COVID-19 Resources for Mental Health Coaches... Learn More
“ಕೂಡಿ ಆಡಿದ ಮಕ್ಕಳ ಜಗಳ, ಆರಿದ ಚೇತನ…!”

ಒಂದೇ ಮನೆಯಲ್ಲಿ ಆಟವಾಡಿ, ಜೊತೆಗೆ ಕುಳಿತು ಊಟ ಮಾಡಿದ ಮಕ್ಕಳಿಬ್ಬರ ನಡುವೆ ಸಣ್ಣ ಮಾತಿಗೆ ಬೆಳೆದ ಜಗಳ ಓರ್ವ ಬಾಲಕನ ಕೊಲೆ ಮಾಡುವ ಹಂತಕ್ಕೆ ತಲುಪಿದ ಘಟನೆಗೆ ಇಡೀ ಹುಬ್ಬಳ್ಳಿ ನಗರದ ಜನರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಮನಸ್ಥಿತಿಗೆ ಭಯ ಬೀಳುವಂತಾಗಿದೆ. ಇಲ್ಲಿನ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರುಸಾವಿರ ಮಠದ ಹತ್ತಿರದ ಗುರುಸಿದ್ದೇಶ್ವರನಗರದಲ್ಲಿ ಸೋಮವಾರ ಸಂಜೆ ನಡೆದಿದ್ದ ಬಾಲಕರಿಬ್ಬರ ಜಗಳದಲ್ಲಿ ಚೇತನ ರಕ್ಕಸಗಿ (14) ಎಂಬ ಬಾಲಕ ಮೃತಪಟ್ಟಿದ್ದಾನೆ. ಈತನಿಗೆ ಈತನ ಸ್ನೇಹಿತನೇ ಆದ ಜೊತೆಗೆ ಉಂಡು ಆಡಿದ ಆರನೇ ತರಗತಿಯ ಬಾಲಕ ಚೇತನಗೆ ಚಾಕುವಿನಿಂದ ಇರಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚೇತನ ಕೆಎಂಸಿಆರ್‌ಐಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದನು. ಮಕ್ಕಳಾಟಕ್ಕೆ ಬಲಿಯಾದ ಒಬ್ಬನೆ ಮಗ ಗುರುಸಿದ್ದೇಶ್ವರ ನಗರದ ಸೋಮಶೇಖರ ರಕ್ಕಸಗಿ ಅವರಿಗೆ ಚೇತನ ಒಬ್ಬನೆ ಮಗ, ಮೂವರು ಹೆಣ್ಣು ಮಕ್ಕಳ ನಂತರ ಜನಿಸಿದ ಚೇತನ ಪ್ರೀತಿಯ ಮಗನಾಗಿದ್ದನು. ಅಪ್ಪ ಸಣ್ಣ ಪುಟ್ಟ ಕೆಲಸ ಮಾಡಿದರೆ, ಚೇತನರ ತಾಯಿ ರೊಟ್ಟಿ ವ್ಯಾಪಾರ ಮಾಡಿಕೊಂಡು ನಿತ್ಯ ನಿತ್ಯ ಸಾವಜಿ ಹೋಟೆಲ್‌ಗಳಿಗೆ 250 ರೊಟ್ಟಿ ಕಳುಹಿಸುತ್ತಿದ್ದಳು. ಇದರಿಂದಲೇ ಇವರ ಮನೆ ಜೀವನ ನಡೆಯುತ್ತಿತ್ತು. ಇತ್ತೀಚೆಗೆ ಮೃತ ಚೇತನ್ ಸಾವಜಿ ಹೋಟೆಲ್‌ಗೆ ರೊಟ್ಟಿ ಕೊಟ್ಟು ಬರುವುದು ಮಾಡುತ್ತಿದ್ದನು. ಚೇತನ ಹಾಗೂ ಚಾಕು ಹಾಕಿದ ಬಾಲಕರು ಎದುರು ಬದರು ಮನೆಯವರಾಗಿದ್ದು, ಎರಡು ಕಡೆಯ ಪಾಲಕರು ಪರಿಚಯಸ್ಥರೇ ಆಗಿದ್ದಾರೆ. ಕೆಲವು ಬಾರಿ ಚೇತನ್ ಚಾಕು ಹಾಕಿದ ಬಾಲಕನ ಮನೆಯಲ್ಲಿಯೇ
ಮಕ್ಕಳಿಗೆ ಸಮಯ ಮೀಸಲಿಡಿ ಬದಲಾದ ಸನ್ನವೇಶದಲ್ಲಿ ಇಂದು ಮಕ್ಕಳು ನಾನಾ ಕಾರಣದಿಂದ ದಾರಿ ತಪ್ಪುತ್ತಿದ್ದಾರೆ. ಶೀಘ್ರ ಕೋಪಗೊಳ್ಳುತ್ತಾರೆ. ಸಿಡಿಮಿಡಿ ಹಾಯುತ್ತಾರೆ. ಬುದ್ದಿ ಮಾತು ರುಚಿಸುವುದಿಲ್ಲ. ಯಾವುದೋ ಭ್ರಮಾಲೋಕದಲ್ಲಿ ಇರುತ್ತಾರೆ. ಇದಕ್ಕೆ ಕಾರಣ ಅರಸಿ ಹೊರಟರೆ ಹಲವು ಸಂಗತಿಗಳು ಬೆಳಕಿಗೆ ಬರುತ್ತವೆ. ಬಾಲ್ಯದಲ್ಲಿ ಪಾಲಕರ ನಿರ್ಲಕ್ಷ್ಯ ಮತ್ತು ಸಮಯ ನೀಡದಿರುವುದು. ಕೆಲವರಂತೂ ದುಶ್ಚಟಗಳಿಗೆ ಬಲಿಯಾಗಿರುತ್ತಾರೆ. ಅದರ ಅಮಲಿನಲ್ಲಿ ಮಿಂದೆದ್ದ ಪರಿಣಾಮ ನನ್ನವರು, ತನ್ನವರು, ಬಂಧು ಬಳಗ, ಅಣ್ಣ ತಮ್ಮ ಯಾವ ಪರಿಕಲ್ಪನೆಯು ಅವರಿಗೆ ಇರುವುದಿಲ್ಲ. ಇದಕ್ಕೆ ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಘಟನೆಯೇ ಉತ್ತಮ ನಿದರ್ಶನ. ಇದು ಒಂದು ಉದಾ ಹರಣೆಯಷ್ಟೇ. ಆಟವಾಡಿಕೊಂಡು ಇರುತ್ತಿದ್ದ ಎನ್ನುವುದು ವಿಶೇಷವಾಗಿದೆ. ಇಷ್ಟೊಂದು ಅನೋನ್ಯತೆಯ ನಡುವೆಯೂ ಅದ್ಯಾವುದೋ ಸಣ್ಣ ವಿಷಯಕ್ಕೆ ಬಂದ ಜಗಳ ಚಾಕು ಹಾಕುವ ಹಂತಕ್ಕೆ ತಲುಪಿದ್ದು, ಪ್ರಜ್ಞಾವಂತರು, ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಾಕು ಹಾಕಲು ಮಾತೇ ಕಾರಣವಾಯಿತೇ? ಮೃತ ಬಾಲಕ ಚೇತನ್ ಹಾಗೂ ಚಾಕು ಹಾಕಿದ 6ನೇ ತರಗತಿ ಬಾಲಕ ಮೊದಲಿನಿಂದಲೂ ಸ್ನೇಹಿತರಾಗಿದ್ದಾರೆ. 8ನೇ ತರಗತಿ ಪಾಸಾಗಿರುವ ಚೇತನ ಬಡತನದ ಮನೆಯವನಾಗಿದ್ದು, ಚಾಕು ಹಾಕಿದವನೊಂದಿಗೆ ಹೆಚ್ಚು ಇರುತ್ತಿದ್ದನು. ಆದರೆ ಸೋಮವಾರ ಆಟ ಆಡುವಾಗ ನಡೆದ ಕುಚೇಷ್ಟೆ ಮಾತುಗಳು ಸಗಳು ಜಗಳಕ್ಕೆ ಕಾರಣವಾಗಿದ್ದವು ಎನ್ನಲಾಗಿದೆ. ವುಕ್ಕಳ ಮುಗ್ಧತೆ ಕಳೆದುಹೋಗುತ್ತಿದೆ ‘ಇತ್ತೀಚೆಗೆ ಮಕ್ಕಳಲ್ಲಿನ ಮುಗ್ಧತೆ ಬಹುಬೇಗ
ಕಳೆದುಹೋಗುತ್ತಿದೆ. ದೃಶ್ಯಮಾಧ್ಯಮ, ಚಲನಚಿತ್ರಗಳಲ್ಲಿ ಹಿಂಸೆಯ ವೈಭವಿಕರಣದಿಂದ ಅದರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಓಣಿಯ ಹುಡುಗರ ಮೆನಸ್ಥಿತಿ, ಎಂತವರೊಂದಿಗೆ ಬೆರೆಯುತ್ತಾರೆ ಎಂಬುದರ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹಿಂಸೆಗೆ ಉತ್ತೇಜನ ನೀಡುವ ಗೇಮ್ಸ್ನಿಂದ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲರಲ್ಲೂ ಸಿಟ್ಟು ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ನೈತಿಕ ಪಾಠ ಹೇಳಬೇಕಾಗಿದೆ. ಸಂಸ್ಕಾರ ಕಲಿಸಬೇಕಾಗಿದೆ. ಡಾ. ಶಿವಾನಂದ ಹಿರೇಮಠ, ಮನೋವೈದ್ಯರು. ಇಂತಹ ಅನೇಕ ಪ್ರಕರಣಗಳು ನಮ್ಮ ಮಧ್ಯೆ ನಡೆದಿರುತ್ತವೆ. ಆದರೆ ನಾವು ಅದರ ಗಂಭೀರತೆ ಅರಿಯುವುದಿಲ್ಲ. ಕ್ಷುಲ್ಲಕ ವಿಚಾರಗಳಿಗೆ ಹಿಂಸೆಗೆ ಮುಂದಾಗುತ್ತಾರೆ. ಮಕ್ಕಳ ಚಲನವಲನ ಮೇಲೆ ನಿಗಾ ಇಡದೇ ಹೋದರೆ ಬಹಳ ಕಷ್ಟವಾಗುತ್ತದೆ. ಮೊಬೈಲ್ ಗೀಳು, ವಿಡಿಯೋ ಗೇಮ್ನನ ಟಾಸ್ಕ್ ನಿರ್ವಹಣೆ ಕೂಪದಲ್ಲಿ ಸಿಲುಕಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಕೈ ಮೀರುವ ಮುನ್ನ ಸಮಾಜ ಮತ್ತು ಪಾಲಕರು ಎಚ್ಚೆತ್ತುಗೊಳ್ಳಬೇಕಿದೆ. ಇದು ಇಂದಿನ ತುರ್ತು ಅಗತ್ಯವೂ ಆಗಿದೆ.