COVID-19 Resources for Mental Health Coaches... Learn More

0836-2773878

“ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಗೌರವ”

ಅಂಕಗಳು ಮುಖ್ಯ, ಅಂಕಗಳೇ ಜೀವನವಲ್ಲ..! ಧಾರವಾಡ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ಅಂಕಗಳು ಮುಖ್ಯ. ಆದರೆ, ಅಂಕಗಳೇ ಜೀವನವಲ್ಲ ಅಂಕ ಪಡೆಯುವ ಉದ್ದೇಶದಿಂದ ಓದುವದಕ್ಕಿಂತ ಜ್ಞಾನ ವೃದ್ಧಿಗಾಗಿ ಓದಬೇಕು ಎಂದು ಮನರೋಗ ತಜ್ಞ ಡಾ.ಆದಿತ್ಯ ಪಾಂಡುರಂಗಿ ಹೇಳಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಂಭ್ರಮ ಪ್ರೇರಣಾ ಕಾರ್ಯಾಗಾರದಲ್ಲಿ ಪರೀಕ್ಷೆಗೆ ಮಾನಸಿಕವಾಗಿ ಹೇಗೆ ಸಿದ್ಧವಾಗಬೇಕು ಎಂಬ ವಿಷಯ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರು, ಪಾಲಕರು, ಸ್ನೇಹಿತರು ಪ್ರಮುಖ ಪಾತ್ರ ವಹಿಸಲಿದ್ದು, ಅವರಿಗೆ ಯಶಸ್ಸಿನ ದಾರಿ ತೋರಿಸಬೇಕು ಎಂದರು.

ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಮತ್ತೊಬ್ಬರಿಗೆ ಹೋಲಿಕೆ ಮಾಡಿಕೊಳ್ಳುವುದು ತಪ್ಪು ತಮ್ಮದೇ ಗುರಿ, ದಾರಿಯಲ್ಲಿ ನಡೆದರೆ ಉತ್ತಮ ಯಶಸ್ಸು ಪಡೆಯಲು ಸಾಧ್ಯ ಎಂದ ಅವರು, ಓದಲು ಅಥವಾ ಗುರಿ ಸಾಧಿಸಲು ಸೌಲಭ್ಯಗಳ ಕೊರತೆ ಸೇರಿದಂತೆ ನೆಪಗಳನ್ನು ಡಾ. ಅದಿತ್ಯ ಪಾಂಡುರಂಗಿ ಮಾತನಾಡಿದರು. ಹೇಳದೇ, ಮತ್ತೊಬ್ಬರನ್ನು ಕಾರಣ ಮಾಡದೇ. ವೈಯಕ್ತಿಕ ಸಮಸ್ಯೆಗಳನ್ನು ಗುರಿ ಮಾಡದಿರುವುದು ಒಳಿತು. ವಿದ್ಯಾರ್ಥಿಗಳು ತಮ್ಮನ್ನೇ ತಾವು ಮತ್ತೊಬ್ಬರಜತೆಗೆ ಹೋಲಿಕೆ ಮಾಡಿಕೊಳ್ಳಬಾರದು. ಓದಿನಲ್ಲಿ ಬದ್ಧತೆ, ಸಕಾರಾತ್ಮಕ ಚಿಂತನೆ, ಸಂತೋಷದ ಓದು ಅಗತ್ಯ. ವಿದ್ಯಾರ್ಥಿಗಳು ಕೆಲಸವನ್ನು ನಾಳೆಗೆ ಮುಂದೂಡದೇ ಇವತ್ತಿನ ಓದು, ಕೆಲಸವನ್ನು ಅಂದೇ ಮಾಡುವುದು ಒಳತು ಎಂದರು.

About Author:

Leave Your Comments

Your email address will not be published. Required fields are marked *