COVID-19 Resources for Mental Health Coaches... Learn More

0836-2776158

“ಸಾಹಿತಿ ಡಾ. ಕೆ.ಎಸ್. ಶರ್ಮಾ ಆಶಯ | ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಲಿ”

ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಧಾರವಾಡದಲ್ಲಿ ಸಮ್ಮೇಳನ ನಡೆಯುತ್ತಿರುವ ಸಂಕ್ರಮಣ ಕಾಲದಲ್ಲಿ ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವುದು ಗಮನಾರ್ಹ ಸಂಗತಿ. ಅಳುವ ಸರ್ಕಾರಗಳು ಮತ್ತೊಂದು ಅವಧಿಗೆ ಅಧಿಕಾರಗ್ರಹಣ ಮಾಡುವ ಉದ್ದೇಶದಿಂದ ದೇಶದ ಜನತೆಗೆ ಸ್ವರ್ಗವನ್ನೇ ಅಂಗೈಯಲ್ಲಿ ಕೊಡುವ ಘೋಷಣೆ ಮಾಡುವುದು ಸಹಜ ಅಂತೆಯೇ ಪ್ರತಿಪಕ್ಷಗಳೂ ಆಳುವ ಸರ್ಕಾರವನ್ನು ಕೆಡವಿ ತಾವು ಅಧಿಕಾರ ಕಬಳಸುವ ಹುನ್ನಾರ ನಡೆಸುವುದೂ ಸಹಜ ಹಾಗಾಗಿ ‘ಭಾರತದ ಪ್ರಚಲಿತ ಸ್ಥಿತಿಃ ಭವಿಷ್ಯದ ಗತಿ ಎಂಬ ವಿಷಯ ವಿವೇಚನೆ ಮಾಡಬೇಕಾಗಿದೆ. ಎಂದರು.

ಶೋಷಣೆಯನ್ನೇ ಜೀವನವನ್ನಾಗಿ, ಜೀವನವನ್ನೇ ಶೋಷಣೆಗಾಗಿ ಬಳಸುವ ಸಮಾಜದ್ರೋಹಿಗಳಿಗೆ ಪೂರಕ- ಪೋಷಕವಾಗುವ ಸಾಹಿತ್ಯ ರಚನೆಯಲ್ಲಿ ತೊಡಗಿದರೆ, ರಚನೆ ಮಾಡಿದಂತಾಗುತ್ತದೆ. ಸಾಹಿತಿಗಳು ಸಾಂಸ್ಕೃತಿಕ ಸೈನಿಕರಾಗಬೇಕು. ಕಾರ್ಮಿಕರ ಸೈನ್ಯಕ್ಕೆ ಹೆಗಲು ಕೊಟ್ಟಾಗ ಸರಿಸಮಾನತೆಯ ಹೊಸ ಸಮಾಜ ನಿರ್ಮಾಣವಾಗುತ್ತದೆ ಎಂದರು. ಸಮ್ಮೇಳನಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕೆಲ ಪತ್ರಿಕೆಗಳಲ್ಲಿ ಕಥೆ, ಕವನಗಳು, ವಿಮರ್ಶೆಗಳು ಪ್ರಕಟವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪುಸ್ತಕ ಮಳೆಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿ ಸಮ್ಮೇಳನದ ಧ್ವಜ ಹಸ್ತಾಂತರಿಸಿದರು. ಸಾಹಿತಿ ಡಾ. ಶಾಂತಿನಾಥ ದಿಬ್ಬದ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕನ್ನಡದ ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ. ಕನ್ನಡ ನಾಡು-ನುಡಿಯ ರಕ್ಷಣೆಗೆ ಸರ್ಕಾರ ಬದ್ಧ. ನಾವು ನೀವೆಲ್ಲ ಸೇರಿ ಕನ್ನಡ ಉಳಿಸಿ | ಸಂತೋಷ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ ಓದುಗರ ಮೇಲೆ ಒತ್ತಡ ಸಲ್ಲದು. ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಕ್ಷೀಣಿಸಿದೆ. ವಿನಾ ಓದುಗರ ಸಂಖ್ಯೆ ಶೂನ್ಯವಾಗಿಲ್ಲ. ಇಡೀ ಜಗತ್ತಿನ ಪುಸ್ತಕಗಳು ಮೊಬೈಲ್ ಮೂಲಕ ಬೆರಳ ತುದಿಯಲ್ಲಿ ಲಭ್ಯ, ಎಐ, ಡೀಪ್‌ಫೇಕ್, ಮಶಿನ್ ಲರ್ನಿಂಗ್‌ನಂಥ ತಾಂತ್ರಿಕತೆ ಫಲವಾಗಿ ಮುಂದಿನ 5 ವರ್ಷಗಳಲ್ಲಿ ಶಿಕ್ಷಣದ ಚಿತ್ರಣ ಬದಲಾಗಲಿದೆ. ಸಾಹಿತ್ಯ ಕೇವಲ ಮನರಂಜನೆ ಸರಕು ಆಗದೆ, ಶಿಕ್ಷಣ ನೀಡಬೇಕು. ಸಹಿಷ್ಣುತೆ, ಸೌಹಾರ್ದತೆ, ಸಮಾನತೆ ಪ್ರತಿಪಾದಿಸುವ ಸಾಹಿತ್ಯ ಇಂದಿನ ಅಗತ್ಯ. | ಇದಕ್ಕೂ ಮೊದಲು ಸರ್ವಾಧ್ಯಕ್ಷ ಡಾ. ಶರ್ಮಾ ಅವರನ್ನು ಸಾರೋಟು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ‘ಕನ್ನಡಕ್ಕಾಗಿ ನಡಿಗೆಯಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾಹಿತಿ ವೆಂಕಟೇಶ ಮಾಚಕನೂರ ನಾಡಧ್ವಜ ಹಾಗೂ ಡಾ. ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಬೇಂದ್ರೆ ಕನ್ನಡದ ಬಹುದೊಡ್ಡ ಕವಿ. ಬೇಂದ್ರೆ ಜಗದ, ಯುಗದ ಕವಿ. ಅವರ ಕಾವ್ಯ ಧೋರಣೆ ಹಾಗೂ ಸಂಬಂಧ ಬಹಳ ವಿಭಿನ್ನ ಬೇಂದ್ರೆ ಸಾಮಾಜಿಕ ವಸ್ತುಗಳನ್ನು ಒಳಗೊಂಡ ಕಾವ್ಯ ರಚನೆ ಮಾಡಿರುವುದು ವಿರಳ. ವ್ಯಕ್ತಿಗೆ ಸಂಬಂಧಿಸಿದ ಕವನಗಳೇ ಹೆಚ್ಚು ಎಂದರು. ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವಿಠಲದಾಸ ಕಾಮತ್, ಡಾ. ಪ್ರಭಾ ಗುಡ್ಡದಾನವೇರಿ, ಪ್ರಾಧ್ಯಾಪಕ ಡಾ. ಮಲ್ಲಪ್ಪ ಬಂಡಿ, ಮೇಘಾ ಹುಕ್ಕೇರಿ, ಇತರರು ಇದ್ದರು. ಮಹಾಂತೇಶ ನರೇಗಲ್ಲ ಸ್ವಾಗತಿಸಿದರು.

About Author:

Leave Your Comments

Your email address will not be published. Required fields are marked *