COVID-19 Resources for Mental Health Coaches... Learn More

0836-2773878

ಶಿಸ್ತು, ಬದ್ಧತೆ ಇದ್ದರೆ ಸಾಧಕರಾಗಲು ಸಾಧ್ಯ

ಸಮರ್ಪಣಾ ಭಾವ, ಶಿಸ್ತು, ಬದ್ಧತೆ, ಉತ್ಸಾಹ ಇರುವ ವಿದ್ಯಾರ್ಥಿಗಳು ಸಾಧಕರಾಗಲು ಸಾಧ್ಯ ಮನೋರೋಗ ವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ಜೆಎಸ್‌ಎಸ್ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಜರುಗಿದ ಎಕ್ಸ ಲಂಟ್ ನೀಟ್ ಅಕಾಡೆಮಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಮಾತನಾಡಿದರು.

ವಿದ್ಯಾರ್ಥಿಗಳು ಗುರಿ ಮುಟ್ಟಲು ಗುರು ಇರಬೇಕು. ವಿದ್ಯಾರ್ಥಿಗಳಲ್ಲಿ ಸಾಧಿಸುವ ಕಿಚ್ಚು ಇದ್ದಾಗ ಯಶಸ್ವಿಯಾಗುತ್ತಾರೆ.

ಈ ಸ್ಪರ್ಧಾತ್ಮಕ ಜಗತ್ತಲ್ಲಿ ಹೊಸತನ ಮೈಗೂಡಿಸಿಕೊಂಡು ಹೆಚ್ಚು ಕ್ರಿಯಾ ಶೀಲ ರಾಗಬೇಕು. ತಂತ್ರಜ್ಞಾನದ ಮೋಡಿಯಲ್ಲಿ ನಮ್ಮ ಉನ್ನತ ಆದರ್ಶ, ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ಈ ಅಕಾಡೆಮಿಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ನಾಗರಿಕರಾಗಬೇಕು ಎಂದರು

ನಿವೃತ್ತ ಶಿಕ್ಷಣ ನಿರ್ದೇಶಕ ಡಾ. ಎಸ್.ಜಿ. ಪಾಟೀಲ ಮಾತನಾಡಿ, ನಿರಂತರ ಕಲಿಕೆ, ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಸವಾಲುಗಳಿಗೆ ಕುಂದದೆ ಎದುರಿಸಿ ಸಾಧನೆ ಶಿಖರ ಏರಬೇಕು. ಸಾಧಕನಿಗೆ ತಾಳ್ಮೆ ಏಕಾಗ್ರತೆ ಹಾಗೂ ಛಲ ಇರಬೇಕು. ಜ್ಞಾನ ಯಾವುದೇ ಮಾರ್ಗದಿಂದ ಬಂದರೂ ಸ್ವೀಕರಿಸಬೇಕು ಎಂದರು.

ವಿಜಯಪುರದ ವಿಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವಿ.ಡಿ. ಮಾದನಶೆಟ್ಟಿ ಮಾತನಾಡಿ, ಯಶಸ್ಸು ಎಂಬುದು ವಿದ್ಯಾರ್ಥಿಗಳ ಕೈಯಲ್ಲಿಯೇ ಇದೆ ಎಂದರು. ವಿಜಯಪುರ ಹಾಗೂ ಧಾರ

ವಾಡದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಮಾತನಾಡಿ, ವಿಜಯಪುರದಲ್ಲಿ ಬೆರಳೆಣಿಕೆಯಷ್ಟು ಸಾವಿರ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಎಕ್ಸಲಂಟ್ ಶಿಕ್ಷಣ ಸಂಸ್ಥೆಯಲ್ಲಿ ಇಂದು ಸುಮಾರು విళు ವಿದ್ಯಾರ್ಥಿಗಳು, ಸುಮಾರು ಒಂದು ಸಾವಿರ ಶಿಕ್ಷಕರು ಕಾರ್ಯನಿರ್ವ ಹಿಸುತ್ತಿದ್ದಾರೆ ಎಂದರು.

ಪಾಲಕರ ಒತ್ತಾಸೆಯ ಮೇರೆಗೆ ಧಾರವಾಡದಲ್ಲೂ ನವೋದಯ, ಕಿತ್ತೂರು, ಸೈನಿಕ ಶಾಲೆಗಳ ಮಕ್ಕಳ ತರಬೇತಿ ಕೇಂದ್ರದೊಂದಿಗೆ ಎಕ್ಸಲಂಟ್

ನೀಟ್ ಅಕಾಡೆಮಿಯನ್ನು ಪ್ರಾರಂಭಿಸಿ ಇಡೀ ಕರ್ನಾಟಕ ಬೆರಗುಗೊಳ್ಳು ವಂತಹ ಫಲಿತಾಂಶ ನೀಡಿದೆ. ಅಷ್ಟೇ ಅಲ್ಲ ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆಯ ಸಹಯೋಗದೊಂದಿಗೆ ಓಂ ಪ.ಪೂ. ವಿಜ್ಞಾನ ಕಾಲೇಜು ಕೂಡ ಆರಂಭಿಸಿದ್ದೇವೆ.ಜತೆಗೆ ಪ್ರೌಢಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಫೌಂಡೇಶನ್ ಕೂಡ ಪ್ರಾರಂಭಿಸಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ವೈದ್ಯಕೀಯ ಸೀಟು ಪಡೆದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಕ್ಸಲಂಟ್ ನೀಟ್ ಅಕಾಡೆಮಿಯ ನಿರ್ದೇಶಕ ಸಚಿನ ಗಿರಿಯಪ್ಪನವರ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭುವನ ಕೌಲಗಿ, ಆಡಳಿತಾಧಿಕಾರಿ 141 ಶಿವಾನಂದ ಬಿರಾದಾರ, ಸಂಸ್ಥಾಪಕ ನಿರ್ದೇಶಕ ಪ್ರವೀಣ ಗಿರಿಯಪ್ಪನವರ, ನೀಟ್ ಅಕಾಡೆಮಿ ಆಡಳಿತಾಧಿಕಾರಿ ಜಗದೀಶ ಚಿತ್ತರಗಿ, ಪಿಯು ಕಾಲೇಜು ಪ್ರಾ. ಉಮೇಶ ಉರೋಹಿತ, ಶೈಕ್ಷಣಿಕ ಸಂಯೋಜಕ ಪ್ರತಾಪ್ ಟಿ.ಆ‌ರ್. ಉಪಸ್ಥಿತರಿದ್ದರು.

About Author: