COVID-19 Resources for Mental Health Coaches... Learn More

0836-2773878

ಮದುವೆಯಾಗಲು ಬೇಕಾದ ಹೆಣ್ಣು ಪುತ್ರಿಯಾಗಿ ಏಕೆ ಬೇಡ?

ಹುಟ್ಟು ಮತ್ತು ಸಾವು ಎರಡೂ ಯಾರ ಕೈಯಲ್ಲಿ ಇಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ. ಗಂಡು ಅಥವಾ ಹೆಣ್ಣಾಗಿ ಹುಟ್ಟಬೇಕು ಎನ್ನುವುದೂ ಯಾರ ಕೈಯಲ್ಲೂ ಇಲ್ಲ. ಅದೊಂದು ನಿಸರ್ಗದ ಕೊಡುಗೆ. ಹೀಗಿದ್ದಾಗೂ ನಮ್ಮಲ್ಲಿ ಇನ್ನೂ ಕೆಲವರು ಇಂಥದ್ದೇ ಬೇಕು. ಹೀಗೆ ಆಗಬೇಕು ಎನ್ನುವ ಹುಚ್ಚು ನಿರೀಕ್ಷೆ ಮಾಡುತ್ತಾರೆ. ಇದು ತಿಳಿದು ತಿಳಿದು ಮಾಡುವ ಮೂರ್ಖತನವೋ ಇಲ್ಲವೇ ಮೌಡ್ಯವೋ ಗೊತ್ತಿಲ್ಲ. ಆದರೆ ಇಂಥವರಿಂದ ಮಾನಸಿಕ ಆಘಾತಗಳು ಮಾತ್ರ ಸಂಭವಿಸುತ್ತಲೇ ಇವೆ. ಸ್ವಸ್ಥ ಸಮಾಜದ ಆಶಯಕ್ಕೆ ಇಂಥವರು ಕಂಟಕವೇ ಸರಿ. ಮದುವೆಯಾಗಲು ಬೇಕಾದ ಹೆಣ್ಣು ಮಗಳಾಗಿ ಬೇಡ ಎಂದರೆ ಇದು ಯಾವ ನ್ಯಾಯ? ಹೆಣ್ಣು ಜಗದ ಕಣ್ಣು ಎಂದು ಬಣ್ಣಿಸುವ ಕಾಲದಲ್ಲಿ ಇಂಥ ನಿರೀಕ್ಷೆಗಳು ಅಪ್ರಸ್ತುತ.

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಗ್ರಾಮದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದನ್ನು ನಾವು ನೀವೆಲ್ಲಾ ಓದಿದ್ದೇವೆ, ತಿಳಿದಿದ್ದೇವೆ. ಮೂರು ಹೆಣ್ಣು ಹೆತ್ತಳೆಂದು ಅತ್ತೆ, ಮಾವ, ಗಂಡ ಸೇರಿ ಮಾಟಗಾತಿಯ ಸೂಚನೆಯಂತೆ ಮಹಿಳೆಯ ನೆತ್ತಿ ಬೋಳಿಸಿ ಕೂದಲು ಕಿತ್ತು ಸುಡಗಾಡಿನಲ್ಲಿ ಸುಟ್ಟು ಹಾಕಿದ. ಈ ಘಟನೆ ಇಡೀ ಮನುಕುಲಕ್ಕೆ ಕಳಂಕ ಎಂದರೆ ತಪ್ಪಾಗದು. ಇಂತಹ ಅಸಹನೀಯ ಘಟನೆಗಳಿಂದ ಮಾನವೀಯತೆ ಮಲಗಿದೆಯೇ ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ.

ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಮೂರನೇ ಮಗು ಆದಾಗಿನಿಂದ ಅತ್ತೆ, ಮಾವ, ಗಂಡ ಸಾಲಾಗಿ ಮೂರು ಹೆಣ್ಣು ಹೆತ್ತಿದ್ದೀಯಾ ಎಂದು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ

ನೀಡುತ್ತಿದ್ದರು. ನಾಲ್ಕನೇ ಮಗು ಗಂಡಾಗಬೇಕೆಂದು ಬಯಸಿ ಮಾಟಗಾತಿ ಬಳಿ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಆಗ ಮಾಟಗಾತಿ ದೆವ್ವ ಬಡಿದಿದೆ ಎಂದು, ಅದನ್ನು ಬಿಡಿಸಿದರೆ ಗಂಡು ಮಗುವಾಗುವೆಂದು ಹೇಳಿ ನಂಬಿಸಿದಳು. ಆಕೆಯನ್ನು ಅಡವಿಗೆ ಕರೆದುಕೊಂಡು ಹೋಗಿ ಕೂದಲು ಕಿತ್ತುಕೊಡುವಂತೆ ಕೇಳಿದರು. ಆಗ ಅದಕ್ಕೆ ಒಪ್ಪಲಿಲ್ಲ. ಆಕೆಗೆ ಅಲ್ಲಿಯೇ ಹೊಡೆದು ಮನೆಗೆ ಕರೆತಂದರು. ಇದಾದ ನಂತರ ಪತ್ನಿ ಮನೆಯಲ್ಲಿ ಚಪಾತಿ ಮಾಡುತ್ತಿದ್ದಾಗ ಗಂಡ ಆಕೆಯನ್ನು ಎಳೆದುಕೊಂಡು ಹೋದ, ಅತ್ತೆ-ಮಾವ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡರು, ಸ್ವತಃ ಗಂಡನೇ ಬೇಡ್‌ನಿಂದ ಆಕೆಯ ನೆತ್ತಿಯ ಕೂದಲನ್ನು ಚರ್ಮ ಕಿತ್ತುಬರುವಂತೆ ಬೋಳಿಸಿ ಆ ಕೂದಲನ್ನು ಚರ್ಮ ಸಹಿತವಾಗಿ ಸುಡುಗಾಡಿನಲ್ಲಿ ಸುಟ್ಟು ಬಂದಿದ್ದಾರೆ. ಅಮಾನವೀಯ ಕೃತ್ಯಕ್ಕೊಳಗಾಗಿರುವ ಮಹಿಳೆ ಘಟನೆಯಿಂದ ತೀವ್ರ

ಜರ್ಜರಿತಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತವರಿಗೆ ಬಂದು ಜೀವ ಉಳಿಸಿಕೊಂಡಿದ್ದಾಳೆ. ದೈಹಿಕವಾಗಿ ಜತೆಜತೆಗೆ ಮಾನಸಿಕವಾಗಿಯೂ ಆಕೆ ಕುಗ್ಗಿ ಹೋಗಿದ್ದಾಳೆ. ಎದುರಿಗೆ ಯಾರಾದರೂ ಗಂಡನ ಮನೆಕಡೆಯವರು ಬಂದರೆ ಇಂದಿಗೂ ಭಯಭೀತಳಾಗುತ್ತಾಳೆ. ತನ್ನ ಮೇಲಾದ ದಾಳಿ ನೆನೆದರೆ ಬೆಚ್ಚಿ ಬೀಳುತ್ತಾಳೆ. ನಿದ್ದೆಯೂ ಅಷ್ಟಕ್ಕಷ್ಟೇ ಎನ್ನುವಂತಾಗುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ.

ಆದರೆ ಆಕೆ ಮೇಲೆ ನಡೆದ ದೌರ್ಜನ್ಯ ಮತ್ತು ಅಮಾನವೀಯ ಅಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ಜರ್ಝರಿತಗೊಳಿಸಿದೆ. ಮಾನಸಿಕವಾಗಿ ಆಕೆಗೆ ಆದ ಆಘಾತ ನಮ್ಮೆಲ್ಲರ ಊಹೆಗೂ ಮೀರಿದ್ದು. ಯಾವುದೇ ಸನ್ನಿವೇಶವು ನಿಮ್ಮನ್ನು ಅತಿಯಾದ ಒತ್ತಡಕ್ಕೆ ಒಳಪಡಿಸಿ ಒಂಟಿಯಾಗಿ ಭಾವಿಸುವಂತೆ ಮಾಡುತ್ತದೆ. ನೀವು ಹೆಚ್ಚು ಭಯಭೀತರಾಗಿ ಮತ್ತು ಅಸಹಾಯಕರಾಗಿ ಭಾವಿಸಿದಷ್ಟೂ ಆಘಾತಕ್ಕೊಳಗಾಗುವ ಸಾಧ್ಯತೆ ಹೆಚ್ಚು. ಈ ಪ್ರಕರಣದಲ್ಲೂ ಆಗಿದ್ದೂ ಅದುವೇ. ಆಘಾತ ಎಂದರೆ ವ್ಯಕ್ತಿಯ ಜೀವನಶೈಲಿ, ಯೋಗಕ್ಷೇಮ ಅಥವಾ ಆರೋಗ್ಯದ ಮೇಲೆ ಉಂಟಾಗುವ ಅಪಾಯಗಳು ಅಥವಾ ಅಪಾಯಗಳ ಪರಿಣಾಮವಾಗಿ ಉಂಟಾಗುವ ಮಾನಸಿಕ ಪರಿಣಾಮಗಳು. ಇದು ಸಾಮಾನ್ಯವಾಗಿ ಪ್ರಮುಖ ಒತ್ತಡದ ಘಟನೆ ಅಥವಾ ಅಪಾಯಕಾರಿ ಪರಿಸ್ಥಿತಿಯ

ನಂತರ ಸಂಭವಿಸುತ್ತದೆ. ಈ ಆಘಾತಕಾರಿ ಘಟನೆಗಳು ಬಲವಾದ ಭಾವನೆಗಳು, ಮರುಕಳಿಸುವ ನೆನಪುಗಳು ಮತ್ತು ಹೆಚ್ಚಿನ ಮಟ್ಟದ ಆತಂಕಕ್ಕೆ ಕಾರಣವಾಗಬಹುದು. ಭಾವನಾತ್ಮಕ ಪ್ರತಿಕ್ರಿಯೆಯಾಗಿ, ಮಾನಸಿಕ ಆಘಾತವು ವ್ಯಕ್ತಿಯನ್ನು ಅತಿಯಾಗಿ ಆವರಿಸಬಹುದು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಅವರ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಆಘಾತವು ನಿಮ್ಮನ್ನು ದುಃಖಕರ ಭಾವನೆಗಳು, ನೆನಪುಗಳು ಮತ್ತು ಆತಂಕದಿಂದ ಬಳಲುವಂತೆ ಮಾಡಬಹುದು, ಅದು ಹೋಗುವುದಿಲ್ಲ. ಇದು ನಿಮ್ಮನ್ನು ಮರಗಟ್ಟುವಿಕೆ, ಸಂಪರ್ಕ ಕಡಿತ ಮತ್ತು ಇತರ ಜನರನ್ನು ನಂಬಲು ಅಸಮರ್ಥರನ್ನಾಗಿ ಮಾಡಬಹುದು. ಅದನ್ನೇ ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಆಘಾತಕಾರಿ ಅನುಭವಗಳು ಹೆಚ್ಚಾಗಿ ಜೀವ ಅಥವಾ ಸುರಕ್ಷತೆಗೆ ಬೆದರಿಕೆಯನ್ನು ಉಂಟುಮಾಡು ಇವೆ. ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಶಿಕ್ಷಣದ ಅಗತ್ಯ ಮುಖ್ಯ. ನಾವಿಲ್ಲಿ ಹೇಳಿರುವುದು ಒಂದು ಪ್ರಕರಣವಷ್ಟೇ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಬಂದರೂ ಯಾರೂ ಅದನ್ನು ಮಾನವೀಯ ದೃಷ್ಟಿಯಿಂದ ನೋಡುವ ದೃಷ್ಟಿಕೋನ ಅಗತ್ಯ. ಇದು ಸ್ವಸ್ಥ ಸಮಾಜದ ಲಕ್ಷಣವೂ ಹೌದು.

About Author: