COVID-19 Resources for Mental Health Coaches... Learn More
“ಹಳೆಯ ನೆನಪಿನೊಂದಿಗೆ ಹೊಸ ಕನಸು – ಜಿಎಸ್‌ಎಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭ 2025”

ಹಳೆಯ ನೆನಪಿನೊಂದಿಗೆ ಹೊಸ ಕನಸುಗಳು ಇರಬೇಕು. ಜೀವನದ ಹಲವಾರು ಬದಲಾವಣೆಗಳಿಗಾಗಿ ದಿಕ್ಕು ಹೊಂದಿರಬೇಕು ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು. ಜಿಎಸ್‌ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಜಿಎಸ್‌ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪುನರ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದಾ ಚಟುವಟಿಕೆಯಿಂದ ಕೂಡಿದ್ದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ. ಮನಸ್ಸು ರಚನಾತ್ಮಕ, ನಿರಂತರ ಹರಿಯುವ ನೀರಿನಂತೆ ಇರಬೇಕು. ಬದುಕು ಸಂಪಾದನೆಗಾಗಿ ಮಾತ್ರವಲ್ಲ. ಬಡವಗಾಗಿ ಸಂಪಾದನೆ ಮಾಡುವುದು ಬೇರೆ, ಸಂಪಾದನೆಗಾಗಿ ಬದುಕುವುದು ಬೇಡ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ನೆಮ್ಮದಿ ಜೀವನ ನಡೆಸಬಹುದು ಎಂದರು. ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಸಂಸ್ಥೆಯ ದೊಡ್ಡ ಆಸ್ತಿ. ಅಂತಹ ಆಸ್ತಿಯನ್ನು ಹೊಂದಿರುವುದು ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಸೂರಜ್ ಜೈನ್, ನಾಗರಾಜ ದೇಸಾಯಿ, ವಾದಿರಾಜ ನಾಗನೂರ, ಅರವಿಂದ ಜಮಖಂಡಿ, ರವಿ ಬಾಂಡಗೆ, ಸಂದೀಪ ಚಿಲಕವಾಡ, ವಿನೋದ ಹೆಗ್ಗಳಗಿ, ವಿಜಯ ಇನಾಮದಾರ, ಜಿತೇಂದ್ರ ನಾಡಗೇರ, ಶ್ರೀಕಾಂತ ಬೆಟಗೇರಿ, ರವಿ ಕಗ್ಗಣ್ಣವರ, ಗಂಗಾಧರ ಎಚ್. ಕೆ., ಮೃಣಾಲ ಜೋಶಿ, ಭಾರತಿ ಆರ್.ಕೆ. ಹಳೆಯ ವಿದ್ಯಾರ್ಥಿಗಳು, ಗುರುಗಳು, ಇತರರು ಉಪಸ್ಥಿತರಿದ್ದರು.
ಪುನರ್ಮಿಲನ ಸಮಿತಿ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ನರಸಿಂಹರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನOತರ ಹಳೆಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಲ್ಲಿ ಸಂಚಾರಿ ನಡೆಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.










https://drive.google.com/drive/folders/1dGX73FJUMX9uYyq8Alf8HURAimlGxTNe?usp=drive_link