COVID-19 Resources for Mental Health Coaches... Learn More

0836-2773878

“ಕ್ಷಣದ ದುಡುಕು, ಶಾಶ್ವತ ಕೆಡುಕು – ಡಾ. ಆನಂದ ಪಾಂಡುರಂಗಿಯವರ ಮನಸ್ಸು ತಟ್ಟುವ ಅನುವಾದ”

ಕ್ಷಣದ ದುಡುಕು ತಂದೀತು ಕೆಡುಕು:
ಇತ್ತೀಚೆಗಷ್ಟೇ ಎರಡು ಹೃದಯ ವಿದ್ರಾವಕ ಘಟನೆಗಳು ಸಂಭವಿಸಿದವು. ಒಂದು: ಹಸುವಿನ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆ. ಇನ್ನೊಂದು: ಕೌಟುಂಬಿಕ ಕಲಹದ ಕಾರಣ ತಾಯಿ ಹೆತ್ತ ಮಕ್ಕಳನ್ನೇ ಕಾಲುವೆಗೆ ಎಸೆದದ್ದು. ಈ ಎರಡೂ ಘಟನೆಗಳು ಎಂಥವರ ಕರುಳನ್ನೂ ಕರಗಿಸದಿರಲಾರವು. ಇದು ಕ್ರೌರ್ಯದ ಪರಮಾವಧಿ ಎಂದರೂ ತಪ್ಪಾಗದು. ಈ ಘಟನೆ ಹಿಂದಿನ ಕಾರಣ ಬೆನ್ನತ್ತಿ ಹೊರಟರೆ ಸಿಗುವ ಅಂಶ ಎಂದರೆ ಒಂದು ಮನಸ್ಥಿತಿ, ಇನ್ನೊಂದು ಮನೆ ಸ್ಥಿತಿ. ಹೌದು ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಆ ದುಷ್ಕೃತ್ಯ ಎಸಗಿದ ವ್ಯಕ್ತಿ ಪಾನಮತ್ತನಾಗಿದ್ದ. ಅದರ ಅಮಲಿನಲ್ಲಿ ಮಾಡಿದ ಎಂಬ ಮಾಹಿತಿ ಸ್ವತಃ ಗೃಹಸಚಿವರಿಂದ ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಪತಿ ಮನೆಯವರ ಕಡೆಯಿಂದ ಆಗಾಗ್ಗೆ ನಡೆಯುತ್ತಿದ್ದ ಆಸ್ತಿ ವ್ಯಾಜ್ಯ, ಕೌಟುಂಬಿಕ ಕಲಹದಿಂದ ಬೇಸತ್ತು ಸಾವಿಗೆ ಶರಣಾಗುವ ಮನಸ್ಥಿತಿಗೆ ಬಂದ G ಮಹಿಳೆಯ ದುಡುಕಿನ ನಿರ್ಧಾರ. ಮನ ಮತ್ತು ಮನೆ ಎರಡರ ಸ್ವಾಸ್ಥ್ಯಕ್ಕೆ ಧಕ್ಕೆ ಬಂದಾಗ ಆಗುವ ಅನಾಹುತಕ್ಕೆ ಇದಕ್ಕಿಂತ ಬೇರೆ ಉತ್ತಮ ನಿದರ್ಶನವಿಲ್ಲ. ಹಾಗಾದರೆ ಈ ತರಹ ಯಾಕೆ ಆಗುತ್ತದೆ? ಎಂದರೆ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಿಸುವಲ್ಲಿ ವಿಫಲನಾಗುವುದಕ್ಕೆ ಒಂದು ಕ್ಷಣದ ಆತುರದ ಎದುರು ಎಲ್ಲವೂ ಸರಿ. ಈಗ ಆ ಮಕ್ಕಳು ಮರಳಿ ಬಾ ಎಂದರೆ ಬರಲು ಸಾಧ್ಯವೇ? ಸಮಾಜದಲ್ಲಿ ಮಕ್ಕಳಿಗಾಗಿ ಪರಿತಪಿಸುವ ಅದೆಷ್ಟೋ ಜನ ಇದ್ದಾರೆ. ಅಂಥದ್ದರಲ್ಲಿ ಇರುವ ಮಕ್ಕಳನ್ನು ಈ ತರಹ ಅಮಾನವೀಯವಾಗಿ ಯಾರದೋ ಮೇಲಿನ ಸಿಟ್ಟಿಗಾಗಿ ಬಲಿ ಕೊಡುವುದು ಎಷ್ಟು ಸರಿ? ಅದಕ್ಕೆ ಹೇಳುವುದು ತೀರಾ ರೇಜಿಗೆ ಹುಟ್ಟಿಸಿದ, ಬೇಸರ ಮೂಡಿಸಿದ ಆ ಕ್ಷಣ ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬಲು ಅಪಾಯಕಾರಿ.

About Author:

Leave Your Comments

Your email address will not be published. Required fields are marked *