂತೆ ಸಾವಿನ ಹಾದಿ ತುಳಿಯಬಾರದು ಎಂಬ ಕಳಕಳಿಯೊಂದಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ವಿದ್ಯಾರ್ಥಿ ಸಮೂಹವಿಂದು ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿ ಎದುರಿಸಲು ಇನ್ನಿಲ್ಲದ ಕಸರತ್ತು ಮಾಡಲು ಹೊರಟಂತಿದೆ. ಗುರಿಯ ಬೆನ್ನೇರಿ ಒತ್ತಡಕ್ಕೆ ಸಿಲುಕಿ ಆರೋಗ್ಯಕ್ಕೆ ಧಕ್ಕೆ ತಂದುಕೊಳ್ಳುತ್ತಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಅಂಕಗಳಿಕೆ ಪ್ರಮುಖವಾಗಿ ಬಿಟ್ಟಿದೆ. ಗರಿಷ್ಠ ಅಂಕ ಪಡೆದು ಮೆರಿಟ್ ಮೂಲಕ ಉನ್ನತ ವ್ಯಾಸಂಗದ ಸೀಟುಗಳನ್ನು ಪಡೆಯುವ ಅನಿವಾರ್ಯತೆಗೆ ಸಿಲುಕಿರುವ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದು ಶೈಕ್ಷಣಿಕ ಒತ್ತಡ. ಇದು ಈಡೇರದಿದ್ದಾಗ ಆಗುವುದು ಮಾನಸಿಕ ಒತ್ತಡ. ಎಲ್ಲಿ ಸಮಾಜದಲ್ಲಿ ನೆಂಟರಿಷ್ಟರ ಎದುರು ಕೀಳಾಗಿ ಕಾಣುವೆನೋ? ಎಲ್ಲಿ ನನ್ನ ಅಪಹಾಸ್ಯ ಮಾಡುವರೋ? ಎಂಬ ಮಾನಸಿಕ ಕೋಭೆ ಕಾಡಲಾರಂಭಿಸುತ್ತದೆ. ಇದರ ಜತೆಗೆ ನಿದ್ರೆಗೆಟ್ಟು ಓದುವುದು, ಆಹಾರ ಮತ್ತು ಒಂದು ವರ್ಗಕ್ಕೆ ಸೀಮಿತವಲ್ಲ. ಉದ್ಯೋಗಸ್ಥರಿಗೂ ಇದು ಬಿಟ್ಟಿಲ್ಲ. ಟಾರ್ಗೆಟ್ ರೀಚ್ ಆಗಲು ಹಗಲಿರುಳು ದುಡಿಯುವ ಅನಿವಾರ್ಯತೆ
ಕೂಡ ಹಲವರಲ್ಲಿ ಮಾನಸಿಕ ಕಾಯಿಲೆಗೆ ಕಾರಣವಾಗಿದೆ. ಮೊಬೈಲ್ ಅಥವಾ ಗೆಜೆಟ್‌ಗಳ ಅವಲಂಬನೆ ತೀರಾ ಅನಿವಾರ್ಯ. ಹೆಚ್ಚಿನ ಓದಿಗೆ ಇಂಟರನೆಟ್‌ನಿಂದ ಮಾಹಿತಿ ಪಡೆಯಲು ಬಳಕೆ ತಡೆಯಲಾಗದು. ಆದರೆ ಇದಕ್ಕೂ ಒಂದಿಷ್ಟು ಮಿತಿ ಬೇಕು. ಅತಿಯಾಗಿ ಸ್ಕಿನ್ ನೋಡುವುದು ಕಣ್ಣಿಗೆ ತೊಂದರೆ. ನಂತರ ತಲೆನೋವು ಹೀಗೆ ಒಂದರ ಜತೆ ಒಂದು ಕಾಯಿಲೆಗಳು ಕೋರ್ಟ್ ಗಮನಕ್ಕೆ ತಂದಿದ್ದ. ಇದರಿಂದ ಕಳವಳಗೊಂಡ ಸುಪ್ರೀಂ ಜೀವನಶೈಲಿಯಲ್ಲೂ ನಿಸರ್ಗಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಸದ್ದಿಲ್ಲದೇ ನಮ್ಮನ್ನು ಆವರಿಸುತ್ತವೆ. ಹದಿಹರೆಯದವರಿಗೆ ಕನಿಷ್ಠ ಇದು ಇಡೀ ವಿದ್ಯಾರ್ಥಿ ಸಮೂಹ ಎದುರಿಸುತ್ತಿರುವ ಸಾರ್ವತ್ರಿಕ ಸಮಸ್ಯೆ ಎಂದು ಪರಿಗಣಿಸಿ ಆಪ್ತ ಸಮಾಲೋಚನೆ, ಆಗಾಗ ಕೂಡ ಒತ್ತಡದ ಒಂದು ಭಾಗವೇ. ಇದಕ್ಕೆಲ್ಲ ಪರಿಹಾರ ಇಲ್ಲವೆಂದಲ್ಲ, ಇದೆ. ಆದರೆ ಅದನ್ನು ಸರಿಯಾಗಿ ಜಾರಿಗೆ ತರಬೇಕಷ್ಟೇ. ಒತ್ತಡ ಕೇವಲ 6 ರಿಂದ 8 ತಾಸು ನಿದ್ರೆ ಅತ್ಯಗತ್ಯ. ಇದು ತಪ್ಪಿದಲ್ಲಿ ಆರೋಗ್ಯದಲ್ಲಿ
