COVID-19 Resources for Mental Health Coaches... Learn More

0836-2773878

ಪಿಎನ್‌ಜಿಯಿಂದ ಚಿನ್ನಾಭರಣ ಮೇಳಕ್ಕೆ ಚಾಲನೆ

ನಗರದ ದೈವಜ್ಞ ಸಮುದಾಯ ಸಭಾಭವನದಲ್ಲಿ ಮೆ| ಪುರುಷೋತ್ತಮ ನಾರಾಯಣ ಗಾಡಗೀಳ ಸರಾಫ್ ಮತ್ತು ಜ್ಯುವೆಲರ್ಸ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ರವಿವಾರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.

ನಂತರ ಮಾತನಾಡಿದ ಪಿಎನ್ಜಿಯ ವ್ಯವಸ್ಥಾಪಕರು, 193 ವರ್ಷಗಳ ವೈಭವಯುತ ಪರಂಪರೆ ಹೊಂದಿರುವ ಮೆ ಪುರುಷೋತ್ತಮ ನಾರಾಯಣ ಗಾಡಗೀಳ ಸರಾಫ್ ಮತ್ತು ಜ್ಯುವೆಲರ್ಸ್‌ನವರು ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಭವ್ಯ ಪ್ರದರ್ಶನ ಮತ್ತು ಮಾರಾಟ ಮಾಡುತ್ತ ಬಂದಿದ್ದಾರೆ. ನಗರದಲ್ಲಿ ಡಿ.23ರ ವರೆಗೆ ಮೇಳ ನಡೆಯಲಿದೆ. ಇಲ್ಲಿನ ಜನತೆ ಇದರ ಸದುಪಯೋಗ ಪಡೆಯಬೇಕು ಎಂದರು.

ಪ್ರದರ್ಶನದಲ್ಲಿ ಚಿನ್ನದ ಆಭರಣಗಳ ತಯಾರಿಕೆ ಶುಲ್ಕದ ಮೇಲೆ ಶೇ.30ರ ವರೆಗೆ ರಿಯಾಯಿತಿ ಮತ್ತು ವಜ್ರದ ಆಭರಣಗಳ ತಯಾರಿಕೆ ಶುಲ್ಕದ ಮೇಲೆ ಶೇ.100ರ ವರೆಗೆ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಚಿನ್ನಾಭರಣ ಅಂಗಡಿಯು ಅತ್ಯಾಧುನಿಕ ವಿನ್ಯಾಸ, ಗುಣಮಟ್ಟದಆಭರಣಗಳ ಪ್ರದರ್ಶನ ಏರ್ಪಡಿಸಿದೆ. ಚಿನ್ನಾಭರಣಗಳಲ್ಲಿ ಗೋಕಾಕ ನೆಕ್ಸಸ್, ಬಾಂಬೈ ಆ್ಯಂಟಿಕ್ ನೆಕ್ಸಸ್ ಮತ್ತು ಬಳೆಗಳ ಫ್ಯಾನ್ಸಿ ಡಿಸೈನ್ಸ್, ಮಂಗಳಸೂತ್ರಗಳಲ್ಲಿ ಆ್ಯಂಟಿಕ್, ಫ್ಯಾನ್ಸಿ ಡೇಲಿವೇ‌ರ್ ದೊರೆಯುತ್ತವೆ. ವಿಶೇಷವಾಗಿ ಪಿಎನ್‌ಜಿಯೂ ‘ಮುಕ್ತಾ’ ಎಂಬ ಲೈಟ್‌ ವೇಟ್ ಆಭರಣಗಳ ಕಲೆಕ್ಷನ್ ಗ್ರಾಹಕರಿಗೆ ಪರಿಚಯಿಸಿದೆ. ವಜ್ರದ ಆಭರಣಗಳು ಮತ್ತು ರತ್ನ-ಹವಳದ

ಆಭರಣಗಳ ಜತೆಯಾಗಿ ಬೆಳ್ಳಿ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮನೋವೈದ್ಯ ಡಾ| ಆನಂದ ಪಾಂಡುರಂಗಿ, ಎಸ್‌ಡಿಎಂ ಕಾಲೇಜಿನ ಎಚ್ ಒಡಿ ಡಾ| ರಾಘವೇಂದ್ರ ಕುಲಕರ್ಣಿ ಆಗಮಿಸಿದ್ದರು. ಪಿಎನ್‌ಜಿ ಪರಿವಾರದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಇದ್ದರು.

About Author: