COVID-19 Resources for Mental Health Coaches... Learn More
ಕೃತಕ ಬುದ್ಧಿಮತ್ತೆ ಈಗ ಮನೋವೈದ್ಯನ ಹೊಸ ಸ್ನೇಹಿತ!🧠
AI ಇದೀಗ ಮನೋವೈದ್ಯರ ಮಿತ್ರವೂ ಹೌದು. ಬದಲಾದ ಸನ್ನಿವೇಶದಲ್ಲಿ ಮನೋವಿಜ್ಞಾನ ಕ್ಷೇತ್ರದಲ್ಲಿ ಇದು ಹೆಚ್ಚಿನ ಸಂಶೋಧನೆ ಮತ್ತು ನಿಖರತೆ ಪಡೆಯಲು ಪೂರಕವಾಗಿರುವ ತಂತ್ರಜ್ಞಾನವಾಗಿದ್ದು ಈ ಬಗ್ಗೆ ವಿಜಯವಾಣಿಯ ಹಲೋ ಡಾಕ್ಟರ್ ಪಾಕ್ಷಿಕ ಅಂಕಣದಲ್ಲಿ ನನ್ನ ಲೇಖನ ಇಲ್ಲಿದೆ…

ಮನಸ್ಸು ಎಲ್ಲದಕ್ಕೂ ಮುಖ್ಯ. ಎಲ್ಲವನ್ನೂ ನಿಯಂತ್ರಿಸುವುದು ಈ ಮನಸ್ಸೇ, ಏನೇ ಮಾಡಬೇಕೆಂದರೂ ಇದು ಅತ್ಯಗತ್ಯವಾದುದು. ಅಷ್ಟೇ ಅಲ್ಲ, ಮನಸ್ಸು ಆರೋಗ್ಯಕರವಾಗಿ ಇರುವುದು ಕೂಡ ತುಂಬ ಅಗತ್ಯ. ಇಂತ ಮನಸ್ಸಿಗೆ ಸಂಬಂಧಿತ ವಿಜ್ಞಾನವೇ ಮನೋವಿಜ್ಞಾನ, ಈಗಂತೂ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ (ಎಐ)ಯುಗ. ಈ ಕೃತಕ ಬುದ್ಧಿಮತ್ತೆಯ ಬಳಕೆ ಮನೋವಿಜ್ಞಾನ ಕ್ಷೇತ್ರದಲ್ಲೂ ಇದೆ. ಮನೋವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಸಂಬಂಧವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಇದು ಮಾಯಾಲೋಕ ಎಂದು ಅನಿಸಬಹುದಾದರೂ ಇದು ಆಧುನಿಕ ತಂತ್ರಜ್ಞಾನದ ಒಂದು ಶ್ರೇಷ್ಠ ಹಂತವಷ್ಟೇ. ನಮ್ಮ ಅರಿವಿಗೆ ಬಾರದಂತೆಯೇ ನಮ್ಮ ಬದುಕನ್ನು ಸುಲಭಗೊಳಿಸುತ್ತಿರುವ ನಮ್ಮ ನಿರ್ಧಾರಗಳನ್ನು ಪ್ರಭಾವಿಸುತ್ತಿರುವ ಈ ಅದೃಶ್ಯ ತಂತ್ರಜ್ಞಾನವನ್ನು ಅರಿತು ಸಾಗುವುದರಲ್ಲೇ ಒಳಿತಿದೆ. ಏಕೆಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಎಐ ತರುತ್ತಿರುವ ಬದಲಾವಣೆಗಳು ನಿಜಕ್ಕೂ ಕ್ರಾಂತಿಕಾರಕವಾಗಿವೆ. ವೈಯಕ್ತಿಕ ಚಿಕಿತ್ಸೆ ಮತ್ತು ಹೆಚ್ಚಿನ ಸಂಶೋಧನೆಗೆ ಈ ಕೃತಕಬುದ್ಧಿಮತ್ತೆ ಕೈ ಜೋಡಿಸಲಿದೆ.
ಮನೋವಿಜ್ಞಾನವು ಎಐ ತಂತ್ರಜ್ಞಾನವನ್ನು ರೂಪಿಸಲು ಸಹಾಯ ಮಾಡುತ್ತದೆ, ಮತ್ತು ಪ್ರತಿಯಾಗಿ ಎಐ ಮಾನವ ನಡವಳಿಕೆ, ಮಾನಸಿಕ ಆರೋಗ್ಯ ಚಿಕಿತ್ಸೆ ಮತ್ತು ಸಂಶೋಧನೆಯನ್ನು ಪರಿವರ್ತಿಸುತ್ತಿದೆ. ಮನೋವಿಜ್ಞಾನವು ಕೃತಕ ಬುದ್ಧಿಮತ್ತೆಯ ಆಕರ್ಷಕಕ್ಷೇತ್ರವನ್ನು ಪ್ರವೇಶಿಸಿ, ಅಲ್ಲಿ ಡೇಟಾ-ಚಾಲಿತ ವಿಶ್ಲೇಷಣೆ ಮತ್ತು ಅರಿವಿನ ಸಂಯೋಜನೆಯು
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಾವು ಹೇಗೆ ಗ್ರಹಿಸುತ್ತೇವೆ ಮತ್ತು ಚಿಕಿತ್ಸೆ ನೀಡುತ್ತೇವೆ ಎಂಬುದನ್ನು ಮರುರೂಪಿಸುತ್ತಿದೆ. ಇದು ಮಾನವ ಮನಸ್ಸಿನ ನಿಗೂಢ ಕಾರ್ಯಗಳ ಸೂಕ್ಷ್ಮಮಿಶ್ರಣವಾಗಿದೆ. ಕಾಲಕ್ಕೆ ತಕ್ಕಂತೆ ಅಪಡೇಟ್‌ನ ಒಂದು ಭಾಗ ಇದಾಗಲಿದೆ.
ದೈನಂದಿನ ಜೀವನದಲ್ಲಿ ಭಾವನಾತ್ಮಕ ಬೆಂಬಲ ಮತ್ತು ಆಲೋಚನೆಗಳನ್ನು ಸಂಘಟಿಸಲು ಕೃತಕ ಬುದ್ಧಿಮತ್ತೆ ಪೂರಕವಾಗಿ ಕೆಲಸ ನಿರ್ವಹಿಸುತ್ತದೆ. ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ಎಐ ಚಾಟ್ ಬಾಟ್‌ಗಳು ಲಭ್ಯವಿವೆ. ಇವು ಆಶಂಕ ಮತ್ತು ಬಿನ್ನತೆಯಂತಹ ಸಮಸ್ಯೆಗಳಿಗೆ ತ್ವರಿತ ಮತ್ತು ಕೈಗೆಟುಕುವ ಬೆಂಬಲವನ್ನೂ ನೀಡುತ್ತವೆ. ಮನೋವಿಜ್ಞಾನ ಅಭ್ಯಾಸದಲ್ಲಿ, ಕೃತಕ ಬುದ್ಧಿಮತ್ತೆ ಪರಿಕರಗಳು ಮಧ್ಯಸ್ಥಿಕೆಗಳನ್ನು ಸುಧಾರಿಸಬಹುದು. ಆಡಳಿತಾತ್ಮಕ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಬಹುದು ಮತ್ತು ಹೊಸ ವೈದ್ಯರಿಗೆ ತರಬೇತಿ ನೀಡುವಲ್ಲಿ ಸಹಾಯ ಮಾಡಬಹುದು.
ಸಂಶೋಧನಾ ಭಾಗದಲ್ಲಿ, ಸಂಶ್ಲೇಷಿತ ಬುದ್ಧಿಮತ್ತೆಯು ಮಾನವ ಬುದ್ಧಿಮತ್ತೆಯನ್ನು ಅರ್ಥಮಾಡಿಕೊಳ್ಳಲು ಹೊಸ ಮಾರ್ಗಗಳನ್ನು ನೀಡುತ್ತಿದೆ. ಎಐ ವಿಷಯಕ್ಕೆ ಬಂದರೆ, ಹೊಸ ತಂತ್ರಜ್ಞಾನದ ಬಗ್ಗೆ ಊಹೆಗಳನ್ನು ಪ್ರಶ್ನಿಸಲು ಮತ್ತು ಬಳಕೆದಾರರ ಮೇಲೆ ಅದರ ಪ್ರಭಾವವನ್ನು ಪರೀಕ್ಷಿಸಲು ಮನಶ್ಯಾಸ್ತ್ರಜ್ಞರು ಪರಿಣತಿಯನ್ನು ಹೊಂದಿದ್ದಾರೆ. ಹೊಸ ತಂತ್ರಜ್ಞಾನಗಳಿಂದ ಪ್ರಭಾವಿತವಾಗಬಹುದಾದ ವೈವಿಧ್ಯಮಯ ಗುಂಪುಗಳ ಮೌಲ್ಯಗಳು, ಪ್ರೇರಣೆಗಳು, ನಿರೀಕ್ಷೆಗಳು ಮತ್ತು ಭಯಗಳನ್ನು ಅರ್ಥಮಾಡಿಕೊಳ್ಳಲು ಮನಶ್ಯಾಸ್ತ್ರಜ್ಞರು ಕಂಪನಿಗಳಿಗೆ ಸಹಾಯ ಮಾಡಬಹುದು.ಜನರು ಎಐ ಅನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಅಂತಹ ಗ್ರಹಿಕೆಗಳು ಸಮಾಜದಾದ್ಯಂತ ಯಾವ ತರಹದ ಪರಿಣಾಮಗಳನ್ನು ಬೀರಬಹುದು ಎಂಬುದನ್ನು
ಅರ್ಥಮಾಡಿಕೊಳ್ಳಲು ಮನಶ್ಯಾಸ್ತ್ರಜ್ಞರು ಮಾನವ-ಯಂತ್ರದ ಪರಸ್ಪರ ಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯ ಜತೆಗಿನ ನಮ್ಮ ಸಂವಹನವು ನಮ್ಮ ನಂಬಿಕೆಗಳು ಮತ್ತು ನಡವಳಿಕೆಗಳ ಮೇಲೆ ತಕ್ಷಣ ಮತ್ತು ನಂತರದಲ್ಲಿ ಹೇಗೆ ಪರಿಣಾಮ ಬೀರುತ್ತದೆ? ನಮ್ಮ ಸಮಾಜಗಳ ಮೇಲೆ ಸಂಚಿತ ಪರಿಣಾಮವೇನು – ಮತ್ತು ಆ ಬದಲಾವಣೆಗಳನ್ನು ನಾವು ಹೇಗೆ ನಿರೀಕ್ಷಿಸಬೇಕು. ಹೊಂದಿಕೊಳ್ಳಬೇಕು ಅಥವಾ ತಗ್ಗಿಸಬೇಕು? ಎಐ ನಮ್ಮ ಅಗತ್ಯಗಳು ಮತ್ತು ಗುರಿಗಳನ್ನು ಹೇಗೆ ಅರ್ಥಮಾಡಿಕೊಳ್ಳಬಹುದು? ( ಎಂಬುದರ ಬಗ್ಗೆ ಇಂದಿಗೂ ಸಂಶೋಧನೆ ಹಾಗೂ ಚರ್ಚೆ ನಡೆಯುತ್ತಲೇ ಇದೆ. ಮನೋವಿಜ್ಞಾನದಲ್ಲಿ ಯಾವುದೇ ತಂತ್ರಜ್ಞಾನದ ಬಳಕೆಯು ಕಡ್ಡಾಯವಾಗಿ ನೈತಿಕ ಮಾನದಂಡಗಳನ್ನು ಮತ್ತು ಮಾನವ ಮೇಲ್ವಿಚಾರಣೆಯನ್ನು ಒಳಗೊಂಡಿರಬೇಕು ಎಂದು ಅಪೇಕ್ಷಿಸುವುದು ಅತ್ಯಂತ ಸಹಜ, ಮಾನಸಿಕ ಆರೋಗ್ಯ ಚಿಕಿತ್ಸೆಯ ಸ್ವರೂಪವು ಮಾನವನ ಸಹಾನುಭೂತಿ, ತಿಳಿವಳಿಕೆ ಮತ್ತು ಸಂಪರ್ಕದಲ್ಲಿ ಆಳವಾಗಿ ಬೇರೂರಿದೆ. ಇದಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಇರಬೇಕು ಎನ್ನುವುದು ಆಶಯ. ಕೃತಕ ಬುದ್ಧಿಮತ್ತೆಯ ಮನೋವಿಜ್ಞಾನವು ಮಾನವನ ಒಳನೋಟವನ್ನು ಬದಲಾಯಿಸುವ ಬಗ್ಗೆ ಅಲ್ಲ, ಇದು ನಮ್ಮ ತಿಳಿವಳಿಕೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ಬಗ್ಗೆ ಇರುವುದಾಗಿದೆ. ಡೇಟಾ ಚಾಲಿತ ವಿಶ್ಲೇಷಣೆ ಮತ್ತು ಭಾವನಾತ್ಮಕ ತಿಳಿವಳಿಕೆಯ ಸಮ್ಮಿಳನವು ತಂತ್ರಜ್ಞಾನವಾಗಲಿದೆ ಎಂಬ ನಂಬಿಕೆಯೊಂದಿಗೆ ಮನೋವಿಜ್ಞಾನ ಕ್ಷೇತ್ರ ನಡೆಯುತ್ತಿದೆ.