COVID-19 Resources for Mental Health Coaches... Learn More
ಅಭಿನಯ ಭಾರತಿ ಧಾರವಾಡ ಮಾಸಿಕ ದತ್ತಿ ಯೋಜನೆಯ ದ್ವಿತೀಯ ಉಪನ್ಯಾಸ ಮಾಲಿಕೆ
ಅಭಿನಯ ಭಾರತಿ ಧಾರವಾಡ ಮಾಸಿಕ ದತ್ತಿ ಯೋಜನೆಯ ದ್ವಿತೀಯ ಉಪನ್ಯಾಸ ಮಾಲಿಕೆ ಧಾರವಾಡ : ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಯುವಪೀಳಿಗೆಯು ಮಾನವೀಯ ಅಂತಃಕರಣದ ಕುಟುಂಬ ಸಂಬಂಧಗಳನ್ನೇ ಮರೆತು ಮೊಬೈಲ್ ಟಿವಿ ಮುಂತಾದ ಪ್ರಭಾವಿ ಮಾಧ್ಯಮಗಳ ಬಲಿಯಾಗುತ್ತಿದ್ದಾರೆ. ಶಕ್ತಿಶಾಲಿ ರಂಗಭೂಮಿಯು ಸಾಧನವಾಗಿದ್ದು ನಮ್ಮ ಮಕ್ಕಳು ಹಾಗೂ ಯುವ ಪೀಳಿಗೆಯಲ್ಲಿ ಸಕಾರಾತ್ಮಕ ಸೃಜನಶೀಲತೆ ಶಕ್ತಿಯ ಬೀಜವನ್ನು ಬಿತ್ತಿ, ಮಾನಸಿಕ ಕ್ಷೇಶಗಳನ್ನು ಮರೆತು, ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬಲ್ಲದು, ಎಂದು ಪ್ರಸಿದ್ಧ ಮನ.: ಶಾಸ್ತ್ರಜ್ಞ ಡಾ. ಆನಂದ್ ಪಾಂಡುರಂಗಿ ಅವರು ಅಭಿನಯ ಭಾರತಿಯ ಮಾಸಿಕ ದತ್ತಿ ಯೋಜನೆಯ ದ್ವಿತೀಯ ಉಪನ್ಯಾಸ ಮಾಲಿಕೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ತಿಳಿಸಿದರು.
ಮನೋಹರ ಗ್ರಂಥ ಮಾಲೆಯ ಸಹಯೋಗದಲ್ಲಿ ಅಟ್ಟದಲ್ಲಿ ನಡೆದ ಎರಡನೇ ದತ್ತಿ ನಿಧಿಯನ್ನು ಡಾ. ಸತೀಶ್ ಇರಕಲ್ ಅವರು ತಮ್ಮ ತಾಯಿ ಪುಷ್ಪಾ ಇರಕಲ್ ಅವರ ಸ್ಮರಣಾರ್ಥ ನೀಡಿದ್ದು ಅವರ ಸಾಮಾಜಿಕ ಕಳಕಳಿ ಹಾಗೂ ಸ್ತ್ರೀ ಪರ ನಿಲುವಿನ ಚಟುವಟಿಕೆಗಳನ್ನು ಡಾ. ವಿನಾಯಕ್ ನಾಯಕ ಅವರು ತಮ್ಮ ಪ್ರಾಸ್ತಾವಿಕ ಸ್ವಾಗತದ ನುಡಿಗಳಲ್ಲಿ ಕೊಂಡಾಡಿದರು. ಅನಂತರ ನಡೆದ ಅರ್ಥಪೂರ್ಣ ಚರ್ಚೆಯಲ್ಲಿ ರಂಗಭೂಮಿಯ ಸಮಕಾಲೀನ ಚಿಂತನೆ ಆರ್ಥಿಕ ಸಾಮಾಜಿಕ ಹಾಗೂ ಐತಿಹಾಸಿಕ ಬೆಳವಣಿಗೆಗಳನ್ನು ಬಿಂಬ- ಪ್ರತಿಬಿಂಬಗಳಾಗಿ ಪ್ರತಿಫಲಿಸಿ, ಮನೆ ದೇವ-ದಾನವ ಯುದ್ಧದ ಒಳಿತು ಕೆಡಕುಗಳ ಸಂಘರ್ಷದ ಮಂಥನದಲ್ಲಿ ಹುಟ್ಟಿದ “ಪಂಚಮ ವೇದ’ವೆನಿಸಿದ ರಂಗಭೂಮಿಯು ಸಮಾಜಕ್ಕೆ ಉತ್ತಮ D ಅಭಿನಯ ಭಾರತಿ (ರಿ), ಧಾರವಾಡ ಶ್ರೀಮತಿ ಪುಷ್ಪಾ ವಾಯ್ ಇರಕಲ್ ಸ್ಮರಣಾರ್ಥ ದತ್ತಿ ಉಪನ್ಯಾಸ ದಾನಿಗಳು : ಡಾ ಶ ಇರಕಲ್ GRANTHA Song Parver ಮನಗಳಲ್ಲಿ ಶಾಂತಿ ಸೌಹಾರ್ದತೆ ಗಳನ್ನು ಮೂಡಿಸಿ ತನ್ಮೂಲಕ ಜಾಗತಿಕ ಶಾಂತಿಗಾಗಿ ಸದ್ಭಾವನಾ ವಾತಾವರಣವನ್ನು ಮೂಡಿಸಬಲ್ಲದು. ಎಂದು ಹಿರಿಯರಂಗ ಕರ್ಮಿ ಹಾಗೂ ಸಾಹಿತಿಗಳಾದ ಹರ್ಷ ಡಂಬಳ, ಆನಂದ್ ಝಂಝರವಾಡ, ಪ್ರೊ ಅರವಿಂದ್ ಯಾಳಗಿ,ಡಾ, ವಾಣಿ ಇರಕಲ್ ಇವರು ಚರ್ಚೆಯಲ್ಲಿ ಭಾಗವಹಿಸಿ ದ್ದರು. ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ಅರವಿಂದ ಕುಲಕರ್ಣಿ ಅವರು ಮಾತನಾಡುತ್ತ ಔಷಧಿ ನೀಡಬಲ್ಲದು ಎಂದರು ಅದಕ್ಕಾಗಿ ಅಭಿನಯ ಭಾರತಿಯ ಸಾಮಾಜಿಕ ಕಳಕಳಿಯ ಚಟುವಟಿಕೆಗಳಿಗೆ ರಂಗಾಸಕ್ತರು ಆರ್ಥಿಕ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಸಂಚಾಲಕ ಸಮೀರ್ ಜೋಶಿ ಅವರು ಕಾರ್ಯಕ್ರಮ ಸಂಘಟಿಸಿದ್ದರು ಜಯತೀರ್ಥ ಜಹಗೀರದಾರ ಅವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂದಿಸಿದರು.