COVID-19 Resources for Mental Health Coaches... Learn More
ನೈತಿಕ ಅಧಃಪತನ ಎಚ್ಚರಿಕೆಯ ನಡೆಯಿದ್ದರೆ ಉಪಶಮನ
ದಿನ ಬೆಳಗಾದರೆ ಕೊಲೆ, ಅತ್ಯಾಚಾರ, ದರೋಡೆ, ಆತ್ಮಹತ್ಯೆ ಯಂತಹ ಆಘಾತಕಾರಿ ವಿದ್ಯಮಾನಗಳು ನಮ್ಮ ಸುತ್ತ ನಡೆಯುತ್ತಿದ್ದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿವೆ. ನೈತಿಕತೆ, ಮೌಲ್ಯಗಳು ಕಣ್ಮರೆಯಾಗುತ್ತಿದ್ದು ಇದರ ಮೂಲ ಕಾರಣದ ಬಗ್ಗೆ ವಿಶ್ಲೇಷಣಾತ್ಮಕ ಲೇಖನ ಇಂದಿನ ವಿಜಯವಾಣಿಯ ಹಲೋ ಡಾಕ್ಟರ್ ಅಂಕಣದಲ್ಲಿ…….

ನೈತಿಕ ಅಧಃಪತನ ಎಚ್ಚರಿಕೆಯ ನಡೆಯಿದ್ದರೆ ಉಪಶಮನ
ಭಗ್ನ ಪ್ರೇಮಿಯಿಂದ ಚೂರಿ ಇರಿತ, ಹಣ ನೀಡದ ತಂದೆ ಮೇಲೆ ಮಗನಿಂದ ಏಟು, ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಸಾವಿಗೆ ಶರಣಾದ ಯುವಕ, ಅನೈತಿಕ ಸಂಬಂಧಕ್ಕೆ ವಿವಾಹಿತೆ ಬಲಿ, ಯುವಕನೊಂದಿಗೆ ಓಡಿ ಹೋದ ಗೃಹಿಣಿ, ಮದುವೆಗೆ ಒಪ್ಪದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ… ಈ ತರಹದ ಶೀರ್ಷಿಕೆಯ ಸುದ್ದಿಗಳನ್ನು ಇತ್ತೀಚೆಗೆ ನೋಡಿದ್ದೇವೆ. ಕೇಳಿದ್ದೇವೆ. ಇದನ್ನೆಲ್ಲ ನೋಡಿದಾಗ ನಮಗನಿಸುವುದು ಎತ್ತ ಸಾಗಿದೆ ನಮ್ಮ ಸಮಾಜ? ಇದು ಎಳೆಯ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂದು. ಈ ತರಹದ ಘಟನೆಗಳು ನಿಜಕ್ಕೂ ಆತಂಕಕಾರಿ.
ಒಂದಾದ ಮೇಲೆ ಇನ್ನೊಂದು ಇಂತಹ ಸರಣಿ ಪ್ರಕರಣಗಳು ನಮ್ಮ ನಿಮ್ಮೆಲ್ಲರನ್ನು ಬೆಚ್ಚಿ ಬೀಳಿಸಿವೆ. ಹಾಗಿದ್ದರೆ ಈ ತರಹ ಅಪರಾಧ ಕೃತ್ಯ ಎಸಗುವ ಮಟ್ಟಕ್ಕೆ ಜನರ ಮನಸ್ಥಿತಿ ಬದಲಾದದ್ದಾದರೂ ಹೇಗೆ? ಅಂದುಕೊಂಡದ್ದು ಆಗದಿದ್ದರೆ ಕೊಲ್ಲುವ ಮಟ್ಟಕ್ಕೆ ಟ್ರೆಂಡ್ ಆಗುತ್ತಿರುವುದು ಯಾಕೆ?. ಒಂದೇ ರೀತಿಯ ಅಪರಾಧಗಳು ಒಂದು ನಿರ್ದಿಷ್ಟ ವೇಳೆಯಲ್ಲಿ ಸಂಭವಿಸಿರುವುದು ಕಾಕತಾಳೀಯವಾದರೂ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಇದು ಆರೋಗ್ಯಕರ ಬೆಳವಣಿಗೆಯಲ್ಲ. ಅದರಲ್ಲೂ ಯುವಕರ ಮನಸ್ಥಿತಿ ಈ ಹಂತ ತಲುಪಿದ್ದು ದುರದೃಷ್ಟಕರ. ಮೇಲ್ನೋಟಕ್ಕೆ ಈ ಘಟನೆಗಳು ಕೊಲೆ ಎನಿಸಿದರೂ ಅದರ ಹಿಂದಿನ ಕಾರಣ ಮಾತ್ರ ಕೆಲವೊಮ್ಮೆ
ಕ್ಷುಲ್ಲಕವಾಗಿರುತ್ತವೆ. ಕೊಲೆಯಂತಹ ಹೀನ ಅಪರಾಧಕ್ಕೆ ಯುವಕರು ಮುಂದಾಗುತ್ತಿರುವುದಾದರೂ ಏಕೆ?
ಈ ನಿಟ್ಟಿನಲ್ಲಿ ಅವಲೋಕಿಸಿದರೆ ಸಿಗುವ ಉತ್ತರ ಎಂದರೆ ನೈತಿಕ ಮೌಲ್ಯಗಳ ಅರಿವಿನ ಕೊರತೆ ಮತ್ತು ಹುಂಬುತನವೇ ಇದಕ್ಕೆಲ್ಲ ಕಾರಣ ಎಂಬುದೇ ಆಗಿದೆ. ಕೆಲವೊಮ್ಮೆ ಸಹವಾಸ ದೋಷದಿಂದಲೂ ಮನಸ್ಸು ಈ ತರಹ ವಿಕೃತ ಸ್ಥಿತಿಯಾಗಿ ಪ್ರಚೋದನೆಗೊಂಡು ಕುಕೃತ್ಯಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ವಿಕೃತ ಮನಸ್ಥಿತಿ ಹೆಚ್ಚಾಗುತ್ತಿರುವುದು ಒಂದು ಗಂಭೀರ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಏಕೆಂದರೆ ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ. ಇಡೀ ಸಮಾಜದ ಸ್ವಾಸ್ಥ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.
ಸ್ಟಾರ್ಟಪ್ ಯುಗ ಎಂದು ಬೀಗುವ ನಾವು ತಾಂತ್ರಿಕವಾಗಿ ಅಭಿವೃದ್ಧಿಯಾದಷ್ಟು ನೈತಿಕವಾಗಿ ಅಧಃಪತನದತ್ತ ಸಾಗುತ್ತಿದ್ದೇವೆ. ಆಧುನಿಕ ಸಮಾಜದಲ್ಲಿನ ಕ್ಷಿಪ್ರ ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆ ಸೃಷ್ಟಿಸಿರುವ ಅನಾಹುತಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು ಎಂಬುದು ಈಗಿರುವ ಸವಾಲು. ಸಾಮಾಜಿಕ ಜಾಲತಾಣಗಳಲ್ಲಿ ಹಿಂಸೆ, ಅಶ್ಲೀಲತೆ ವಿಜೃಂಭಿಸುತ್ತಿದೆ. ಇದಕ್ಕೆ ಕಾನೂನಾತ್ಮಕ ಕಡಿವಾಣ ಬೀಳುತ್ತಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಗಾಂಜಾ, ಮದ್ಯಪಾನ ಮತ್ತು ಇತರ ಡ್ರಗ್ಸ್ ಬಳಕೆ ಮಿದುಳಿನ ಯೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
ಪಾಲಕರ ನಿರ್ಲಕ್ಷ್ಯ, ಮನೆಯಲ್ಲಿನ ಜಗಳಗಳು, ಪ್ರೀತಿ ಹಾಗೂ ಸಹಾನುಭೂತಿಯ ಕೊರತೆ, ಮಾನಸಿಕ ಅಸ್ವಸ್ಥತೆ ಇವೆಲ್ಲ ವ್ಯಕ್ತಿಯ ಆಲೋಚನೆ, ಭಾವನೆ, ನಡವಳಿಕೆ ಅಥವಾ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ಸಂಗತಿಯಾಗಿವೆ. ಈ ಪರಿಸ್ಥಿತಿಗಳು ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಮತ್ತು ಇತರರೊಂದಿಗೆ ಸಂಬಂಧ ಬೆಳೆಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತವೆ.
