COVID-19 Resources for Mental Health Coaches... Learn More
ಸರ್ವೋದಯ ಸೇವಾ ಉತ್ಸವ

ಮುಧೋಳ: ಮುಧೋಳದ ಹಿರಿಯ ಗಾಂಧಿವಾದಿ ಹಾಗೂ
ಸರ್ವೋದಯ ಕಾರ್ಯಕರ್ತ ದಿ.ಶಂಕರ ಉತ್ತೂರವರ ಪ್ರಥಮ ಪುಣ್ಯಸ್ಮರಣೆ ಹಾಗೂ 88ನೇ ಜನ್ಮದಿನದ ನಿಮಿತ್ತ ನಗರದ ನೂತನ ಬಾಲಿಕೆಯರ ಮಾಧ್ಯಮಿಕ ಶಾಲೆಯಲ್ಲಿ ಡಿ.25ರಂದು ಸರ್ವೋದಯ ಸೇವಾ ಉತ್ಸವ ಹಾಗೂ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಂತನಸಿರಿ ಅಧ್ಯಕ್ಷ ಡಾ.ಶಿವಾನಂದ ಕುಬಸದ ಮಾಹಿತಿ ನೀಡಿ, ಸರ್ವೋದಯ ಸೇವಾ ಉತ್ಸವದಲ್ಲಿ ಪ್ರೌಢ ಮತ್ತು ಕಾಲೇಜು ಉಚಿತ ಆರೋಗ್ಯ ಅರಿವು ಹಾಗೂ ಹೃದಯಾಘಾತ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಕುರಿತು ತಜ್ಞರು ಸಿಪಿಆರ್ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ಧಾರವಾಡದ ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಸಂತಾನ ಸಾಫಲ್ಯ ಕೇಂದ್ರ, ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ನಾರಾಯಣ ಹೃದಯಾಲಯ, ಎಸ್ಡಿಎಂ ವೈದ್ಯಕೀಯ ಮಹಾವಿದ್ಯಾಲಯಹಾಗೂ ಎಂ.ಎಂ.ಜೋಶಿನೇತ್ರವಿಜ್ಞಾನ
ಸಂಸ್ಥೆಯ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ. ನಗರದ ಚಿಂತನಸಿರಿ, ಸೇವಾಭಾರತಿ ಹಾಗೂ ಇನ್ನರ್ವೀಲ್ ಕ್ಲಬ್ಗಳು ಕೈಜೋಡಿಸಿವೆ. ಧಾರವಾಡದ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಶಿಬಿರ ಉದ್ಘಾಟಿಸುವರು, ಖಜ್ಜಿಡೋಣಿಯ ಆಧ್ಯಾತ್ಮಿಕ ಚಿಂತಕ ಕೃಷ್ಣಾನಂದ ಶಾಸ್ತ್ರೀಜಿ ಅತಿಥಿಸ್ಥಾನ ವಹಿಸುವರು, ಚಿಂತನಸಿರಿ ಗೌರವಾಧ್ಯಕ್ಷ ಡಾ.ಎಂ.ಆರ್.ದೇಸಾಯಿ ಅಧ್ಯಕ್ಷತೆ ವಹಿಸುವರು. ಆರ್.ಎಸ್.ಎಸ್ ಪ್ರಾಂತ ಪ್ರಚಾರಕ ನರೇಂದ್ರಜಿ ಉಪಸ್ಥಿತಿ ಇರಲಿದೆ. ಉಚಿತ ಆರೋಗ್ಯ ಶಿಬಿರದ ಜೊತೆಗೆಹುಬ್ಬಳ್ಳಿಯಸಾಹಿತ್ಯ ಪ್ರಕಾಶನದಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಏರ್ಪಡಿಸಲಾಗಿದೆ ಎಂದರು. ಇನ್ನರ್ಸ್ಟೀಲ್ ಕ್ಲಬ್ ಅಧ್ಯಕ್ಷೆ ಸುಜಾತಾ ವಸ್ತ್ರದ ಮಾತನಾಡಿದರು.ಸಂಘಟಕರಾದ ಡಾ.ಎಸ್.ಎಂ.ಕುಬಸದ, ರಾಮಕೃಷ್ಣ ಬುದ್ಧಿ, ಬಸವಾರಜ ಗೋಸಾರ, ಬಿ.ಎಂ.ಬೆಣ್ಣೂರ, ರಮೇಶ ಅಣ್ಣಿಗೇರಿ, ಸುಜಾತಾ ವಸ್ತ್ರದ, ಸುಪ್ರಿಯಾ ಸಾಲಿಮಠ, ಮಹಾದೇವಪ್ಪ ಮಡಿವಾಳರ ಇತರರು ಇದ್ದರು.