ಏರುಪೇರು ಖಚಿತ. ಗಂಟೆಗಟ್ಟಲೇ ಕುಳಿತಲ್ಲೇ ಕುಳಿತುಕೊಳ್ಳುವುದು, ಊಟ ಮಾಡುತ್ತಾ ಓದುವುದು ಇವೆಲ್ಲ ಬಾಧಿಸದೇ ಇರದು. ಇನ್ನು ಬಂಧು ಬಳಗ, ಸ್ನೇಹಿತರು, ಆಪ್ತರೊಡನೆ ಬೆರೆಯುವುದು ಕೂಡ ಅಷ್ಟೇ ಪ್ರಮುಖ. ಭಾವನೆಗಳನ್ನು ಹಂಚಿಕೊಂಡಾಗ, ಎಲ್ಲರೊಡನೆ ಬೆರೆತು ನಕ್ಕು ನಲಿದಾಗ ಮನಸ್ಸು ಹಗುರವಾಗುತ್ತದೆ. ಒತ್ತಡ ತನ್ನಿಂತಾನೆ ಮಾಯವಾಗುತ್ತದೆ. ಭಾವನಾತ್ಮಕ ನಿಯಂತ್ರಣ ಬಲು ಅಪಾಯಕಾರಿ. ನ್ಯಾಷನಲ್ ಇನ್ನಿಟ್ಯೂಟ್ ಆಫ್ ಹೆಲ್ತ್ನ ಡೆಸಿದ ಸಂಶೋಧನೆ ಪ್ರಕಾರ ಬಹುಪಾಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒತ್ತಡದಲ್ಲಿ ಸಿಲುಕಿದ್ದಾರೆ. ಶಿಕ್ಷಕರು ಪಠ್ಯಕ್ರಮದ ಒತ್ತಡಕ್ಕೆ ಸಿಲುಕಿದ್ದಾರೆ. ಅತಿಯಾದ ಹೋಮ್ ವರ್ಕ್ ಹೊರೆ ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತದೆ. ಪಾಲಕರಿಗೂ ಈ ಒತ್ತಡ ತಪ್ಪಿದ್ದಲ್ಲ. ಪಾಲಕರಪ್ರತಿಷ್ಠೆ ಮತ್ತು ನಿರೀಕ್ಷೆಯ ಭಾರಕ್ಕೆ ಹಲವು ವಿದ್ಯಾರ್ಥಿಗಳು ಇಂದು ನಲುಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಸ್ತರದ ವಿದ್ಯಾರ್ಥಿಗಳು, ಯುವಕರು ಒತ್ತಡದಿಂದ ಹೊರಬರಬೇಕು. ಬದುಕು ಎಷ್ಟು ಸುಂದರವಾಗಿದೆ ಎಂದರಿತು ಅದನ್ನು ಆಸ್ವಾದಿಸಬೇಕು. ಹಾಗೆಂದು ಸ್ವಚ್ಛಂದವಲ್ಲ. ಶಿಸ್ತು ಮತ್ತು ಆರೋಗ್ಯಯುತ ಜೀವನಶೈಲಿ ನಮ್ಮದಾಗಬೇಕು. ಆಗ ಒತ್ತಡವೂ ಖಿನ್ನತೆಯೂ ಇರುವುದಿಲ್ಲ. ಕಠಿಣ ಪ್ರಯತ್ನ ಧನಾತ್ಮಕ ಚಿಂತನೆಗಳಿಂದ ಸಿಗುವ ಯಶಸ್ಸನ್ನು ಸಾಧನೆ ಎನ್ನುತ್ತಾರೆ. ಪ್ರಯತ್ನಗಳಿಲ್ಲದೆ ಸಿಗುವ ಯಶಸ್ಸನ್ನು ಅದೃಷ್ಟ ಎನ್ನುತ್ತಾರೆ. ಹಾಗಾಗಿ ಅದೃಷ್ಟದ ಯಶಸ್ಸಿಗಿಂತ ಸತತ ಪ್ರಯತ್ನದ ಯಶಸ್ಸು ನಮ್ಮದಾಗಲಿ.

About Author:

Leave Your Comments

Your email address will not be published. Required fields are marked *