COVID-19 Resources for Mental Health Coaches... Learn More
ಮಾತು ಹೆಂಗಿರಬೇಕು?
ಮಾತು ಆಡಿದರೆ ಮುತ್ತಿನಂತಿರಬೇಕು. ಮಾತು ಮೃತ್ಯುವಾಗಬಾರದು. ಮಾತೇ ಮಾಣಿಕ್ಯ. ಇವು ಮಾತಿನ ಬಗ್ಗೆ ಪ್ರಚಲಿತ ನಾಣ್ಣುಡಿಗಳು. ಹೌದು ಇದು ಇಜ. ನಾವಾಡುವ ಮಾತು ಹೇಗಿರಬೇಕು ಎಂಬುದನ್ನು ನನ್ನ ಸ್ನೇಹಿತರಲ್ಲೊಬ್ಬರಾಗಿದ್ದ ದಿವಂಗತ ಎಂ.ಬಿ.ದಿಲಶಾದ್ ಅವರು ಅಷ್ಟೇ ಸೊಗಸಾಗಿ ಹೇಳುತ್ತಿದ್ದರು: ಮಾತು ಹೆಂಗಿರಬೇಕು ಎಂದರೆ ಮಾತು ಹಂಗೂ ಇರಬಾರದು. ಹಿಂಗೂ ಇರಬಾರದು, ಯಾರ ಹಂಗೂ ಇರಬಾರದು. ಕೇಳಲು ಇದು ಹಾಸ್ಯವೆನಿಸಿದರೂ ಇದರ ಹಿಂದಿರುವ ಸತ್ಯ ಮಾತ್ರ ಶಾಶ್ವತ ಮತ್ತು ವಾಸ್ತವ. ಇಷ್ಟೆಲ್ಲಾ ಅರಿವು ಇದ್ದರೂ ಮನುಷ್ಯ ಒಮ್ಮೊಮ್ಮೆ ಸಂದರ್ಭವೋ, ಆವೇಶವೋ ಇಲ್ಲವೋ ಕೋಪದ ಭರದಲ್ಲಿ ಏನೇನೋ ಮಾತಾಡಿ ಬಿಡುತ್ತಾನೆ. ಒಂದು ಕ್ಷಣದ ಆ ಮಾತು ಮಾಡುವ ಅನಾಹುತದ ಅರಿವು ಕ್ರಮೇಣ ಅರ್ಥವಾಗುತ್ತ ಹೋಗುತ್ತದೆ.ಅವರು ಸುಮಾರು 55ರಿಂದ 60 ವರ್ಷದ ಯಜಮಾನರು. ಪೂರ್ವಜರಿಂದಲೂ ಸಿರಿವಂತರು. ಒಂದರ್ಥದಲ್ಲಿ ಜಮೀನ್ದಾರರು. ಬಹಳಷ್ಟು ವರ್ಷಗಳಿಂದ ಇವರ ಜಮೀನಿನ ಉಸ್ತುವಾರಿ ಮಾಡುತ್ತಾ ಬಂದಿದ್ದ. ಹೀಗಾಗಿ ಇವರು ನಿಶ್ಚಿಂತೆಯಿಂದ ಆತನ ಮೇಲೆ ಬಿಟ್ಟುಹಾಯಾಗಿದ್ದರು. ಒಂದೊಮ್ಮೆ ಅದೇನೋ ಪ್ರಸಂಗಬಂದಿತೋ ಗೊತ್ತಿಲ್ಲ ಇವರು ಆತನನ್ನು ಕರೆದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಕೆಲಸದಿಂದಲೇ ಕಿತ್ತೆಸೆದು ಕಳಿಸಿದರು. ಅವನ ಜಾಗಕ್ಕೆ ಬೇರೊಬ್ಬರನ್ನು ನೇಮಿಸಿದರು. ಆಗ ದಿನದಿಂದ ದಿನಕ್ಕೆ ದೂರುಗಳು ಬರಲಾರಂಭಿಸಿದವು. ಇದು ಈ ಜಮೀನ್ದಾರರ ಟೆನ್ನನ್ ಹೆಚ್ಚಿಸತೊಡಗಿತು. ಇಷ್ಟು ದಿನ ಸಂಪೂರ್ಣ ಜವಾಬ್ದಾರಿ ಆತನ ಮೇಲೆ ಬಿಟ್ಟು ನಿರಮ್ಮಳವಾಗಿದ್ದ ಜಮೀನ್ದಾರರಿಗೆ ಎಲ್ಲೋ ಎಡವಟ್ಟು ಆಯಿತು ಎನಿಸತೊಡಗಿತು. ಮೊದಲಿದ್ದ ವ್ಯಕ್ತಿ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಿದ್ದ. ನಾನೇ ಯಾರದೋ ಮಾತು ಕೇಳಿ ವಾಸ್ತವ ಅರಿತುಕೊಳ್ಳದೇ ಇಲ್ಲಸಲ್ಲದ ಮಾತುಗಳನ್ನಾಡಿ ಕಳಿಸಿಬಿಟ್ಟೆ ಎಂದು ಕೊರಗಿದರು. ಆದರೆ ಕಾಲಮಿಂಚಿಯಾಗಿದೆ. ಮನಸ್ಸಿಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಿ ನನ್ನ ಬಳಿ ಚಿಕಿತ್ಸೆಗೆ ಬಂದರು. ಇಲ್ಲಿ ನಾವು ಅರಿಯಬೇಕಾದ ಸಂಗತಿ ಎಂದರೆ ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ. ಮಾತು ಎರಡೇ ಆದರೂ ಅದು ಮಾಡುವ ಅನಾಹುತ ಅಗಾಧ. ಆ ಎಚ್ಚರಿಕೆ ಎಲ್ಲರಲ್ಲಿರಬೇಕು.
