COVID-19 Resources for Mental Health Coaches... Learn More

0836-2776158

“ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ತೋಂಟದ ಸಿದ್ಧರಾಮ ಶ್ರೀ ಅಭಿಮತ; ಡಾ.ಪಾಂಡುರಂಗಿ ದಂಪತಿಗೆ ಸನ್ಮಾನ ಆತ್ಮಕಲ್ಯಾಣದ ಜತೆ ಸಮಾಜ ಕಲ್ಯಾಣವೂ ಆಗಲಿ”

ಗದಗ: ‘ಜಾತ್ರೆ ಅಂದರೆ ಭಕ್ತಿ, ಶ್ರದ್ಧೆ ಸಮರ್ಪಣೆ ಮಾಡಿ ಆತ್ಮಕಲ್ಯಾಣ ಮಾಡಿ- ಕೊಳ್ಳುವುದಷ್ಟೇ ಅಲ್ಲ; ಅದರ ಜತೆಗೆ ಸಮಾಜ ಕಲ್ಯಾಣವನ್ನೂ ಸಾಧಿಸಬೇಕು. ಆತ್ಮಕಲ್ಯಾಣ ಮತ್ತು ಸಮಾಜಕಲ್ಯಾಣ ಸಾಧಿಸುವುದೇ ಮನುಷ್ಯ ಜೀವನದ ಗುರಿಯಾಗಬೇಕು’ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು. ಗದುಗಿನ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಇತರೆ ಜಾತ್ರೆಗಳಿಗಿಂತ ಭಿನ್ನ, ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ದೇವರ ಸೇವೆ ಮಾಡಬೇಕು ‘ಎಂಬುದು ಎಲ್ಲರ ಅಪೇಕ್ಷೆ. ಆದರೆ, ದೇವರು ಕಣ್ಣಿಗೆ ಕಾಣುವುದಿಲ್ಲ. ರೋಗಿಗಳ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು ಸಿದ್ದರಾಮ ಸ್ವಾಮೀಜಿ ತೋಂಟದಾರ್ಯ ಮಠ ಪರಿಶ್ರಮದಿಂದ ಇದೊಂದು ವೈಚಾರಿಕ, ರಚನಾತ್ಮಕ ಜಾತ್ರಾ ಮಹೋತ್ಸವವಾಗಿ ಪರಿವರ್ತನೆಗೊಂಡಿದೆ’ ಹೇಳಿದರು. ಎಂದು ‘ಹಲವು ಜಾತ್ರಾ ಮಹೋತ್ಸವಗಳು ಅಂಧಶ್ರದ್ಧೆ, ಮೂಢನಂಬಿಕೆಗಳ ಮೇಲೆ ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಆರೋಗ್ಯ ಶಿಬಿರದಲ್ಲಿ ಮನೋವೈದ್ಯ ಡಾ.ಪಾಂಡುರಂಗಿ ದಂಪತಿಯನ್ನು ಸಿದ್ದರಾಮ ಸ್ವಾಮೀಜಿ ಸನ್ಮಾನಿಸಿದರು ನಡೆಯುತ್ತವೆ. ಆದರೆ, ಲಿಂಗೈಕ್ಯ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ನಿವಾರಿಸಿ ಅದಕ್ಕೊಂದು ರಚನಾತ್ಮಕ ಸ್ವರೂಪವನ್ನು ನೀಡಿದರು. ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡು ಜಾತ್ರೆಯನ್ನು ವೈಶಿಷ್ಟ್ಯಪೂರ್ಣವಾ- ಗಿ ನಡೆಸಿಕೊಂಡು ಬರಲಾಗುತ್ತಿದೆ’ ಎಂದರು. ‘ವೈದ್ಯಕೀಯ ತಪಾಸಣಾ ಶಿಬಿರದ ಮೂಲ ಉದ್ದೇಶ ಬಡವರಿಗೆ ಅನುಕೂಲ ಮಾಡಿಕೊಡುವುದಾ- ಗಿದೆ. ಯಾವುದೇ ರೋಗ ಇದ್ದರೂ ವೈದ್ಯರಿಂದ ಮಾರ್ಗದರ್ಶನ, ಚಿಕಿತ್ಸೆ ಸಿಗಲಿದೆ. ಅನೇಕ ಬಡರೋಗಿಗಳಿಗೆ ಔಷಧಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅಂತವರಿಗಾಗಿ ಜಾತ್ರಾ ಮಹೋತ್ಸವ ಸಮಿತಿಯವರು ಔಷಧಿ ವಿತರಿಸುವ ಕಾರ್ಯಕ್ರಮವನ್ನೂ ಹಾಕಿಕೊಂಡಿದ್ದಾರೆ. ಇದೊಂದು ಜನಕಲ್ಯಾಣದ ಕೆಲಸವಾಗಿದೆ’ ಎಂದು ತಿಳಿಸಿದರು. ‘ದೈಹಿಕ ರೋಗವನ್ನು ಗುರುತಿಸಿ, ಉಪಚರಿಸಿ ಗುಣಮುಖಗೊಳಿಸಬ- ಹುದು. ಆದರೆ, ಮಾನಸಿಕ ರೋಗ ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ್ದು, ದೇಹ ಕಣ್ಣಿಗೆ ಕಾಣುತ್ತದೆ. ಮನಸ್ಸು ಕಾಣಿಸುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಶರೀರಶಾಸ್ತ್ರ ಅಧ್ಯಯನ ಮಾಡುತ್ತಾರೆ. ಆದರೆ, ಅವರಾರಿಗೂ ಮನಸ್ಸು ಕಂಡಿಲ್ಲ. ಮನಸ್ಸು ಸೂಕ್ಷ್ಮ ವಾಗಿದ್ದು, ಅಂತಹ ಮನಸ್ಸನ್ನೂ ಕೂಡ ಅರಿತು ಚಿಕಿತ್ಸೆ ನೀಡುವ ವಿಜ್ಞಾನ ಬೆಳೆದುಬಂದಿದೆ. ಡಾ. ಪಾಂಡುರಂಗಿ ಅವರು ಮನೋರೋಗಿಗಳ ಪಾಲಿನ ದೇವರು. ನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರೂ ಕೂಡ ನೆಮ್ಮದಿಯ ಜೀವನ ನಡೆಸಲು ನೆರವಾಗಿದ್ದಾರೆ ಎಂದರು. ಡಾ.ಚಂದ್ರಶೇಖರ ಆರ್. ಬಳ್ಳಾರಿ ನೇತೃತ್ವದಲ್ಲಿ ನುರಿತ ತಜ್ಞ ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿದರು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಜಾತ್ರಾ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಚ್‌. ಬೇಲೂರ ಸೇರಿದಂತೆ ಪದಾಧಿಕಾರಿಗಳು, ಭಕ್ತರು ಇದ್ದರು.

About Author:

Leave Your Comments

Your email address will not be published. Required fields are marked *