COVID-19 Resources for Mental Health Coaches... Learn More

0836-2773878

ಹೆತ್ತವರ ಪ್ರೀತಿ ಗೌರವಿಸೋಣ ಬದುಕು ನಂದನವನವಾಗಿಸೋಣ

‘ನಾನು ಮನುಷ್ಯಳೇ. ನನಗೂ ಆಸರ ಬೇಸರ ಇರುತ್ತದೆ. ನನ್ನ ಮನಸ್ಸಿಗೂ ವೇದನೆ ಆದಾಗ ಅದನ್ನು ಯಾರ ಬಳಿಯಾದರೂ ಹೊರಗೆ ಹಾಕಲೇಬೇಕಲ್ಲ. ಒಳಗಿಟ್ಟುಕೊಂಡಷ್ಟು ದುಃಖ ಜಾಸ್ತಿಯಾಗುತ್ತದೆ. ಅದಕ್ಕೆ ನಾನೂ ನನಗೆ ಆಪ್ತರೆನಿಸಿದವರ ಬಳಿ ನನ್ನ ಅಳಲು ತೋಡಿಕೊಂಡೆ. ಇಷ್ಟೇ. ಇದು ನನಗೆ ಇಂತಹ ದೊಡ್ಡ ಶಿಕ್ಷೆ ನೀಡುತ್ತದೆ ಎಂಬ ಊಹೆಯೂ ನನಗಿರಲಿಲ್ಲ. ಏನ್ ಮಾಡೋದು ಎಂದೇ ತಿಳಿಯದಾಗಿದೆ. ಜೀವನವೇ ಬೇಡ ಎನಿಸಿದೆ…’ ಇವು ಕುಟುಂಬವೊಂದರ ಗೃಹಿಣಿಯ ನೊಂದ ಮಾತುಗಳು.

‘ನಾನು ಮಾಡಿದ ತಪ್ಪಾದರೂ ಏನು? ನನಗಿರುವವ ಒಬ್ಬನೇ ಮಗ. ತುಂಬಾ ಅಕ್ಕರೆಯಿಂದ ಬೆಳೆಸಿರುವೆ. ಆತನೂ ಅಷ್ಟೇ ನನ್ನ ಮೇಲೆ ಇನ್ನಿಲ್ಲದ ಪ್ರೀತಿ, ಕಕ್ಕುಲಾತಿ. ಒಂದು ಕ್ಷಣವೂ ನಾನವನನ್ನು ಬಿಟ್ಟಿರಲಾರೆ. ಅದು ನನ್ನ ಕರುಳಕುಡಿ. ನಾನು ಎಂದೂ ಆತನ ಶ್ರೇಯಸ್ಸನ್ನೇ ಬಯಸಿದವಳು ಮತ್ತು ಉಸಿರಿರುವರೆಗೂ ಬಯಸುವವಳು. ಆತನೂ ಅಷ್ಟೇ, ತುತ್ತು ಕೊಟ್ಟವಳನ್ನು ಎಂದೂ ಮರೆತಿಲ್ಲ, ಹೀಯಾಳಿಸಿಲ್ಲ, ಅಪಮಾನವೆಸಗಿಲ್ಲ. ಆತನ ಮನದಿಚ್ಛೆಯಂತೆ ಆತನ ಮನದನ್ನೆಯ ಜತೆ ಮದುವೆ ಮಾಡಿದೆವು. ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ಈಗೇಕೋ ಸೊಸೆ ಮತ್ತು ನನ್ನ ಮಧ್ಯೆ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದಿದೆ. ಅದು ಸಹಜವೇ. ಜನರೇಷನ್ ಗ್ಯಾಪ್ ಸೇರಿದಂತೆ ನಾವು ಬೆಳೆದು

ಬಂದ ಪರಿಸರವೂ ಕಾರಣವಿರಬಹುದು. ಅದರ ಬಗ್ಗೆ ಮಾತಾಡಿದ್ದೇ ದೊಡ್ಡ ಮುಳುವಾಗಿ ಪರಿಣಮಿಸಿದೆ. ಜೇನಿನ ಗೂಡಿನಂತಿದ್ದ ಕುಟುಂಬ ಇದೀಗ ಛಿದ್ರವಾಯಿತು. ಇರುವ ಒಬ್ಬ ಮಗ ನನ್ನಿಂದ ದೂರವಾದ. ಪರಿಣಾಮ ಮನೋವೇದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನಸ್ಸಿನಲ್ಲಿ ಸದಾ ತಳಮಳ, ಊಟ ರುಚಿಸುವುದಿಲ್ಲ. ನಿದ್ರೆ ಬರುವುದಿಲ್ಲ. ನನ್ನ ವಿಚಾರದಲ್ಲೇ ಯಾಕೆ ಹೀಗಾಯ್ತು? ಎಂಬೆಲ್ಲಾ ನಕಾರಾತ್ಮಕ ವಿಚಾರಗಳು ಬರುತ್ತಿವೆ. ಏನು ಮಾಡಲಿ ಡಾಕ್ಟರೇ?’ ಎಂದು ಆ ಗೃಹಿಣಿ ತನ್ನ ಸಮಸ್ಯೆ ವಿವರಿಸಿದಾಗ ನನಗೂ ಬೇಸರವೆನಿಸಿತು.

ಇದು ಒಂದು ಮನೆಯ ಕಥೆಯಲ್ಲ. ಈಗಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿನ ಮನಸ್ಸಿಗೆ ಈತರಹದ ವೇದನೆ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಒಂದೊಂದು ದಶಕದ ನಂತರ ಪೀಳಿಗೆಯ ಆಚಾರ ವಿಚಾರಗಳು ಬದಲಾಗುತ್ತವೆ. ಆಲೋಚನೆಗಳು, ಜೀವನಶೈಲಿ ಬದಲಾಗುತ್ತವೆ. ಇದನ್ನು ತಪ್ಪು ಎನ್ನಲಾಗದು. ಹಾಗಂತ ನಮ್ಮ ಹಿರಿಯರ ಆಲೋಚನೆ, ಆಚಾರ ವಿಚಾರ ಸುಳ್ಳು ಅಥವಾ ತಪ್ಪು ಎನ್ನಲೂ ಆಗದು. ಅವರ ಕಾಲಘಟ್ಟಕ್ಕೆ ಅದು ಸರಿಯೇ. ಇಲ್ಲಿ ಹೊಂದಾಣಿಕೆ ಬಲು ಮುಖ್ಯ. ಹೊಸ ತಲೆಮಾರಿನವರ ಸ್ಟೈಲೇ ಬೇರೆ. ಅದನ್ನು ಹಿರಿಯರು ಒಪ್ಪುವುದು ಕಷ್ಟಸಾಧ್ಯವೇ. ಆಗ ಕಿರಿಯರಾದವರು ಅದನ್ನು ದೊಡ್ಡ ವಿಷಯ ಮಾಡದೇ ಅಪ್ಪಿ ಒಪ್ಪಿ ಇಂದಲ್ಲ

+

ಹಲೋ ಡಾಕ್ಟರ್

ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು

drpandurangi@yahoo.com

ನಾಳೆ ಸರಿ ಹೋಗುವುದೆಂಬ ದೊಡ್ಡ ಮನಸ್ಸಿನಿಂದ ಸಾಗಿದರೆ ಎಲ್ಲವೂ ಬಗೆಹರಿಯುತ್ತದೆ. ಅದರ ಬದಲು ಅದನ್ನೇ ಸವಾಲಾಗಿ ಸ್ವೀಕರಿಸಿ ಒರೆಗೆ ಹಚ್ಚಲು ಮುಂದಾದರೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ.

ಈಗ ಈ ಕುಟುಂಬದ ವಿಚಾರದಲ್ಲಿ ಆದದ್ದೂ ಅದುವೇ. ಜಿದ್ದು ಇಲ್ಲಿ ನಡೆಯದು. ಹೃದಯ ವೈಶಾಲ್ಯ ಅಗತ್ಯ. ತ್ಯಾಗ ಮಾಡಿದಷ್ಟೂ ಸುಖ ಹೆಚ್ಚು. ತ್ಯಾಗದ ಫಲ ಅಪಾರ. ಆ ಕ್ಷಣದಲ್ಲಿ ಅದು ತಲೆಬಾಗಿದಂತೆ ಎನಿಸಿದರೂ ಅದರ ಫಲ ಸ್ವಸ್ಥವಾಗಿರುತ್ತದೆ. ಈಗ ಇವರ ಕುಟುಂಬದ ವಿಚಾರದಲ್ಲೇ ತಗೊಳ್ಳಿ. ಆ ತಾಯಿಗೆ ಮಗನೇ ಸರ್ವಸ್ವ. ಸೊಸೆ ಹೊರಗಿನಿಂದ ಬಂದವಳು. ಮಾಡರ್ನ್ ಹುಡುಗಿ. ಅತ್ತೆಯ ಮಾತು ಅಪಥ್ಯ. ಈಗಿನ ದಿನಮಾನಕ್ಕೆ

ತಕ್ಕಂತೆ ಸೋಷಿಯಲ್ ಮೀಡಿಯಾ ಮತ್ತು ನೆಟವರ್ಕ್‌ ಸಖ್ಯದಲ್ಲಿ ಬೆಳೆದವಳು. ಆದರೆ ಅದು ಚೌಕಟ್ಟು ಮೀರಬಾರದು. ಹಿರಿಯರನ್ನು ಗೌರವಿಸುತ್ತ ಅದನ್ನೂ ನಿರ್ವಹಿಸುತ್ತ ಸಾಗಬೇಕು. ಲೇಟೆಸ್ಟ್ ಕಲ್ಟರ್ ಮನೆಯ ನೆಮ್ಮದಿ ಅಥವಾ ಹಿರಿಯರ ಮನಸ್ಸು ಕದಡಬಾರದು. ಹಾಗಾದಲ್ಲಿ ಈ ಗೃಹಿಣಿಗಾದ ತರಹದ ಸನ್ನಿವೇಶ ಸೃಷ್ಟಿಯಾಗುತ್ತದೆ. ಎಂದೆಂದಿಗೂ ಹೆತ್ತವರ ರೋದನ ತುಂಬಾ ಘೋರ. ಅವರು ಎಂದೂ ನಿಟ್ಟುಸಿರು ಹಾಕಬಾರದು. ಸದಾ ಒಳಿತು ಬಯಸುತ್ತಿರಬೇಕು. ಅವರೇನಾದರೂ ಶಪಿಸಿದರೆ ಸಣ್ಣವರ ಬದುಕಿನ ಕಥೆ ಅಷ್ಟೇ. ಇದು ಅನಾದಿ ಕಾಲದಿಂದಲೂ ರುಜುವಾತಾದ ಸಂಗತಿ.

ಆ ಹಿರಿಯ ಗೃಹಿಣಿಯನ್ನು ಆಪ್ತ ಸಮಾಲೋಚನೆ ಮೂಲಕ ತಿಳಿಹೇಳಿ ಕಳಿಸಿದೆ. ಆದರೆ ಈ ಪ್ರಕರಣದ ಮೂಲಕ ನಾವು ಇಲ್ಲಿ ಗಮನಿಸಬೇಕಾದ ಅಥವಾ ಅರಿತು ನಡೆಯಬೇಕಿರುವ ಒಂದು ಸಂಗತಿ ಎಂದರೆ ಹಿರಿಯರ ಅನುಭವದಲ್ಲಿ ಅಮೃತವಿದೆ. ಅದನ್ನು ಸವಿಯಬೇಕೇ ಹೊರತು ಸರಿಸುವುದಲ್ಲ. ತಿರಸ್ಕರಿಸುವುದಲ್ಲ. ಹೆತ್ತವರಿಗೆ ಹೆಗ್ಗಣ ಪ್ರೀತಿ ಎನ್ನುವಂತೆ ಅವರಿಗೆ ಅವರವರ ಮಕ್ಕಳೇ ಸಾರ್ವಕಾಲಿಕ ಶ್ರೇಷ್ಠ. ಅದನ್ನು ಒಪ್ಪಿ ಅವರನ್ನು ಗೌರವಿಸಿದರೆ ಸಮಸ್ಯೆಯೇ ಇರುವುದಿಲ್ಲ. ಅದರ ಬದಲು ಅದನ್ನು ದಂಡಿಸಲು ಹೊರಟರೆ ಇಲ್ಲವೇ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ಹೊರಟರೆ ಮನೆ ಮನ ಎರಡೂ ಛಿದ್ರ ಖಚಿತ

About Author: