COVID-19 Resources for Mental Health Coaches... Learn More

0836-2773878

“ರೀಲ್ಸ್ಗಿಂತ ರಿಯಲ್ ಲೈಫ್ ಮುಖ್ಯ ಮಿಕ್ಕಿದ್ದೆಲ್ಲ ಮಿಥ್ಯ”

ಬದಲಾವಣೆ ಜಗದ ನಿಯಮ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಾಗಿದ್ದರೆ ಏನಿದು ಬದಲಾವಣೆ? ಬದಲಾಗುವುದು ಎಂದರೆ ಗೆ? ಯಾವ ರೀತಿ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಹುಶಃ ನಮ್ಮ ಸಮಾಜ ಎಡವಿದೆ. ಒಬ್ಬೊಬ್ಬರದು ಒಂದೊಂದು ಬ್ಯಾನ, ಪರಿಕಲ್ಪನೆ ಇದೆ. ಅಧುನಿಕತೆಗೆ ಒಗ್ಗಿಕೊಳ್ಳುವುದೇ ಬದಲಾವಣೆ ಎಂದುಕೊಂಡವರೇ ಹೆಚ್ಚು, ಆದರೆ ವಾಸ್ತವದಲ್ಲಿ ದು ಸರಿಯಲ್ಲ. ತಪ್ಪುಕಲ್ಪನೆ ಮತ್ತು ಅರಿಕೆ. ಇದರಿಂದ ಆಗುವ
ನಾಹುತದ ಉದಾಹರಣೆ ಇಲ್ಲಿದೆ. ಅತ 30ರ ಯುವಕ, ನೋಡಲು ಸುಂದರವಾಗಿದ್ದಾನೆ. ಮೀಣ ಕೃಷಿ ಕುಟುಂಬದ ಹಿನ್ನೆಲೆ ಆತನದು, ಕೈಯಲ್ಲಿ ಉತ್ತಮ ದ್ಯೋಗವೂ ಇದೆ.ಆದರೆ ಆತಬೆಳೆದಪರಿಸರಹಳ್ಳಿ ವಾತಾವರಣ, ಯೋಸಹಜವಾಗಿ ಮದುವೆಗೆ ಬಂದು ನಿಂತಿದ್ದಾನೆ. ಅದರಂತೆ ನೆಯವರು ಆತನಿಗೆ ಕನ್ಯ ಹುಡುಕಿದ್ದಾರೆ. ಪರಿಚಯದವರು ಇಚಿಸಿದ ಕನ್ನೆ ನೋಡಿಯೂ ಆಯಿತು. ಹುಡುಗ ಹುಡುಗಿ ಏನಸ್ಸಿಗೆ ಬಂದದ್ದೂ ಆಯಿತು. ನಿಶ್ಚಿತಾರ್ಥವೂ ಆಯಿತು. ರಡೂ ಮನೆ ಕಡೆಯವರು ಒಂದೆಡೆ ಸೇರಿ ಪುರೋಹಿತರ ಮುಖದಲ್ಲಿ ಮದುವೆ ಮುಹೂರ್ತ ನಿರ್ಧರಿಸಿಯೂ ಆಯಿತು, ದಕ್ಕೆ ಪೂರಕವಾಗಿ ಎರಡೂ ಕಡೆಯವರು ಭರದ ಸಿದ್ಧತೆ ಕೂಡ ಡೆಸಿದರು. ಇನ್ನೇನು ಅಮಂತ್ರಣ ಪತ್ರ ಛಾಪಿಸಿ ಸಂಬಂಧಿಕರು, ಪ್ಲೇಷರನ್ನು, ನೆರೆಹೊರೆಯವರನ್ನು ಕರೆಯಬೇಕು ಎನ್ನುವಷ್ಟರಲ್ಲಿ ಒಂದು ಸಮಸ್ಯೆ ಎದುರಾಯಿತು. ಅದು ಇಷ್ಟೊಂದು ಕ್ಷುಲ್ಲಕ ವಿಚಾರ ಎಂದುಕೊಂಡರೂ ಸೃಷ್ಟಿಸಿದ ಸಮಸ್ಯೆ ಅಗಾಧ. ಆಕೆ ಕಲಿತವಳು, ಈತ ತಾಂತ್ರಿಕ ಶಿಕ್ಷಣ ಪಡೆದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಅದೇನೋ ಗೊತ್ತಿಲ್ಲ, ಆತ ಈಗಿನ ಜನರಂತೆ ಸ್ಮಾರ್ಟ್ ಫೋನ್ ಬಳಸುವುದಿಲ್ಲ, ಸೋಶಿಯಲ್ ಮೀಡಿಯಾದಿಂದ ಬಲು ದೂರ. ಸದಾ ಮೊಬೈಲ್ ಬಳಸುವುದಿಲ್ಲ. ಕೀ ಪ್ಯಾಡ್ ಇರುವ ಚಿಕ್ಕ ಮೊಬೈಲ್ ಬಳಸುತ್ತಾನೆ. ರೀಲ್ಸ್ ಗಿಂತ ರಿಯಲ್ ಲೈಫ್ ಗೆ ಹೆಚ್ಚು ಒತ್ತು ಕೊಟ್ಟು ಸರಳ ಜೀವನ ಸಾಗಿಸುತ್ತಿದ್ದಾನೆ. ಆದರೆ ಆಕೆ ಇದಕ್ಕೆ ತದ್ವಿರುದ್ಧ. ಸದಾ ಮೊಬೈಲ್‌ನಲ್ಲೇ ಮುಳುಗಿರುತ್ತಾಳೆ. ಸೆಲ್ಲಿ, ರೀಲ್ಸ್, ಫೇಸಬುಕ್ ಲೈವ್, ಇನ್ಸಾಗ್ತಾಂ ನಲ್ಲಿ ಇನಸ್ಟಂಟ್ ಆಗಿ ಇರುವಾಕೆ, ಸಾಮಾಜಿಕ ಜಾಲತಾಣ ಎನ್ನುವುದು ಈಕೆಯ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಅಷ್ಟರ ಮಟ್ಟಿಗೆ ಆಕೆ ಅದರ ದಾಸಳಾಗಿದ್ದಾಳೆ, ಈ ಒಂದು ಅಭಿರುಚಿಯ ವ್ಯತ್ಯಾಸ ಇದೀಗ ಎರಡೂ ಮನೆ ಕಡೆಯವರ ಸಂತಸವನ್ನೇ ಕಸಿದಿದೆ.’ಆತ ಕಾಲಕ್ಕೆ ತಕ್ಕಂತೆ ಅಪಡೇಟ್ ಆಗಿಲ್ಲ, ಸೋಶಿಯಲ್ ಲೈಫ್ ಆತನಿಗೆ ಗೊತ್ತಿಲ್ಲ. ಯಾರೊಂದಿಗೂ ಹಂಚಿಕೊಳ್ಳುವದಿಲ್ಲಾ’ ಎನ್ನುವ ಒಂದೇ ಕಾರಣಕ್ಕೆ ಈ ಸಂಬಂಧ ಮುರಿದು ಬಿದ್ದಿದೆ. ಆಕೆ ಖಂಡತುಂಡವಾಗಿ ‘ನನಗೆ ಈ ಮದುವೆ ಇಷ್ಟವಿಲ್ಲ’ ಎಂದು ಹೇಳಿ ಸಂಬಂಧಕ್ಕೆ ಅಂತ್ಯ ಹಾಡಿದ್ದೂ ಆಯಿತು, ಆದರೆ ಆತನ ಪಾಡು ಈಗ ಹೇಳತೀರದು. ಆತ ಮುಗ್ಧ ಮನಸ್ಸಿನವ, ಸಮಾಜದಲ್ಲಿ ನಾನು ಹೇಗೆ ಬದುಕಲಿ? ಹೇಗೆ ತಲೆ ಎತ್ತಿ ನಡೆಯಲಿ? ಎಲ್ಲರೂ ನನ್ನನ್ನು ನೋಡುವ ದೃಷ್ಟಿಕೋನ, ಆಡುವ ಮಾತುಗಳನ್ನು ನನ್ನಿಂದ ಸಹಿಸಲಾಗದು ಎಂದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಇದು ಆತನ ಕೆಲಸದ ಮೇಲೂ ಪ್ರಭಾವ ಬೀರಿದೆ. ಸಹಜವಾಗಿ ಇದು ಆತನ ಪಾಲಕರ ಚಿಂತೆಯನ್ನೂ ಹೆಚ್ಚಿಸಿದೆ. ಆಗ ಅವರು ಆತನನ್ನು ನನ್ನ ಬಳಿ ಕರೆದುಕೊಂಡು ಬಂದರು. ಚಿಕಿತ್ಸೆ ನೀಡಿದೆ. ಈಗ ಕ್ರಮೇಣ ಖಿನ್ನತೆಯಿಂದ ಹೊರಬರುತ್ತಿದ್ದಾನೆ.
ಆತನ ಖಿನ್ನತೆಯ ಹಿಂದಿರುವ ಕಾರಣ ಕೇಳಿ ಒಂದು ಕ್ಷಣ ನಾನೂ ಬೆರಗಾದೆ. ಜನ ಎಷ್ಟು ಮೂಢರು, ಸಣ್ಣ ಸಣ್ಣ ವಿಷಯಕ್ಕೆ ಸಂಬಂಧಕ್ಕೆ ತಿಲಾಂಜಲಿ ಇಡುವ ಹಂತಕ್ಕೆ ಬಂದಿದ್ದಾರಲ್ಲ ಎನಿಸಿತು. ಸೋಷಿಯಲ್ ಮೀಡಿಯಾ ಅನಿವಾರ್ಯವೇನಲ್ಲ. ಆದರೆ ಎಲ್ಲರೊಡನೆ ಬೆರೆಯಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಅದನ್ನು ತಿಳಿಹೇಳಿದರೆ ಸ್ವಲ್ಪ ದಿನದಲ್ಲಿ ಆತ ಸುಧಾರಿಸುತ್ತಿದ್ದ. ಇದರ ಬದಲು ಸಂಬಂಧವೆ ಬೇಡ ಎಂದರೆ ಅದು ತಪ್ಪು. ಮದುವೆ ನಿರಾಕರಣೆಗೆ ಆಕೆ ಕೊಟ್ಟ ಕಾರಣವಂತೂ ಅತ್ಯಂತ ಕ್ಷುಲ್ಲಕ ಎನ್ನುವುದಂತೂ ಸತ್ಯ. ಇದು ಆಧುನಿಕತೆಯ ಪರಿಣಾಮದ ಒಂದು ಮುಖ. ಎಲ್ಲವೂ ಹೀಗೆಯೇ ಇರುತ್ತದೆ ಎಂದೇನಲ್ಲ. ಅಪಡೇಟ್ ಆಗಬೇಕು ಎನ್ನುವುದು ನಿಜ ಹಾಗೂ ಅಪೇಕ್ಷಣೀಯ. ಆದರೆ ಅದಾಗದಿದ್ದರೆ ಸಂಬಂಧಗಳು, ನನ್ನವರು, ತನ್ನವರು, ಭಾವನೆಗಳು ಬೆಲೆ ಕಳೆದುಕೊಳ್ಳಬಾರದು ಎನ್ನುವುದು ಬದುಕಿನ ಮೌಲ್ಯ

About Author: