COVID-19 Resources for Mental Health Coaches... Learn More
“ಜೈಂಟ್ಸ್ ಶಾಲೆಯಲ್ಲಿ ನೂತನ ಲಿಫ್ಟ್, ಗ್ರಂಥಾಲಯ, ಮೂಲ ಸವಲತ್ತುಗಳ ಲೋಕಾರ್ಪಣೆ ಶಿಕ್ಷಣಕ್ಕೆ ಪ್ರಾಮುಖ್ಯ ಸಂತಸದ ಸಂಗತಿ”

ಜೈಂಟ್ಸ್ ಶಾಲೆಯಲ್ಲಿ ನೂತನ ಲಿಫ್ಟ್, ಗ್ರಂಥಾಲಯ, ಮೂಲ ಸವಲತ್ತುಗಳ ಲೋಕಾರ್ಪಣೆ ಶಿಕ್ಷಣಕ್ಕೆ ಪ್ರಾಮುಖ್ಯ ಸಂತಸದ ಸಂಗತಿ ಶಿಕ್ಷಣಕ್ಕೆ ಕರ್ನಾಟಕದಲ್ಲಿ ಸಿಗುವಷ್ಟು ಪ್ರಾಮುಖ್ಯತೆ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿ ಅನಕ್ಷರಸ್ಥರೂ ಭೂಮಿ ನೀಡಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಬಣ್ಣಿಸಿದರು.
ಇಲ್ಲಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಲಿಫ್ಟ್, ಗ್ರಂಥಾಲಯ ಸೇರಿದಂತೆ ಮೂಲ ಸವಲತ್ತುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೆಎಲ್‌ಇ ಸಂಸ್ಥೆ ಜತೆಗೆ ನನಗೆ ಉತ್ತಮ ಬಾಂಧವ್ಯವಿದೆ. ಅವರ ಶಿಕ್ಷಣ ಪ್ರೇಮಕ್ಕೆ ಮನಸೋತ ಅದೆಷ್ಟೋ ಅನಕ್ಷರಸ್ಥರೂ ಶಾಲೆ ನಿರ್ಮಾಣಕ್ಕೆ ಭೂದಾನ ಮಾಡಿದ್ದಾರೆ. ಹೀಗಾಗಿ ಕೆಎಲ್‌ಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಅಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಜೈಂಟ್ಸ್ ಶಾಲೆಯೂ ಮುಂಚೂಣಿಯಲ್ಲಿದೆ ಎಂದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರು ಹುಬ್ಬಳ್ಳಿಯ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಾಪಿಸಿರುವ ಗ್ರಂಥಾಲಯ, ಲಿಫ್ಟ್ ಸೇರಿ ಮೂಲ ಸವಲತ್ತುಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಉದ್ಘಾಟಿಸಿದರು. ಡಾ. ಆನಂದ ಪಾಂಡುರಂಗಿ, ಪರಶುರಾಮ ಊಠವಾಲೆ, ಎನ್.ಆರ್. ರವಿ, ಅಮಿತ್ ಬಾಬಜಿ, ವಿಜಯ ಕುಲಕರ್ಣಿ, ಎಂ.ಕೆ. ಬಾಬಜಿ ಇತರರು ಇದ್ದರು. ಮಾಡಿರುವ ಜೈಂಟ್ಸ್ ಸಂಸ್ಥೆ 3 ಎಕರೆ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ತಲೆ ಎತ್ತಲಿದೆ. ಈ ಮಹಾತ್ಕಾರ್ಯಕ್ಕೆ ಸಹಕಾರ ನೀಡಲಾಗುವುದು. ಸಮಾಜವೂ ಸಾಥ್ ಕೊಡಬೇಕು ಎಂದು ಅವರು ಹೇಳಿದರು. ಕಳೆದ 60 ವರ್ಷಗಳಿಂದ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಒಳ್ಳೆಯ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದ್ದರೂ ಅವರೆಲ್ಲರೂ ಎಲೆಮರೆಯ ಕಾಯಿಯಂತಿದ್ದಾರೆ. ಕೇಡು ಮಾಡುವವರ ಸಂಖ್ಯೆ ಕಡಿಮೆ ಇದ್ದರೂ ಅವರಿಗೇ ಹೆಚ್ಚಿನ ಪ್ರಚಾರ ದೊರೆಯುತ್ತಿರುವುದು ಕಳವಳಕಾರಿ. ಒಳ್ಳೆಯದನ್ನು ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ಸಮಾಜದಿಂದ ದೊರೆಯಬೇಕು ಎಂದರು. ಅತಿಥಿಯಾಗಿ ಪಾಲ್ಗೊಂಡಿದ್ದ ಮನೋರೋಗ ತಜ್ಞ ಡಾ. ಆನಂದ ಪಾಡುರಂಗಿ ಮಾತನಾಡಿ, ಎಲ್ಲ ಮಕ್ಕಳಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಶಿಕ್ಷಕರಿಂದಾಗಬೇಕು. ಸಾಧನೆಯ ಹಂಬಲದೊಂದಿಗೆ ಮಕ್ಕಳು ಓದಬೇಕು. ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು. ಅಂದಾಗ ಮಾತ್ರ ಯಶಸ್ಸು ಸಾಧ್ಯ. ವ್ಯಕ್ತಿತ್ವ ವಿಕಸನದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಪಾತ್ರ ಮಹತ್ವದ್ದು. ಅದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೈಂಟ್ಸ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪರಶುರಾಮ ಊಠವಾಲೆ, ಸಂಸ್ಥೆಯ ಸಾಧನೆ ಮತ್ತು ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಎನ್‌ಸಿಸಿಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಸೊಸೈಟಿಯ ಪ್ರಮುಖರಾದ ಎನ್.ಆರ್. ໖. , 2 ៩, ಎಂ.ಕೆ. ಬಾಬಜಿ, ಪ್ರವೀಣ ನಾಗರಕಟ್ಟೆ, ಅಶೋಕ ವಕ್ಕುಂದ. ವಸಂತ ನಾಯಕ, ರವಿಕುಮಾರ ಹನಮರಡ್ಡಿ, ಪದ್ಮಜಾ ಗರಗಟ್ಟಿ, ಡಾ. ಮಿಲಿಂದ ಗಲಗಲಿ, ಪ್ರವೀಣ ಮುತಾಲಿಕ, ವಿಜಯ ಪಟೇಲ್, ಬಸವರಾಜ ಚಾಟ್ಟಿ, ಉಮಾ ಪಾಟೀಲ, ಕೆ.ಎಲ್. ಕುಲಕರ್ಣಿ, ಪಿ.ಡಿ. ಪಟೇಲ್, ಸೋಹನಲಾಲ್ ಕೊಠಾರಿ, ಜಿ.ಎಸ್. ನಾಯಕ ಹಾಗೂ ಡಾ.ಎಸ್.ಆರ್. ಹನಮರಡ್ಡಿ ಇದ್ದರು.










