COVID-19 Resources for Mental Health Coaches... Learn More

0836-2773878

ಮಾನಸಿಕ ಆರೋಗ್ಯ ಅತ್ಯಗತ್ಯ: ಡಾ.ಆದಿತ್ಯ

ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ ಹೇಳಿದರು. ನಗರದ ಕರ್ನಾಟಕ ಕಲಾ ಕಾಲೇಜಿನ ಮನೋವಿಜ್ಞಾನ ವಿಭಾಗವು ಗುರುವಾರ ನಡೆದ ವೈಯಕ್ತಿಕ ಶ್ರೇಷ್ಠತೆ-ಭಾವನೆಗಳ ನಿರ್ವಹಣೆ ವಿಷಯ ಬಗ್ಗೆ ಉಪನ್ಯಾಸ ನೀಡಿದರು. ಭಾವನೆಗಳ ನಿರ್ವಹಣೆಗೆ ಉತ್ತಮ ಹವ್ಯಾಸ, ಶಿಸ್ತು ಸೇರಿದಂತೆ ಕೆಲವು ಅಭ್ಯಾಸ ರೂಢಿಸಿಕೊಳ್ಳಬೇಕು. ವಾಸ್ತವತೆ ಸ್ವಯಂ ಸ್ವೀಕರಿಸಿ, ನಿರ್ದಿಷ್ಟ ಗುರಿ ಸಾಧಿಸಲು ವಿದ್ಯಾರ್ಥಿ ಗಳಿಗೆ ಡಾ.ಪಾಂಡುರಂಗಿ ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಯೋಗ್ಯ, ಧ್ಯಾನ ಅಳವಡಿಸಿಕೊಳ್ಳಲು ತಿಳಿಸಿದರು. ಕಾರ್ಯಾಗಾರದಲ್ಲಿ ಕೆಸಿಡಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥಡಾ. ಎಸ್.ಜಿ. ಜಾದವ್ ಓದುವ ಹವ್ಯಾಸ ಬಗ್ಗೆ ಡಾ. ಅನಿತಾ ಭಟ್ ವ್ಯಕ್ತಿಗತ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಅಲ್ಲದೇ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎ.ಬಿ.ಬಿಜಾಪೂರ ಸಂವಹನ ಕೌಶಲ್ಯ ಬಗ್ಗೆ ಡಾ.ಅಮೃತ ಯಾರ್ದಿ ಜೀವನದ ಮೌಲ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಡೀನ್ ಡಾ.ಮುಕುಂದ ಲಮಾಣಿ, ಪ್ರೊ.ಅಶೋಕ ಶ್ಯಾಗೋಟಿ ಜಿಮಖಾನ ಉಪಾಧ್ಯಕ್ಷ ಡಾ. ಐ.ಸಿ.ಮುಳಗುಂದ, ಡಾ.ಗೀತಾ ಪಾಸ್ತೆ ಮತ್ತು ಗುರುಪ್ರಸಾದ ಹೆಗ್ಡೆ ಇದ್ದರು.

About Author:

Leave Your Comments

Your email address will not be published. Required fields are marked *