COVID-19 Resources for Mental Health Coaches... Learn More
“ಮಕ್ಕಳ ಜೀವನದಲ್ಲಿ ಒತ್ತಡವಿಲ್ಲದ ಬೆಳವಣಿಗೆ – ಡಾ. ಆನಂದ ಪಾಂಡುರಂಗಿಯ ಮನವಿ”

ಅಂಕಗಳು ಮಕ್ಕಳ ಪ್ರತಿಭೆ ಅಳತೆಗೋಲಲ್ಲ. ಅಂಕಗಳ ಹೊರತು, ಬದುಕಿನಲ್ಲಿ ವಿಶೇಷ ಸಾಧನೆ ಮೂಲಕ ಸಮಾಜ ಬೆಳಗಲಿದ್ದಾರೆ ಎಂದು ಮನೋವೈದ್ಯ ಡಾ.ಆನಂದ ಪಾಂಡುರಂಗಿ ಹೇಳಿದರು. ನಗರದ ಆಕಾಶವಾಣಿ ಕೇಂದ್ರದ ಶಾಲ್ಮಲಾ ಸಭಾಂಗಣದಲ್ಲಿ ಆಕಾಶವಾಣಿ ಸಾರ್ಥಕ 75 ವರ್ಷಗಳ ಸುವರ್ಣ ಸಂಭ್ರಮದ ಹಿನ್ನಲೆ ನಡೆದ ಸುಬೋಧ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧಕ ಬದುಕಿನ ಕಡೆಗೆ ಗಮನಹರಿಸುವುದು ಹಾಗೂ ಮಕ್ಕಳನ್ನು ಸಮಾಜದ ಸಂಪತ್ತಾಗಿಸಲು ಪಾಲಕರು ಮಹತ್ವದ ಹೊಣೆ ನಿಭಾಯಿಸಬೇಕು. ಅವರನ್ನು ಸನ್ಮಾರ್ಗದತ್ತ ನಡೆಸಬೇಕು ಎಂದು ಸಲಹೆ ನೀಡಿದರು.
ಶಾಲಾ-ಕಾಲೇಜಿನಲ್ಲಿ ಮಕ್ಕಳ ಆಪ್ತಸಮಾಲೋಚನೆ ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳು ಅಪರಿಮಿತ ಮಕ್ಕಳ ಮೇಲೆ ಒತ್ತಡ ಹೆಚ್ಚಿದೆ. ಈ ಬಾರ ತಗ್ಗಿಸುವ ಕೆಲಸ ಮಾಡಬೇಕಿದೆ ಎಂದು .
ಆಕಾಶವಾಣಿ ಕೇಂದ್ರ ನಿರ್ದೇಶಕ ಶರಣಬಸವ ಚೋಳಿನ, ಸುಬೋಧ ಕಲಿಕಾ ಸಮಾಲೋಚನೆ ಕಳೆದ ಎರಡು ವರ್ಷದಿಂದ ನಡೆಯುತ್ತಿದ್ದು, ಸಾಮಾಜಿಕ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಶತಾಯುಷಿ ಬಸನಗೌಡ ಧರ್ಮಗೌಡರ, ಸಂಗಪ್ಪ ಕೆಲೂರ, ವೀರನಾರಾಯಣ ಕುಲಕರ್ಣಿ, ಜ್ಯೋತಿರ್ಲಿಂಗ ಚಂದ್ರಾಮ ಹೊನ್ನಕಟ್ಟಿ ಹಾಗೂ ಇತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡಾ.ಗುರುರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನಿಲಯದ ಮುಖ್ಯಸ್ಥ ಕೆ.ಅರುಣ ಪ್ರಭಾಕರ್, ಸಾಹಿತಿ ಡಾ.ಬಸು ಬೇವಿನಗಿಡದ ಇದ್ದರು. ಸದಾಶಿವ ಐಹೊಳೆ ಪ್ರಾರ್ಥಿಸಿದರು. ಕೆ.ಶಿವರಾಜ ಸ್ವಾಗತಿಸಿದರು. ಸುರೇಖಾ ನಿರೂಪಿಸಿದರು. ಸುಭಾಸಿನಿ ಹಿರೇಮಠ ವಂದಿಸಿದರು.






