COVID-19 Resources for Mental Health Coaches... Learn More

0836-2773878

“ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ಮಾನಸಿಕ ಅರೋಗ್ಯ ಕುರಿತಾದ ಜಾಗೃತಿ ಕಾರ್ಯಕ್ರಮ”

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಳಕಿ ಅವರೊಳ್ಳಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಪೂಜ್ಯ ಲಿಂಗಕ್ಯ ಶ್ರೀ ಶಾಂಡಿಲ್ಯ ಮಹಾಸ್ವಾಮಿಗಳ ಪುಣ್ಯರಾಧನೆ ಪ್ರಯುಕ್ತ ಇವತ್ತು ಆಯೋಜಿಸಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ಮಾನಸಿಕ ಅರೋಗ್ಯ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಇವತ್ತು ಡಿಮ್ಹಾನ್ಸ್, ಸಂಸ್ಥೆಯ ಮನೋವೈದ್ಯರಾದ ಡಾ. ಆದಿತ್ಯ ಪಾಂಡುರಂಗಿ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ ಶ್ರೀ ಪ್ರಶಾಂತ ಪಾಟೀಲ್ M. Phil ವಿದ್ಯಾರ್ಥಿ ಯತೀಶ್ ಭಾರಧ್ವಜ, ಟೆಲಿಮನಸ ಯೋಜನೆಯ ಆಪ್ತಶಮಾಲೋಚಕರಾದ ಶ್ರೀ ಯೋಗೇಶ್ ಇವರು ಭಾಗವಹಿಸಿ ಜನರಲ್ಲಿ ಮಾನಸಿಕ ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸುವುದರ ಜೊತೆಗೆ ಶಿಬಿರದಲ್ಲಿ ಸುಮಾರು 100 ಜನರಿಗೆ ಚಿಕಿತ್ಸೆಯನ್ನು ಮತ್ತು ಔಷಧಿಯನ್ನು ವಿತರಿಸಿದರು. ಈ ಕಾರ್ಯಕ್ರಮ ದಲ್ಲಿ ಖಾನಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಜನರಿಗೆ ಪ್ರಯೋಜನವಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಬೈಲಹೊಂಗಲ ಶಾಸಕರು ಮತ್ತು ಅರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.

About Author:

Leave Your Comments

Your email address will not be published. Required fields are marked *