COVID-19 Resources for Mental Health Coaches... Learn More
“ರಾಜ್ಯದಲ್ಲಿ ವಿಚ್ಛೇದನ ಪ್ರಕರಣಗಳು ಏರಿಕೆ”

ಕೋವಿಡ್ ನಂತರ ರಾಜ್ಯದಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಬದಲಾಗುತ್ತಿರುವ ಸಾಮಾಜಿಕ ಮೌಲ್ಯ, ಆರ್ಥಿಕ ಒತ್ತಡ ಮತ್ತು ಕೌಟುಂಬಿಕ ಚಲನಶೀಲತೆಯೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ನಗರೀಕರಣ ಮತ್ತು ಬದಲಾಗುತ್ತಿರುವ ಸಾಮಾಜಿಕ ರೂಢಿಗಳಿಂದಾಗಿ ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿವೆ. ಕೌಟುಂಬಿಕ ನ್ಯಾಯಾಲಯಗಳಲ್ಲಿ ಹೆಚ್ಚಿನ ದಾವೆಗಳು ದಾಖಲಾಗುವುದರಿಂದ ಬೆಂಗಳೂರನ್ನು ವಿಚ್ಛೇದನದ ರಾಜಧಾನಿ ಎಂದು ಕರೆಯಬಹುದಾಗಿದೆ.
ವರ್ಷ
ಸರ್ಕಾರಿ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 2020ರಲ್ಲಿ 20,454 ವಿಚ್ಛೇದನಗಳು ದಾಖಲಾಗಿದ್ದು, 2021ರಲ್ಲಿ 24,141ಕ್ಕೆ ಏರಿತು. ಆದರೆ 2022ರಲ್ಲಿ 66,863 ವಿಚ್ಛೇದನ ಅರ್ಜಿಗಳು ದಾಖಲಾಗುವ ಮೂಲಕ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. 20230 41,234 202400 36,952 ಪ್ರಕರಣಗಳು ದಾಖಲಾಗಿವೆ. 2025ರ ಮೊದಲ ಎರಡು ತಿಂಗಳಲ್ಲಿ 5,576 ವಿಚ್ಛೇದನ ಅರ್ಜಿಗಳು ದಾಖಲಾಗಿ ಇರುವುದು ಕಳವಳಕಾರಿಯಾಗಿದೆ.
ನಾಲ್ಕು ವರ್ಷಗಳ ಹಿಂದೆ ನಗರದಲ್ಲಿ ಕೇವಲ ಎರಡು ಕೌಟುಂಬಿಕ ನ್ಯಾಯಾಲಯಗಳಿದ್ದವು. ಆದರೆ ಈಗ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ನಾಲ್ಕು ನ್ಯಾಯಾಲಯಗಳಿವೆ ಎಂದು ವಕೀಲರೊಬ್ಬರು ಮಾಹಿತಿ ನೀಡಿದರು. ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತಿದಿನ ಸರಾಸರಿ 40 ವಿಚ್ಛೇದನ ಪ್ರಕರಣಗಳು ದಾಖಲಾಗುತ್ತವೆ. ಪ್ರತಿ ಪ್ರಕರಣವು
ಮುಕ್ತಾಯಗೊಳ್ಳಲು ಕನಿಷ್ಠ ಮೂರರಿಂದ ಐದು ವರ್ಷಗಳು ಬೇಕಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ. ಇಂದಿನ ಯುವ ಪೀಳಿಗೆ ಪೋಷಕರ ಮಾತನ್ನು ದಿಕ್ಕರಿಸಿ ಪ್ರೀತಿ ಪ್ರೇಮ ಎಂಬ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಯುವಕ-ಯುವತಿಯರು
ಇತ್ತೀಚಿನ ದಿನಗಳಲ್ಲಿ ನವ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಹೆಚ್ಚಾಗಿದೆ. ನಾನು ಸ್ವತಂತ್ರರು ಎಂಬ ಭಾವನೆ ಅವರಲ್ಲಿ ಮೂಡಿದೆ. ನಾನು ಎಂಬ ಅಹಂಕಾರವನ್ನು ಬಿಡಬೇಕು. ಇಬ್ಬರೂ ಬೇರೆ ಬೇರೆ ವಾತಾವರಣದಲ್ಲಿ ಬೆಳೆದು ಬಂದಿರುತ್ತಾರೆ. ಅವರ ವ್ಯಕ್ತಿತ್ವ ಕೂಡಾ ವಿಭಿನ್ನವಾಗಿರುತ್ತದೆ. ಆದ್ದರಿಂದ ಪೋಷಕರು ಮತ್ತು ಹಿತೈಷಿಗಳು ನವದಂಪತಿಗಳಿಗೆ ಮಾರ್ಗದರ್ಶನ ನೀಡಬೇಕು.
ಡಾ.ಆನಂದ ಪಾಂಡುರಂಗಿ, ಮನೋವೈದ್ಯ
ಮದುವೆಗೂ ಮುನ್ನಾ ಅನ್ಯೂನ್ಯವಾಗಿ ಇರುತ್ತಾರೆ. ಮದುವೆ ಬಳಿಕ ಕೆಲಸದ ಒತ್ತಡ, ಕುಟುಂಬ ನಿರ್ವಹಣೆಯ ಕೊರತೆ, ಹಿರಿಯರ ಮಾರ್ಗದರ್ಶನದ ಕೊರತೆ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ವಿಚ್ಛೇದನ ಪಡೆಯಲು ಮುಂದಾಗುತ್ತಿದ್ದಾರೆ. ಈ ನಡೆ ಪೋಷಕರಲ್ಲಿ ಕಳವಳ ಮೂಡಿಸಿದೆ.
ಹೆಚ್ಚಿನ ವಿಚ್ಛೇದನಗಳು ಮದುವೆಯಾದ ಐದು ವರ್ಷಗಳಲ್ಲಿ ವರದಿಯಾಗುತ್ತಿವೆ. ದಂಪತಿಗಳ ಈ ನಿರ್ಧಾರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಬಾಲ್ಯದಲ್ಲಿ ಪೋಷಕರ ಪ್ರೀತಿಯಿಂದ ವಂಚಿತರಾಗಿ ಬೆಳೆಯುತ್ತಾರೆ. ಮಕ್ಕಳು ಬಾಲ್ಯದಲ್ಲಿ ಪೋಷಕರೊಂದಿಗೆ ಬೆಳೆಯಬೇಕು ಎಂಬುದು ಹಿರಿಯರ ಆಶಯವಾಗಿದೆ. ಮೌಲ್ಯ ಆಧಾರಿತ ಸಂಬಂಧಗಳನ್ನು ಭೌತಿಕ ಪ್ರೀತಿ ಬದಲಾಯಿಸಿದೆ. ಕುಟುಂಬದ ತ್ಯಾಗಗಳು ವೈಯಕ್ತಿಕ ಮೌಲ್ಯಗಳನ್ನು ರಾಜಿ ಮಾಡಿಕೊಳ್ಳುತ್ತವೆ ಎಂಬ ತಪ್ಪು ಕಲ್ಪನೆಯು ವಿವಾಹಗಳಿಗೆ ಹಾನಿ ಮಾಡುತ್ತಿದೆ. ಆದರೆ, ಕೌಟುಂಬಿಕ ವಿವಾದಗಳು ಮಕ್ಕಳನ್ನು ಸಮಾಜ ವಿರೋಧಿ ವರ್ತನೆಯತ್ತ ತಳ್ಳಬಹುದು ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