COVID-19 Resources for Mental Health Coaches... Learn More
ವಂಶೋದ್ಧಾರಕ ಬೇಕೆಂಬ ಹಠ ಕಸಿದೀತು ಕುಟುಂಬದ ನೆಮ್ಮದಿ!

ನಾವಿಂದು 21ನೇ ಶತಮಾನಕ್ಕೆ ಕಾಲಿರಿಸಿದ್ದೇವೆ. ವಿಜ್ಞಾನ ತಂತ್ರಜ್ಞಾನದಲ್ಲಿ ಭಾರಿ ಪ್ರಗತಿ ಸಾಧಿಸಿದ್ದೇವೆ. ಚಂದ್ರಲೋಕಕ್ಕೆ ಪದಾರ್ಪಣೆ ಮಾಡಿದ ಶ್ರೇಯಸ್ಸು ಕೂಡ ನಮ್ಮದಾಗಿದೆ. ಇದೇ ವೇಳೆ ಕೆಲ ವಿಚಾರಗಳಲ್ಲಿ ನಾವಿನ್ನೂ ಅದೇ ಓಬಿರಾಯನ ಕಾಲದ ಚಿಂತನೆಯಿಂದ ಹೊರಬಂದಿಲ್ಲ. ಸಮಾನತೆ ಎನ್ನುವ ಶಬ್ದ ಇನ್ನೂ ಅರ್ಥ ಪಡೆದುಕೊಂಡಿಲ್ಲ. ನಮ್ಮ ಪೂರ್ವಿಕರು ಪಾಲಿಸುತ್ತಿದ್ದ, ನಂಬುತ್ತಿದ್ದ ವಿಚಾರಗಳಲ್ಲಿ ಸುಧಾರಣೆ ಕಾಣುತ್ತಿಲ್ಲ. ಪರಿಣಾಮ ಇಂದಿಗೂ ಈ ಗಂಡು ಹೆಣ್ಣು ನಡುವಿನ ವ್ಯತ್ಯಾಸ, ಶ್ರೇಷ್ಠ-ಕನಿಷ್ಠ ಎಂಬ ಮನಸ್ಸು, ಭೇದಭಾವ ಅಳಿದಿಲ್ಲ.
ಈ ವಿಷಯ ಈಗೇಕೆ ಎಂದರೆ ಮೊನ್ನೆ ಒಬ್ಬ ವಿವಾಹಿತ ಮಹಿಳೆ ನನ್ನ ಬಳಿ ಚಿಕಿತ್ಸೆಗೆ ಬಂದಿದ್ದಳು. ಮಧ್ಯವಯಸ್ಕಳು. ಅವಳಿಗೆ ನಾಲ್ವರು ಪುತ್ರಿಯರು. ಪತಿಯ ದುಡಿಮೆ ಅಷ್ಟಕ್ಕಷ್ಟೆ. ಹೇಗೋ ಸಂಸಾರ ಸಾಗಿದೆ. ವಿಚಿತ್ರವೆಂದರೆ ಆ ಪತಿರಾಯನಿಗೆ ವಂಶೋದ್ಧಾರಕ ಬೇಕಂತೆ. ಈ ಕಾರಣಕ್ಕೆ ಈಗಾಗಲೇ ನಾಲ್ವರು ಪುತ್ರಿಯರನ್ನು ಪಡೆದದ್ದಾಯಿತು. ಇಷ್ಟು ಸಾಲದೆಂಬಂತೆ ಈ ಉದ್ದೇಶಕ್ಕಾಗಿ ಇನ್ನೊಂದು ಮದುವೆಯೂ ಆದ. ಅವಳಿಗೂ ಮೂವರು ಪುತ್ರಿಯರಾದರು. ಎರಡು ಮದುವೆಯಾದದ್ದು ಬಿಟ್ಟರೆ ಉದ್ದೇಶ ಈಡೇರಿತೇ? ಅಥವಾ ಈ ಉದ್ದೇಶ ಸರಿಯೇ? ಹೆಣ್ಣು ಎಂದರೆ ಹೆರಿಗೆ ಯಂತ್ರವೇ? ಬೇಕೆಂದಾಗ ಬೇಕಾದದ್ದನ್ನು ಹೆತ್ತು ಕೊಡಲು ಆಕೆಯನ್ನು ವರಿಸಬೇಕೇ? ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸುತ್ತವೆ. ಗಂಡು ಮಗು ಶ್ರೇಷ್ಠ ಎಂಬ ಈ
ಭಾವನೆ ಅಥವಾ ಧೋರಣೆ ತಪ್ಪು. ಇಂದು ಶಿಕ್ಷಣ, ಉದ್ಯೋಗ ವಿಚಾರದಲ್ಲಿ ನಾವು ಗಮನಿಸಿದಂತೆ ಹೆಣ್ಣು ಮಗುವಿನ ಸಾಧನೆಯೇ ಮುಂಚೂಣಿಯಲ್ಲಿದೆ.
ಹೆಣ್ಣು ಜಗದ ಕಣ್ಣು ಎಂಬುದು ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಹೆಣ್ಣುಮಕ್ಕಳು ಇಂದು ಪುರುಷರಷ್ಟೇ ಸರಿಸಮಾನವಾಗಿ ಬೆಳೆದಿದ್ದಾರೆ ಮತ್ತು ಬೆಳೆಯುತ್ತಿದ್ದಾರೆ. ಇಂಥದರಲ್ಲಿ ಇಂದಿಗೂ ಪುತ್ರನೇ ಬೇಕು ಎನ್ನುವ ಮನಸ್ಥಿತಿ ಹಾಸ್ಯಾಸ್ಪದ ಮತ್ತು ಮೂರ್ಖತನದ ಪರಮಾವಧಿ. ನಿಜ ಹೇಳಬೇಕು ಎಂದರೆ ಹೆಣ್ಣುಮಕ್ಕಳೇ ಇಂದು ಗಂಡುಮಕ್ಕಳಿಗಿಂತ ಹೆತ್ತವರ ಆರೈಕೆ ಮತ್ತು ಕಾಳಜಿ ಮಾಡುತ್ತಿರುವುದು. ಈ ವಂಶೋದ್ಧಾರಕ ಎನ್ನುವ ಪಟ್ಟವನ್ನು ಅದ್ಯಾವಗಳಿಗೆಯಲ್ಲಿ ಯಾರು
ಹಲೋ
ಡಾಕ್ಟರ್
ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು drpandurangi@yahoo.com
ಕಟ್ಟಿದರೋ ಗೊತ್ತಿಲ್ಲ. ಹಲವರ ಮನಸ್ಸಿನಲ್ಲಿ ಇದು ಇಂದಿಗೂ ಅಚ್ಚಳಿಯದ ಛಾಪು ಮೂಡಿಸಿದೆ. ಆದರೆ ವಾಸ್ತವದಲ್ಲಿ ಇದು ಸರ್ವಥಾ ತಪ್ಪು. ನಮ್ಮ ಸಮಾಜ ಎಷ್ಟೇ ಮುಂದುವರಿದಿದೆ ಎಂದು ನಾವು ಹೇಳಿದರೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಅದೇನೋ ಒಂದು ತರಹ ಅಸಹ್ಯ ಎನಿಸುತ್ತದೆ. ಯಾವಾಗ ಈ ತರಹದ ನಿಲುವು ಬದಲಾಗುವುದು? ಇದಕ್ಕೆ ಬಲಿಪಶು ಆಗುವವರು ಯಾರು? ಎಂಬೆಲ್ಲ ವಿಚಾರಗಳು ಬರುತ್ತವೆ.
ನನ್ನ ಬಳಿ ಚಿಕಿತ್ಸೆಗೆ ಬಂದವಳನ್ನು ನೋಡಿದಾಗ ಆಕೆ ಜತೆ ಮಾತನಾಡಿದಾಗ ತಿಳಿದು ಬಂದ ಸಂಗತಿ ನನಗೆ ಅಚ್ಚರಿ ಮೂಡಿಸಿತು. ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆ ಆಗಿರಬಹುದು ಎಂದು ನಾನಂದುಕೊಂಡರೆ ಅದು ವಿಷಯವೇ ಬೇರೆಯಾಗಿತ್ತು. ಮೊದಲನೇಯದು ಪುತ್ರನ
ಆಸೆಗಾಗಿ ನಾಲ್ವರು ಪುತ್ರಿಯರನ್ನು ಹೆತ್ತಿದ್ದು. ಎರಡನೇಯದು ಪತಿ ಇನ್ನೊಂದು ಮದುವೆಯಾಗಿದ್ದು, ಎರಡನೇ ಹೆಂಡತಿ ಜತೆ ಕೂಡಿ ಬಾಳುವುದು ಅಸಾಧ್ಯದ ಮಾತೆಂದು ಆಕೆ ಇದೀಗ ತವರು ಸೇರಿದ್ದಾಳೆ. ಹೊಂದಾಣಿಕೆ ಮತ್ತು ನೈತಿಕದೃಷ್ಟಿಯಿಂದಲೂ ಇದು ಕಾರ್ಯಸಾಧುವಲ್ಲ. ಸಮಾಜ ಅದನ್ನು ನೋಡುವ ದೃಷ್ಟಿಕೋನವೇ ಬೇರೆ. ಈ ಕಾರಣಕ್ಕಾಗಿ ಮುಂದೇನು? ಎಂದು ವಿಚಾರ ಮಾಡಿ ಮಾಡಿ ಆಕೆ ಸೋತು ಸುಣ್ಣವಾಗಿದ್ದಳು. ಊಟ, ನಿದ್ರೆ ಯಾವುದರ ಪರಿವೇ ಇಲ್ಲ. ಏನಾಯಿತು ನನ್ನ ಬದುಕು? ಆ ನಾಲ್ವರು ಪುತ್ರಿಯರ ಭವಿಷ್ಯವೇನು? ಎಂಬ ಚಿಂತೆ ಆಕೆಯನ್ನು ಆವರಿಸಿತ್ತು. ಅವಳ ಜತೆ ಆಪ್ತ ಸಮಾಲೋಚನೆ ಮಾಡಿ ಧೈರ್ಯ ತುಂಬಿ ನೀನೇ ಹೀಗೆ ಖಿನ್ನತೆಗೆ ಒಳಗಾದರೆ ಹೇಗೆ? ಮಕ್ಕಳ ಜವಾಬ್ದಾರಿ ನಿಭಾಯಿಸುವವರು ಯಾರು? ಮಾನಸಿಕವಾಗಿ ಗಟ್ಟಿಯಾಗು. ಮಕ್ಕಳನ್ನು ಚೆನ್ನಾಗಿ ಓದಿಸು. ಶಿಕ್ಷಣ ಎಂಬ ಅಸ್ತ್ರದಿಂದ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು ಎಂದು ತಿಳಿ ಹೇಳಿದೆ. ಜತೆಗೆ ದುರಾಲೋಚನೆಗಳು ಬಾರದಂತೆ ವೈಜ್ಞಾನಿಕ ಚಿಕಿತ್ಸೆಯನ್ನೂ ನೀಡಿದೆ.
ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ಹೆಣ್ಣಾಗಲೀ ಗಂಡಾಗಲಿ ಮಕ್ಕಳು ಸಮಾನರು. ಯಾರೂ ಅರ್ಜಿ ಸಲ್ಲಿಸಿ ಪಡೆಯುವ ವಿಚಾರವಿದಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ. ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಅಳಿದು ಎರಡೂ ಒಂದೊಂದು ಕಣ್ಣುಗಳೇ ಎಂದುಕೊಂಡು ಸಾಗಿದರೆ ಈ ತರಹದ ಸಮಸ್ಯೆಗಳೇ ಉದ್ಭವಿಸದು.