COVID-19 Resources for Mental Health Coaches... Learn More

0836-2773878

ಈಗ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು

ಮುಧೋಳ

ಆರೋಗ್ಯ ನಮ್ಮ ಕೈಯಲ್ಲಿರುವ ದೊಡ್ಡ ಸಂಪತ್ತು. ಜಗತ್ತಿನಲ್ಲಿ ಯಾರೂ ಸಂಪೂರ್ಣ ವಾಗಿ ಸಾಮಾನ್ಯವಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಇಂದಿನ ಬದಲಾದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಧಾರವಾಡದ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಹೇಳಿದರು.

ನಗರದ ಗಾಂಧಿ ಸರ್ಕಲ್ ಹತ್ತಿರದ ನೂತನ ಬಾಲಕಿಯರ ಮಾಧ್ಯಮಿಕ ಶಾಲಾ ಆವರಣದಲ್ಲಿ ಸರ್ವೋದಯ ಸೇವಾ ಉತ್ಸವ ನಿಮಿತ್ತ ಧಾರವಾಡ ಸರ್ವೋದಯ ಮಹಿಳಾ ಆಸ್ಪತ್ರೆ, ಸಂತಾನ ಸಾಫಲ್ಯ ಕೇಂದ್ರ ಹಾಗೂ ವಿವಿಧ ವೈದ್ಯಕೀಯ ಸಂಸ್ಥೆಗಳ ಸಹಯೋಗ ದೊಂದಿಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಿ: ನಾನು ತಪಾಸಣೆ ಮಾಡುವ ಬರುವ ಪ್ರತಿ 200 ರೋಗಿಗಳ ಪೈಕಿ 50 ಮಕ್ಕಳು ಮೊಬೈಲ್ ಬಳಸುತ್ತಾರೆ. ಮೊಬೈಲ್ ಚಟದಿಂದಮಕ್ಕಳನ್ನು ದೂರವಿಡುವುದು ಪಾಲಕರ ಜವಾಬ್ದಾರಿಯಾ ಗಿದೆ. ಕೇವಲ ಚಿಕಿತ್ಸೆ ಮಾತ್ರವಲ್ಲದೆ, ಆರೋ ಗ್ಯದ ಬಗ್ಗೆ ಸಾಮಾಜಿಕ ತಿಳಿವಳಿಕೆ ಮೂಡುವ

ಆರೋಗ್ಯ ಶಿಕ್ಷಣ ಇಂದು ಅತ್ಯಗತ್ಯವಾಗಿದೆ ಎಂದರು.

ಖಜ್ಜಿಡೋಣಿಯ ಆಧ್ಯಾತ್ಮಿಕ ಚಿಂತಕ ಕೃಷ್ಣಾನಂದ ಶಾಸ್ತ್ರೀಜಿ ಅವರು ಸರಳ ಜೀವನ ಪದ್ಧತಿ ಕುರಿತು ಸಾಂದರ್ಭಿಕವಾಗಿ ಮಾತನಾಡಿದರು. ಚಿಂತನಸಿರಿ ರ್ಆ.ಎಸ್. ಎಸ್ ಪ್ರಾಂತ ಪ್ರಚಾರಕ ನರೇಂದ್ರಜಿ

ಮುಧೋಳದಲ್ಲಿ ಸರ್ವೋದಯ ಸೇವಾ ಉತ್ಸವದಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಮಾತನಾಡಿ, ಸಮಾಜ ಸೇವೆಯಲ್ಲೂ ಒಂದು ರೀತಿಯ ಸ್ವಾರ್ಥ ಅಡಗಿದೆ. ಅದುವೇ ಜನರ ಸೇವೆಯಲ್ಲಿ ಸಿಗುವ ಸಮಾಧಾನದ ಸ್ವಾರ್ಥ, ಗಾಂಧೀ ಮಾರ್ಗದಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ, ১ে.৭৫৩১ ಉತ್ತೂರ, ಡಾ.ಜಯಪ್ರಭು ಉತ್ತೂರ, ಡಾ.ಗಾಯತ್ರಿ ಉತ್ತೂರ ಅವರು ಮಾಡುತ್ತಿರುವ ಸಾಮಾಜಿಕ

ಸೇವೆ ಶ್ಲಾಘನೀಯವಾದದು ಎಂದು ಹೇಳಿದರು.ಗೌರವ ಅಧ್ಯಕ್ಷ ಡಾ.ಎಂ.ರ್ಆ. ದೇಸಾಯಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಾ.ಗೀತಾ ಉತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡದ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ನಾರಾಯಣ ಹೃದಯಾಲಯ, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಅನುಸೂ ಯಾ ಶಂ. ಉತ್ತೂರ, ಡಾ.ಗೀತಾ ಉತ್ತೂರ, ಡಾ.ಜಯಪ್ರಭು ಉತ್ತೂರ, ಡಾ.ಗಾಯತ್ರಿ ಉತ್ತೂರ, ಡಾ.ಶಿವಾನಂದ ಕುಬಸದ, ರಾಮಕೃಷ್ಣ ಬುದ್ಧಿ ಸೇರಿದಂತೆ ಹಲವು ಸಾಹಿತಿಗಳು, ಸೇವಾ ಭಾರತಿ ಹಾಗೂ ಇನ್ಸರ್ ವೀಲ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಬಿರದ ಜೊತೆಗೆ ಏರ್ಪಡಿಸಲಾಗಿದ್ದ ಕನ್ನಡ ಪುಸ್ತಕ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು

About Author: