COVID-19 Resources for Mental Health Coaches... Learn More

0836-2773878

ತಾಳ್ಮೆ ಇದ್ದರೆ ಜಾಣೆ ಸಹನೆ ಇದ್ದರೆ ಸಾಧನೆ

‘ನನಗೆ ಇನ್ನು ಸಹಿಸಲು ಸಾಧ್ಯವೇ ಇಲ್ಲ. ನನ್ನ ಸಹನೆಗೂ ಮಿತಿ ಇದೆ. ನನ್ನ ಪ್ರತಿಭೆಗೆ ಬೆಲೆ ಇಲ್ಲವೇ? ಏನೂ ಕೆಲಸ ಗೊತ್ತಿರದವರಿಗೆ ಸಿಗುವ ಮನ್ನಣೆ, ಆದ್ಯತೆ ನನಗೇಕಿಲ್ಲ? ಆಗಿದ್ದು ಆಗಲಿ, ಸಾಕು ಇವರ ಸಹವಾಸ, ಜಗತ್ತು ವಿಶಾಲವಿದೆ.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಲ್ಲಾದರೂ ಬದುಕುವೆ ಎಂಬ ಬೇಸರಯುಕ್ತ ರೋಷಾವೇಶದ ಮಾತುಗಳು ಕೇಳಿ ಬಂದದ್ದು ನನ್ನ ಅತ್ಯಾಪ್ತ ವಲಯದ ವ್ಯಕ್ತಿಯೊಬ್ಬರಿಂದ ಮಾತುಗಳನ್ನು ಕೇಳುತ್ತಿದ್ದಂತೆಯೇ ಎಲ್ಲರಿಗೂ ಅನಿಸುವುದು ಇವು ಹತಾಶೆಯ ಮಾತುಗಳು ಎಂಬುದು. ಅದು ನಿಜವೂ ಹೌದು. ಆ ಮಾತು ಬರಲು ಕಾರಣ ವೃತ್ತಿ ಜೀವನದಲ್ಲಿ ಆತ ಅಂದುಕೊಂಡಂತೆ ಆಗದಿರುವುದು, ಹಾಗಂತ ಆತನ ನಿರೀಕ್ಷೆ, ಬಯಕೆ ಯಾವುದೂ ತಪ್ಪಲ್ಲ. ಆದರೆ ಅದಕ್ಕಿರುವ ಮದ್ದು ಎಂದರೆ ತಾಳ್ಮೆ, ಸಹನೆ, ಪ್ರತಿಯೊಂದು ಕಾಯುವಿಕೆಗೆ ಒಂದು ವೈಶಿಷ್ಟ್ಯವಿದೆ. ಅದಕ್ಕೇ ನಮ್ಮ ಹಿರಿಯರು ‘ತಾಳಿದವನು ಬಾಳಿಯಾನು’ ಎಂದು ಹೇಳುತ್ತಿದ್ದರು. ಈ ಮಾತಿನ ಹಿಂದೆ ಅವರ ಅನುಭವವಿದೆ. ಆ ಅನುಭವದಲ್ಲಿ ಅಮೃತವಿದೆ, ಸತ್ವವಿದೆ, ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಎಲ್ಲವೂ ಇನ್ ಸ್ಟಂಟ್ ಆಗಿ ಆಗಬೇಕು ಎನ್ನುವ ನಿರೀಕ್ಷೆ ಹಲವರದು. ಕ್ಷಿಪ್ರ ಫಲಿತಾಂಶ, ರಾತ್ರೋ ರಾತ್ರಿ ಶ್ರಮವಿಲ್ಲದೇ ಶ್ರೀಮಂತನಾಗಬೇಕೆನ್ನುವ ಆಸೆಯನ್ನು ಇಂದು ಬಹುತೇಕರಲ್ಲಿ ನಾವು ಕಾಣಬಹುದು. ಇದು ಕಾರ್ಯಸಾಧು ಅಲ್ಲ. ನಾನು ಆತನನ್ನು ಕರೆದು ಆರಾಮಾಗಿ ಕೂರಿಸಿಕೊಂಡು ಯಾಕೆ? ಏನಾಗಿದೆ? ಎಂದು ಕೇಳಿದೆ. ಅದಕ್ಕೆ ಆತ ಹೇಳಿದ್ದು ಇಷ್ಟೇ. ನಾನು ನನ್ನ ಕೆಲಸದಲ್ಲಿ ಎಂದೂ ಸೋಮಾರಿತನ ಅಥವಾ ತಪ್ಪು ಮಾಡಿಲ್ಲ. ನನ್ನ ಸಾಮರ್ಥ್ಯದ ಅರಿವು ನನಗಿದೆ. ಆದರೆ ಇದನ್ನು ಗುರುತಿಸುವಲ್ಲಿ ನನ್ನ ಬಾಸ್ ಅಥವಾ ಕಂಪನಿ ಎಡವುತ್ತಿದೆ. ಅನರ್ಹರಿಗೆ ಮಣಿ ಹಾಕುತ್ತಿದೆ. ನನಗೆ ಸಿಗಬೇಕಾದ ಬಡ್ತಿ, ಆರ್ಥಿಕ ಸೌಲಭ್ಯಗಳು ಸಿಗುತ್ತಿಲ್ಲ. ಸುತ್ತಮುತ್ತ ಇದ್ದುಕೊಂಡು + ಹಲೋ ಡಾಕ್ಟರ್ ಡಾ. ಆನಂದ ಪಾಂಡುರಂಗಿ ನ್ನಾಕ ಮನೋವೈದ್ದರು. (0836) 2773878, drpandurangi@yahoo.com ಕಿವಿಕಚ್ಚುವ, ಕೆಲಸ ಬರದಿದ್ದರೂ ಇನ್ನೊಬ್ಬರ ಬಗ್ಗೆ ಚಾಡಿ ಹೇಳುತ್ತ ಹೊಗಳುತ್ತ ಇರುವವರಿಗೆ ಕಾಲ ಕಾಲಕ್ಕೆ ಬಡ್ತಿ, ಸೌಲಭ್ಯ ಎಲ್ಲವೂ ಸುಲಭವಾಗಿ ಸಿಗುತ್ತಿವೆ. ಇದನ್ನು ನನ್ನ ಕಣ್ಣಾರೆ ನೋಡಿಕೊಂಡು ಸುಮ್ಮನಿರಬೇಕಾದ ಅನಿವಾರ್ಯತೆ ನನ್ನದು, ಪ್ರತಿ ವರ್ಷವೂ ಇದೇ ಪುನರಾವರ್ತನೆಯಾಗಹತ್ತಿತು. ಪರಿಣಾಮ ನನ್ನ ಸಹನೆಯ ಕಟ್ಟೆ ಒಡೆದಿದೆ. ಎಷ್ಟು ಅಂತ ಸಹಿಸಿಕೊಳ್ಳಲಿ. ಇನ್ನು ಸುಮ್ಮನಿರಲಾರೆ ಎಂದು ಹೇಳಿದ. ಇದು ಒಂದು ಉದಾಹರಣೆ ಅಷ್ಟೇ ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಕಂಪನಿಗಳಲ್ಲಿ ಅಪ್ರೈಸಲ್ ಕೊಡುವ ಸಮಯದಲ್ಲಿ ಈ ತರಹ ಗೊಣಗುವ ಅಥವಾ ಹತಾರೆ ಮಡುವಿನಲ್ಲಿ ಸಿಲುಕಿ ತೊಳಲಾಡುವವರು ನಮ್ಮ ಮಧ್ಯೆ ಅನೇಕರಿದ್ದಾರೆ. ಅದಕ್ಕೆ ನಾನವನಿಗೆ ಹೇಳಿದೆ. ಭಗದದ್ಗೀತೆಯಲ್ಲಿ ಕೃಹ ಪರಮಾತ್ಮ ಮತ್ತು ನಮ್ಮ ನಾಡಿನ ಹಿರಿಯ ಶರಣರು, ಅನುಭಾವಿಗಳು ಹೇಳಿದಂತೆ ಸಮಯಕ್ಕೆ ಮುಂಚೆ ಏನೂ ಸಿಗದು. ಮತ್ತೆ ಇಂಥದ್ದೇ ಸಿಗಬೇಕು ಎನ್ನುವ ಹಠ ಸಲ್ಲದು. ಹಾಗಂತ ನಿರೀಕ್ಷೆ ತಪ್ಪಲ್ಲ. ಅದು ಮನುಷ್ಯನ ಸಹಜ ಗುಣ, ಬಯಸಿದ್ದು ಬಯಸಿದಾಗ ಸಿಗದೇ ಹೋದಾಗ ಹತಾಶೆ, ಆಕ್ರೋಶ ಮಾಮೂಲು, ಪ್ರಾಮಾಣಿಕ ದುಡಿಮೆ ಮತ್ತು ಕ್ರಮ ನಿರಂತರ ಇರಬೇಕು. ಈ ವೇಳೆ ದುಡುಕಿನ ನಿರ್ಧಾರವನ್ನೇನಾದರೂ ಕೈಗೊಂಡರೆ ಆಗುವ ಅನಾಹುತ ನಿನಗೆ ಹೊರತು ಬಾಸ್ ಗೋ ಅಥವಾ ಕಂಪನಿಗಲ್ಲ. ಅದಕ್ಕೆ ನಿಷ್ಕಾಮ ಕರ್ಮ ಮಾಡುತ್ತಿರಬೇಕು. ಕಾಲ ಕೂಡಿ ಬಂದಾಗ ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇನ್ನೇನು ಅನ್ಯ ದಾರಿಯೇ ಇಲ್ಲ ಎನ್ನುವ ಹಂತ ತಲುಪಿದಾಗ ಸೂಕ್ತ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ನಿನ್ನದಾಗಬೇಕು. ದುಡುಕು ಕೆಡಿಸೀತು ಬದುಕು ಎಂಬುದು ಬಲು ಮಾರ್ಮಿಕ ಮತ್ತು ಅರ್ಥಗರ್ಭಿತ, ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಬೇಕೆಂದರೆ ತಾಳ್ಮೆ ಮತ್ತು ಸಹನೆ ಎರಡೂ ಅತ್ಯವಶ್ಯ, ಕಷ್ಟದಲ್ಲಿ ತಾಳ್ಮೆ ಮತ್ತು ನಷ್ಟದಲ್ಲಿ ಸಹನೆ ಇದಲ್ಲಿ ಯಶಸ್ಸು ಹುಡುಕಿಕೊಂಡು ಬರುತ್ತದೆ. ಕಷ್ಟಕರ ಪ್ರಸಂಗಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದು ದೌರ್ಬಲ್ಯದ ಸಂಕೇತವಲ್ಲ. ತಾಳ್ಮೆ ಇಲ್ಲದಿದ್ದರೆ ನಿರೀಕ್ಷಿತ ಫಲ ದೊರಕುವುದಿಲ್ಲ. ಹೇಗೆ ಕೃಷಿಯಲ್ಲಿ ಬೀಜ ಬಿತ್ತಿ ಉತ್ತೆ ಬೆಳೆ ಬರುವವರೆಗೆ ಕಾಯುತ್ತೇವೆಯೋ ಹಾಗೆ ಜೀವನದ ಕೃಷಿಯಲ್ಲೂ ಕಾಯಬೇಕು. ಕಾಲ ಪಕ್ವವಾದಾಗ ಎಲ್ಲವೂ ಅರಸಿ ಬರಲಿದೆ. ಇದೊಂದು ಅತ್ಯಮೂಲ್ಯ ಸಂಪತ್ತು. ಕಳೆದುಕೊಂಡರೆ ತಪ್ಪಿದ್ದಲ್ಲ ಆಪತ್ತು. Hubli Edition

About Author:

Leave Your Comments

Your email address will not be published. Required fields are marked *