ಇದರ ಜತೆಗೆ ಯುವಕರಲ್ಲಿ ಅಂಕುರವಾಗುತ್ತಿರುವ ಅಪಕ್ವ ಪ್ರೀತಿಯೂ ಹಲವು ಅನಾಹುತಗಳಿಗೆ ಕಾರಣವಾಗುತ್ತದೆ. ಯುವಕನ ಪೂರ್ವಾಪರ ಅರಿಯದೇ ಮೋಹದ ಮಾತಿಗೆ ಸಿಲುಕಿ ಅವನಲ್ಲಿನ ಸಮಾಜವಿರೋಧಿ ವ್ಯಕ್ತಿತ್ವವನ್ನು ಅರಿಯದೇ
ಹಲೋ ಡಾಕ್ಟರ್
ಸಹಜೀವನಕ್ಕೆ ಮುಂದಾದಾಗ ಈ ತರಹದ ಕೊಲೆಗಳು ಸಂಭವಿಸುತ್ತವೆ. ನಿರುದ್ಯೋಗ ಸಮಸ್ಯೆಯಿಂದ ಹಣಕ್ಕಾಗಿ ಕೊಲೆ ನಡೆಯುತ್ತವೆ. ಅಸೂಯೆ ಮತ್ತು ಅಸಹನೆಯಿಂದಲೂ ದುರ್ಘಟನೆಗಳು ನಡೆಯುತ್ತವೆ. ಯುವ ಮನಸ್ಸು ಸಾಮಾಜಿಕ, ಶೈಕ್ಷಣಿಕ, ವೈಯಕ್ತಿಕ ಬದುಕಿನಲ್ಲಿ ತೊಳಲಾಟಕ್ಕೆ ಒಳಗಾಗುತ್ತದೆ. ಕುತೂಹಲ, ಒತ್ತಡ, ఒత్తాయి. ಪ್ರಯೋಗ ಮಾಡುವ ಹುಂಬತನ ಅಪರಾಧ ಚಟುವಟಿಕೆಯತ್ತ ಆಕರ್ಷಿಸುತ್ತದೆ. ವಿಪರೀತ ಒಂಟಿತನದ ಸಮಸ್ಯೆಯೂ ಯುವಸಮೂಹವನ್ನು ಇತ್ತೀಚೆಗೆ ಕಾಡುತ್ತಿದೆ. ಕೆಲವರು ಏಕಾಂತದಲ್ಲಿದ್ದುಕೊಂಡು ಇನ್ನೊಬ್ಬರ ಹೋಲಿಸಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಾರೆ. ದಿಢೀರ್ ಶ್ರೀಮಂತರಾಗಬೇಕೆನ್ನುವ ದುರಾಸೆಯಿಂದ ಕೆಟ್ಟ ಕೆಲಸಕ್ಕೆ ಕೈ ಹಾಕುತ್ತಾರೆ. ಕೊನೆಗೆ ಇದರಿಂದ ಪಾಲಕರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದಕ್ಕೆಲ್ಲ ಪರಿಹಾರ ಅರಸಿ ಯಾರ ಬಳಿಯೂ ಹೋಗುವ ಮುನ್ನ ಮೊದಲಿಗೊಮ್ಮೆ ನಮ್ಮ ಇದೆ. ನಂತರ ನಡವಳಿಕೆ, ಧೋರಣೆ, ಚಿಂತನಾ ಲಹರಿ ಬದಲಾಯಿಸಿಕೊಳ್ಳಲು ಸಾಧ್ಯವೇ ಎಂದು ಯೋಚಿಸುವ ಅಗತ್ಯವಿದೆ ಮಾತ್ರವಲ್ಲ, ಬದಲಾಯಿಸಿಕೊಳ್ಳುವ ಅಗತ್ಯವೂ ಮನೋವೈದ್ಯರ ಬಳಿ ಹೋಗಿ ಆಪ್ತ ಸಮಾಲೋಚನೆ, ಸಲಹೆ, ಸೂಚನೆ ಪಡೆಯಬಹುದು.