COVID-19 Resources for Mental Health Coaches... Learn More
ಮಾನಸಿಕ ಸಮತೋಲನಕ್ಕೆ ಆಯುರ್ವೇದವೇ ಮದ್ದು. 🌿
Dr swapna spoke on stress management at Ayurveda mahavidyalaya heggeri hubli in world mental health day 2022

ಸಲಹಾ ಶಿಬಿರದಲ್ಲಿ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಅಭಿಮತ
ಮಾನಸಿಕ ಸಮತೋಲನಕ್ಕೆ ಆಯುರ್ವೇದವೇ ಮದ್ದು
ds Day
ಹುಬ್ಬಳ್ಳಿ: ಇಂದಿನ ಮಹಿಳೆಯರಲ್ಲಿ ಹೆಚ್ಚು ಮಾನಸಿಕ ತೊಂದರೆ ಕಂಡು ಬರುತ್ತಿದ್ದು, ಇದರಿಂದ ಅನೇಕ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ ಎಂದು ಹಳೇ ಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಹೇಳಿದರು.
ವಿಶ್ವ ಆಯುರ್ವೇದ ದಿನಾಚರಣೆ ಅಂಗವಾಗಿ ಆಯುರ್ವೇದ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಹೆಣ್ಣು ಮಕ್ಕಳ ಮಾನಸಿಕ ಸ್ವಾಸ್ಥ್ಯ-ವಿಶೇಷ ತಪಾಸಣೆ ಹಾಗೂ ಸಲಹಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನಸಿಕ ಸಮತೋಲನಕ್ಕೆ ಆಯುರ್ವೇದವೇ ಮದ್ದು ಎಂದರು.
ಶ್ರೀ ರೋಗ ತಜ್ಞೆ ಡಾ. ಅನಿತಾ ಹಲಗತ್ತಿ ಮಾತನಾಡಿ, ಎಲ್ಲ ವಯಸ್ಸಿನ ಹೆಣ್ಣು ಮಕ್ಕಳು ಅಲ್ಪಸ್ವಲ್ಪ ಮಾನಸಿಕ ಒತ್ತಡ, ತೊಂದರೆಯನ್ನು ಕಡೆಗಣಿಸದೆ ತಪಾಸಣೆ ಹಾಗೂ ಸಲಹೆಗೆ ಆದ್ಯತೆ ನೀಡುವುದು ಅವಶ್ಯ ಎಂದು ಹೇಳಿದರು.
ಧಾರವಾಡದ ಡಿಮ್ಹಾನ್ಸ್ ಆಸ್ಪತ್ರೆಯ ಮಾನಸಿಕ ರೋಗ ತಜ್ಞೆ ಡಾ. ಸ್ವಪ್ಪಾ ಪಾಂಡುರಂಗಿ ಉದ್ಘಾಟಿಸಿದರು.
ಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಕಾಲೇಜಿನಲ್ಲಿ ಬುಧವಾರ ಹೆಣ್ಣು ಮಕ್ಕಳ ಮಾನಸಿಕ ಸ್ವಾಸ್ಥ್ಯ-ವಿಶೇಷ ತಪಾಸಣೆ ಹಾಗೂ ಸಲಹಾ ಶಿಬಿರ ಆಯೋಜಿಸಲಾಗಿತ್ತು. ಡಾ. ಪ್ರಶಾಂತ ಎ.ಎಸ್., ಡಾ.ಸ್ವಪ್ನಾ ಪಾಂಡುರಂಗಿ, ಡಾ. ಅನಿತಾ ಹಲಗತ್ತಿ, ಡಾ. ಜೆ.ಆರ್.ಜೋಶಿ, ಡಾ. ಉಪಾ ಹೊಸಮನಿ, ಇತರರು ಇದ್ದರು.
ಡಾ. ಜೆ.ಆರ್. ಜೋಶಿ, ಡಾ. ಉಷಾ ಹೊಸಮನಿ, ಡಾ. ಮಂಜುಳಾ ಕರ್ಲವಾಡ, ಡಾ. ಸುಮಾ ಅಪ್ಪಗಿಮಠ, ಡಾ. ಲಕ್ಷ್ಮೀ ಪಾಟೀಲ, ಡಾ. ಬಿ.ಬಿ. ಹುನಗುಂದ, ಇತರರು
ಇದ್ದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ. ತಯ್ಯಬಾ ಕಾಗದಗರ ವಂದಿಸಿದರು.