COVID-19 Resources for Mental Health Coaches... Learn More

0836-2776158

“ಸಂಗೀತ-ಸಾಹಿತ್ಯಕ್ಕೆ ಆಕಾಶವಾಣಿ ಕೊಡುಗೆ ಅಪಾರ”

ಧಾರವಾಡ: ಧಾರವಾಡ ಆಕಾಶವಾಣಿಯ ಅಮೃತ ಮಹೋತ್ಸವದ ಪ್ರಯುಕ್ತ ಭಾರತೀಯ ಸಂಗೀತ ವಿದ್ಯಾಲಯದ ಸಹಯೋಗದೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮವನ್ನು ನಗರದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿ ಪಾಲ್ಗೊಂಡಿದ್ದ ತಾನಸೇನ್ ಸಮ್ಮಾನ್ ಪುರಸ್ಕೃತ ಹಿರಿಯ ಸಂಗೀತ ಕಲಾವಿದ ಗಣಪತಿ ಭಟ್ ಹಾಸಣಗಿ ಮಾತನಾಡಿ, ನಾಡಿನ ಸಂಗೀತ ಹಾಗೂ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಆಕಾಶವಾಣಿಗೆ ಸಲ್ಲುತ್ತದೆ ಎಂದರು. ಹಿರಿಯ ವೈದ್ಯ ಡಾ|ಆನಂದ ಪಾಂಡುರಂಗಿ ಮಾತನಾಡಿ, ಧಾರವಾಡ ಆಕಾಶವಾಣಿಯಿಂದ ಸಾವಿರಾರು ಕಲಾವಿದರು ಬೆಳೆದಿರುವುದು ಚಾರಿತ್ರಿಕ ಸಂಗತಿಯಾಗಿದೆ ಎಂದರು. ಭಾರತೀಯ ವಿದ್ಯಾಲಯದ ಅಧ್ಯಕ್ಷೆ ಡಾ|ಸೌಭಾಗ್ಯ ಕುಲಕರ್ಣಿ ಮಾತನಾಡಿ, ಕನ್ನಡ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಧಾರವಾಡ ಮರೆಯಲಾರರು ಎಂದರು.

ಧಾರವಾಡ : ನಗರದ ಸೃಜನಾ ರಂಗಮಂದಿರದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ|ಬಸು ಬೇವಿನಗಿಡದ ಮಾತನಾಡಿ, ಧಾರವಾಡ ಆಕಾಶವಾಣಿಯು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಅನೇಕ ಕಲಾ ಪ್ರಕಾರಗಳನ್ನು ಪೋಷಿಸಿದೆ ಎಂದರು. ಛೋಟೆ ರಹಮತ್ ಖಾನ್ ಹಾಗೂ ಸರ್ಫರಾಜ್ ಖಾನ್ ಅವರ ಸಿತಾರ-ಸಾರಂಗಿ ಜುಗಲಬಂದಿ ಹಾಗೂ ಪಂಡಿತ್ ಗಣಪತಿ ಭಟ್ ಅವರ ಶಾಸ್ತ್ರೀಯ ಗಾಯನ ಮನರಂಜಿಸಿತು. ರಾಜೇಂದ್ರ ನಾಕೋಡ, ನಿಸಾರ್ ಅಹಮದ್ ತಬಲಾ ಹಾಗೂ ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಿದರು. ಹಿರಿಯ ಗಾಯಕ ಸದಾಶಿವ ಐಹೊಳಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮ ಅಧಿಕಾರಿ ಶರಣಬಸವ ಚೋಳಿನ ಸ್ವಾಗತಿಸಿ, ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಫೀಕ್ ಸಾತಲಿಂಗಪ್ಪ ಕಲ್ಲೂರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ|ಎಸ್.ಎಮ್.ಶಿವಪ್ರಸಾದ, ಡಾ|ಚೇತನ ನಾಯಕ, ಸಿ.ಯು. ಬೆಳ್ಳಕ್ಕಿ, ಸತೀಶ ಪರ್ವತಿಕರ, ವಿದುಷಿ ಅಕ್ಕಮಹಾದೇವಿ ಹಿರೇಮಠ, ಮಠ, ರಾಧಾ ದೇಸಾಯಿ, ಶ್ರೀಧರ ಗಸ್ತಿ, ಉಮೇಶ ಮುನವಳ್ಳಿ ಸೇರಿದಂತೆ ಹಲವರು ಇದ್ದರು

About Author:

Leave Your Comments

Your email address will not be published. Required fields are marked *