COVID-19 Resources for Mental Health Coaches... Learn More
ನ್ಯೂನತೆ, ವೈಕಲ್ಯಗಳು ದೈಹಿಕ ತೊಂದರೆಯೇ ಹೊರತೂ ಮನಸ್ಸಿಗಲ್ಲ

ನನ್ನದೇನುತಪ್ಪು? ನಾನೇಕೆ ಹೀಗಾದೆ? ಆದದ್ದು ಆಗಿ ಹೋಯಿತು. ಇನ್ನು ನಾನು ಸುಮ್ಮನಿರುವುದಿಲ್ಲ. ಸಾಧನೆ ಮಾಡದೆ ಬಿಡೆನು. -ಇದು 20 ವರ್ಷದಯುವಕನ ಮಾತುಗಳು.
ಆತನ ಈ ಮಾತು ಕೇಳಿದರೆ ಆತನ ಜೀವನದಲ್ಲಿ ಅಂಥಾದ್ದೇನು ಆಗಿದೆ ಎಂದು ಕುತೂಹಲ ಮೂಡುವುದು ಸಹಜ. ಆತನಿಗೆ ಆದದ್ದೂ ಬೇರೇನೂ ಅಲ್ಲ. ಮಾನಸಿಕ ಖಿನ್ನತೆ, ಏಕಾಂಗಿತನ. ಆತ ಎಲ್ಲರಂತೆ ಚೆನ್ನಾಗಿಯೇ ಇದ್ದ. ಸ್ನೇಹಿತರೂ ತುಂಬಾ ಇದ್ದರು. ವಯೋಸಹಜ ಚಟುವಟಿಕೆಗಳೊಂದಿಗೆ ಲೈಫ್ ಎಂಜಾಯ್ ಕೂಡ ಮಾಡುತ್ತಿದ್ದ. ದಿನಗಳು ಹೀಗೆ ಸಾಗಿದವು. ಅದೊಮ್ಮೆ ಆತನಿಗೆ ಇದ್ದಕಿದ್ದಂತೆ ಕಿವಿ ಕೇಳದಂತಾಯಿತು. ಮನೆಯಲ್ಲಿ ಪಾಲಕರು, ಸ್ನೇಹಿತರು ಹೇಳಿದ ಮಾತು ಕೇಳದ ಹಾಗಾಯಿತು. ಯಾರಾದರೂ ಮಾತನಾಡಿಸಿದರೆ ಉತ್ತರಿಸದಂತಾಯಿತು. ಯಾರು ಏನೇ ಕೂಗಿದರೂ ಶ್ರವಣ ಸಾಮರ್ಥ್ಯ ಸಂಪೂರ್ಣ ಇಲ್ಲದಂತಾಗಿತ್ತು. ಎಷ್ಟೋ ಆಸ್ಪತ್ರೆಯ ಬಾಗಿಲು ತಟ್ಟಿಯೂ ಆಯಿತು. ಇದು ಆತ ಹಾಗೂ ಆತನ ಕುಟುಂಬಕ್ಕೆ ಬರಸಿಡಿಲು ತಂದಿತ್ತು. ಆದರೆ ಅನ್ಯದಾರಿ ಇರಲಿಲ್ಲ. ಹಾಗೆಯೇ ದಿನಗಳು ಸಾಗಿದವು. ದಿನದಿಂದ ದಿನಕ್ಕೆ ಚಿಂತೆ ಕಾಡಲಾರಂಭಿಸಿತು. ಆ ಯುವಕನ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆ ಶುರುವಾಯಿತು. ದಿಢೀರ್ ಕೋಪಗೊಳ್ಳುವುದು. ಅಸಹನೆ ಮಾಡಿಕೊಳ್ಳುವುದು ಆರಂಭವಾಯಿತು.
ಈತನ ದೌರ್ಬಲ್ಯಗೊತ್ತಾಗುತ್ತಿದ್ದಂತೆ ಸ್ನೇಹಿತರೂ ಕ್ರಮೇಣ
ದೂರವಾಗತೊಡಗಿದರು. ಆದರೆ ಹೆತ್ತವರಿಗೆ ಅನಿವಾರ್ಯ. ಅವರು ದೂರ ಉಳಿಯದಿದ್ದರೂ ಆತನಿಗೆ ತನ್ನ ಬಗ್ಗೆಯೇ ಜುಗುಪ್ಪೆ ಉಂಟಾಯಿತು. ಊಟ ರುಚಿಸಲಿಲ್ಲ. ಓದಿನಲ್ಲೂ ಆಸಕ್ತಿ ಕ್ಷೀಣಲಾರಂಭಿಸಿತು. ಯಾವ ವಿಷಯದಲ್ಲೂ ಯಾವುದೇ ಆಸಕ್ತಿ ಉಳಿಯದಂತಾಯಿತು. ಇದು ಪಾಲಕರನ್ನು ಮತ್ತಷ್ಟು ಆತಂಕಕ್ಕೆ ದೂಡಿತು.
‘ಸ್ನೇಹಿತರು, ಮನೆಯವರು ನನ್ನಿಂದ ದೂರವಾಗುತ್ತಿದ್ದಾರೆ’ ಎಂದು ಅಂದುಕೊಂಡ ම ಸಿಟ್ಟಿಗೇಳಲಾರಂಭಿಸಿದ. ದಿನೇ ದಿನೆ ಹಿಂಸಾತ್ಮಕ ನಡವಳಿಕೆ ಶುರುವಾಯಿತು. ರೇಗುವುದು, ಕೆಲವೊಮ್ಮೆ ಎದುರಿದ್ದವರ ಮೇಲೆ ಹಲ್ಲೆ ಮಾಡಲು ಆರಂಭಿಸಿದ. ಇದು ಎಲ್ಲರ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಯಿತು.
‘ಇರುವ ಒಬ್ಬ ಮಗ, ದಷ್ಟಪುಷ್ಟವಾಗಿದ್ದ. ಅದೇಕೇ ಹೀಗಾಯಿತು ಎಂದು ಪಾಲಕರು ದಿಕ್ಕು ತೋಚದಂತಾದರು. ಮುಂದೇನು? ಎಂದು ಹಿತೈಷಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಆಗ ಯಾರೋ ಒಬ್ಬರು ಆತನನ್ನು ಮನೋವೈದ್ಯರ ಬಳಿ ತೋರಿಸುವಂತೆ ಸಲಹೆ ನೀಡಿದರು.
ಅದರಂತೆ ಅವರು ನನ್ನ ಬಳಿ ಕರೆದುಕೊಂಡು ಬಂದರು. ನಾನು ಅವನ ಸಂಪೂರ್ಣ ಮಾಹಿತಿ ಕೇಳಿದೆ. ಆತನ ನ್ಯೂನತೆ ಯಾರ ಗಮನಕ್ಕೂ ಬಾರದಿರುವುದೇ ಆತನ ಸಮಸ್ಯೆಗೆ ಮೂಲ ಎಂಬುದನ್ನು ಅರಿತೆ. ಆಪ್ತ ಸಮಾಲೋಚನೆ ಮಾಡಿದಾಗ ಇರುವ ವಿಷಯ ತಿಳಿಯಿತು.
ಹಲೋ ಡಾಕ್ಟರ್
ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು
drpandurangi@yahoo.com
ಇದು ಏನೂ ಅಲ್ಲ. ಇದಕ್ಕಿಂತ ಹೆಚ್ಚಿನ ಪ್ರಮಾಣದ ವೈಕಲ್ಯ ಇದ್ದರೂ ಸಾಧನೆಯ ಶಿಖರ ಏರಿದವರು ನಮ್ಮ ಮಧ್ಯೆ ಅನೇಕರಿದ್ದಾರೆ. ಉದಾಹರಣೆಗೆ ಸುಧಾಚಂದ್ರನ್ ( ನಾಚೆ ಮಯೂರಿ ) ಹುಟ್ಟಿದಾಗಿಂದ ಯಾವುದೇ ನ್ಯೂನತೆ ಇರದಿದ್ದರೂ ಒಂದು ಕಾಲನ್ನು ಕಳೆದುಕೊಂಡರು. ಇದರಿಂದ ದಿಗ್ಧಾಂತಗೊಳ್ಳದೇ ತನ್ನ ಒಂದೇ ಕಾಲಿನಿಂದ ನೃತ್ಯ ಮಾಡಿ ಸಾಮಾಜಕ್ಕೆ ಮಾದರಿಯಾಗಿದ್ದಾರೆ. ಹಾಗೆ ನೋಡಿದರೆ ಈತನ ವೈಕಲ್ಯ ಏನೂ ಅಲ್ಲ. ಧೈರ್ಯಗುಂದದಿರಿ ಎಂದು ತಿಳಿಸಿದೆ. ಜಗತ್ತು ವಿಶಾಲವಾಗಿದೆ. ಮುನ್ನುಗ್ಗು ಎಂದು ಆತನಲ್ಲಿ ಆತ್ಮಸೈರ್ಯ ತುಂಬಿದೆ. ಹಲವು ಸಾಧಕರ ಉದಾಹರಣೆ ನೀಡಿದೆ. ಅದೇ ರೀತಿ ಆತನ ಖಿನ್ನತೆ ಸಮಸ್ಯೆಗೆ ವೈಜ್ಞಾನಿಕ ಚಿಕಿತ್ಸೆ ಕೂಡ ನೀಡಿದೆ. ಆತನಿಗೆ ಆಕಾಶವೇ ಕಳಚಿ
ಬಿದ್ದ ಅನುಭವ ಆದದ್ದು ಯಾವಾಗ ಎಂದರೆ ಎಲ್ಲರೂ ತನ್ನಿಂದ ದೂರವಾಗತೊಡಗಿದರೋ ಆಗ. ಇದರಿಂದಾಗಿ ಆತ ಏಕಾಂಗಿತನ ಅನುಭವಿಸಲಾರಂಭಿಸಿದ.
ಸಾಮಾಜಿಕ ಸಂಬಂಧಗಳು ಕಡಿತಗೊಳ್ಳುತ್ತಿದ್ದಂತೆ ಆತ ಕುಸಿದು ಹೋದ. ಇದರಲ್ಲಿ ಆತನ ತಪ್ಪು ಏನೂ ಇಲ್ಲ. ಆಪ್ತಸಲಹೆ ಮತ್ತು ಚಿಕಿತ್ಸೆ ಜೊತೆಗೆ ಶ್ರವಣ ತಜ್ಞರ ಮಾರ್ಗದರ್ಶನ ಹಾಗೂ ಸಲಹೆಯ ನಂತರ ಅವನ ಸಮಸ್ಯೆ ನಿವಾರಣೆಯಾಯಿತು.
ಈ ಪ್ರಕರಣದ ಮೂಲಕ ನಾವೆಲ್ಲ ತಿಳಿಯಬಹುದಾದುದು ಏನೆಂದರೆ ಸಾಧನೆ ಯಾರೊಬ್ಬರ ಸ್ವತ್ತಲ್ಲ. ನ್ಯೂನತೆಗಳು, ವೈಕಲ್ಯಗಳು ದೈಹಿಕವಾದುವೇ ಹೊರತು ಮನಸ್ಸಿಗೆ ಅಲ್ಲ. ಮನಸ್ಸಿದ್ದರೆ ಮಾರ್ಗ ಎಂಬುದನ್ನು. ಮನಸ್ಸು ಮಾಡಿದರೆ ಮಾನವ ಮಾಧವನಾಗಬಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಅರಿತು ಸಾಗಬೇಕು. ಅದು ಬಿಟ್ಟು ಜೀವನವೇ ಮುಗಿದಂತೆ ಕೈ ಚೆಲ್ಲಬಾರದು. ಏನಾಗಲಿ ಮುಂದೆ ಸಾಗಬೇಕು. ಬಯಸಿದ್ದೆಲ್ಲಾ ಸಿಗದಿದ್ದರೂ ಯತ್ನಕ್ಕೆ ಹುಸಿಯಿಲ್ಲ ಎಂದುಕೊಂಡು ದಾಪುಗಾಲು ಹಾಕಬೇಕು. ಇಂದಲ್ಲಾ ನಾಳೆ ಯಶಸ್ಸು ನಮ್ಮದೇ ಎನ್ನುವ ವಾಸ್ತವದ ಅರಿವಿರಬೇಕು.
ಆಗ ಆತನಿಗೂ ನನ್ನ ಮಾತು ನಿಜವೆನಿಸಿತು. ಸಾಧನೆಯ ಛಲದಕಿಡಿ ಹೊತ್ತಿತು. ಮೈಕೊಡವಿ ಏಳು. ಯಶಸ್ಸು ನಿನ್ನಗುರಿಯಾಗಲಿ ಎಂದು ಹುರುದುಂಬಿಸಿದ್ದೇ ತಡ ಆತನಿಗೂ ನನ್ನ ಸಲಹೆ ಹೌದೆನಿಸಿತು. ಆತನಲ್ಲಿ ಆತ್ಮವಿಶ್ವಾಸ ಮೂಡಿತು.