COVID-19 Resources for Mental Health Coaches... Learn More
“ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ: ಡಾ|ಪಾಂಡುರಂಗಿ”


ಉಪ್ಪಿನಬೆಟಗೇರಿ: ಪತ್ರಿಕಾ ದಿನಾಚರಣೆಯಲ್ಲಿ ಕುಮಾರ ವಿರೂಪಾಕ್ಷ ಶ್ರೀ,ಡಾ|ಆನಂದ ಪಾಂಡುರಂಗಿ, ಡಾ।ಬಸವರಾಜ ಹೊಂಗಲ್‌ರನ್ನು ಸನ್ಮಾನಿಸಲಾಯಿತು.
ಇಂದಿನ ಆಧುನಿಕ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿ ದ್ದು, ಯುವ ಪೀಳಿಗೆಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಖ್ಯಾತ ಮನೋವೈದ್ಯ ಡಾ|ಆನಂದ ಪಾಂಡುರಂಗಿ ಹೇಳಿದರು. ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಪವೂ ಮಹಾವಿದ್ಯಾಲಯದ ಸಭಾಭವನ ದಲ್ಲಿ ಉಪ್ಪಿನಬೆಟಗೇರಿ ಪತ್ರಕರ್ತರ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ-2025, ಉಪನ್ಯಾಸ, ಗೌರವ ಸನ್ಮಾನ ಹಾಗೂ ನಿಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ‘ವ್ಯಕ್ತಿತ್ವ ವಿಕಸನದಲ್ಲಿ ಮಾಧ್ಯಮಗಳ ಸದ್ಬಳಕೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಜೀವನದಲ್ಲಿ ಸಾಧನೆ ಮಾಡುವ ಇಚ್ಚಾಶಕ್ತಿ ಇದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಿದೆ ಎಂದರು. ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಪತ್ರಕರ್ತ ಶ್ರೀಶೈಲಯ್ಯ ಗೌರಿಮಠ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಹೊಂಗಲ ಮಾತನಾಡಿದರು.
ದೈಹಿಕ-ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮೊಬೈಲ್ ಬೆಂಕಿ ಇದ್ದಹಾಗೆ ಅದನ್ನು ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿದರೆ ಒಳಿತು. ಇಲ್ಲವಾದರೆ ಅದರಿಂದ ಕೇಡಾಗಲಿದೆ. ಕುಮಾರ ವಿರೂಪಾಕ್ಷಶ್ರೀ ಮಾತನಾಡಿದರು. ಮಾಜಿ ಶಾಸಕಿ ಸೀಮಾ ಮಸೂತಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಪಂ ಮಾಜಿ ಸದಸ್ಯ ಕಲ್ಲಪ್ಪಪುಡಕಲಕಟ್ಟಿ ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಜಿ.ಆರ್. ಜವಳಗಿ, ಗ್ರಾಪಂ ಅಧ್ಯಕ್ಷ ಬಶೀರ ಅಡ್ಡದ ಮಾಳಗಿಮನಿ ವಿದ್ಯಾದಾನ ಸಮಿತಿ ಆಡಳಿತ ಮಂಡಳಿ ಚೇರಮನ್ ವೀರಣ್ಣ ಪರಾಂಡೆ, ರಾಮಲಿಂಗಪ್ಪ ನವಲಗುಂದ, ಮಂಜುನಾಥ ಸಂಕಣ್ಣವರ, ಡಾ|ಎನ್. ಎಸ್. ಗಚ್ಚಿನಮಠ, ಮತ್ತುಮಹುಸೇನ ಲಂಗೋಟಿ, ನಿಜಗುಣಿ ಹೂಲಿ, ಪತ್ರಕರ್ತರಾದ ಶಶಿಧರ ಬುದ್ದಿ ಶಿವಪ್ರಭು ಈಸರಗೊಂಡ, ಚನ್ನಬಸಪ್ಪಲಗಮಣ್ಣವರ, ರಮೇಶ ಓರಣಕರ ಇದ್ದರು. ಪತ್ರಕರ್ತ ಪ್ರವೀಣ ಓಂಕಾರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಚ್. ಎಂ.ಸನದಿ ಸ್ವಾಗತಿಸಿದರು. ರಮೇಶ ಮಡ್ಡಿಕಾರ ನಿರೂಪಿಸಿದರು. ಪತ್ರಕರ್ತ ಪ್ರಕಾಶ ಹೂಗಾರ ವಂದಿಸಿದರು.













https://publicnext.com/news/district/hubballi-dharwad/education/kn/dharwad-students-need-value-based-education-dr-anand-pandurangi-1163926 Download the App and know your city news – https://bit.ly/3Q6wmrW