COVID-19 Resources for Mental Health Coaches... Learn More

0836-2773878

“ಬರವಣಿಗೆಯ ಶಕ್ತಿಯ ಮೂಲಕ ಸಮಾಜಕ್ಕೆ ದಿಕ್ಕು ತೋರಿಸೋಣ” :- ಡಾ. ಆನಂದ ಪಾಂಡುರಂಗಿ

ಧಾರವಾಡ ಗಾಂಧಿನಗರದ ಈಶ್ವರ ದೇವಸ್ಥಾನ ಸಭಾಭವನದಲ್ಲಿ ನಾರಾಯಣ ಭಾದ್ರಿ ಅವರಿಗೆ ಜಿ.ಎಚ್‌. ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ. ಆನಂದ ಪಾಂಡುರಂಗಿ, ಗುರುರಾಜ ಹುಣಸಿಮರದ, ಡಾ. ಗೋವಿಂದ ಮಣ್ಣೂರ, ನಾಗರಾಜ ದೇಸಾಯಿ, ಶಿವನಾಯಕ ದೊರೆ, ನರಸಿಂಹರಾವ್‌, ಸಂದೇಶ ಜಿ.ಎಚ್., ಭರತ ಜಿ.ಎಚ್. ಮತ್ತಿತರರು ಉಪಸ್ಥಿತರಿದ್ದರು.”

ಜಿ.ಎಚ್. ರಾಘವೇಂದ್ರ ಕೇವಲ ಪತ್ರಕರ್ತರಾಗಿ ಗುರುತಿಸಿಕೊಂಡಿರಲಿಲ್ಲ. ನಾಟಕಕಾರರಾಗಿದ್ದರು. ಟಿಂಗರ ಅಂಕಣದಿಂದ ಇಂದಿಗೂ ಜನರ ಅಂಕಣಕಾರ, ಬುಡ್ಡಣ್ಣ ಮನಸಿನಲ್ಲಿ ಬೇರೂರಿದ್ದಾರೆ. ಸಮಾಜದಲ್ಲಿಯ ಡೊಂಕುಗಳನ್ನು ಹಾಸ್ಯಭರಿತವಾಗಿ ಸಮಾಜಕ್ಕೆ ತಿಳಿಸಿಕೊಡುತ್ತಿದ್ದರು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ಜಿ.ಎಚ್. ರಾಘವೇಂದ್ರ ಪ್ರತಿಷ್ಠಾನ ವತಿಯಿಂದ ನಗರದ ಗಾಂಧಿನಗರ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದ್ದ ಜಿ.ಎಚ್. ನೆನಪಿನಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಬರವಣಿಗೆಯಲ್ಲಿ ಭಾವ, ಸಮಾಜ ತಿದ್ದುವ ಶಕ್ತಿ ಇರಬೇಕು. ಅದು ಜಿ.ಎಚ್. ಅವರಲ್ಲಿ ಅಡಗಿತ್ತು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವಿದ್ದರೂ ಅದನ್ನೆಲ್ಲ ನುಂಗಿ ಜನರನ್ನು ನಿತ್ಯ ನಗಿಸುತ್ತಿದ್ದರು. ಅವರು ಇಂದು ನಮ್ಮ ಮಧ್ಯೆ ಇಲ್ಲದಿದ್ದರೂ ಅವರ ಹಾಸ್ಯಪ್ರಜ್ಞೆ, ಮಾತು ನಮ್ಮೊಂದಿಗೆ ಸದಾ ಇರುತ್ತದೆ,” ಎಂದರು. ನಾಟಕಕಾರ ಡಾ. ಗೋವಿಂದ ಮಣ್ಣೂರ ಮಾತನಾಡಿ, “ಜಿ.ಎಚ್ ಮತ್ತು ನನ್ನ ಬಾಂಧವ್ಯ ಹಳೆಯದು” ಎಂದು ನೆನಪಿಸಿದರು.ಅವರ ಕೆಲಸದ ಬಿಡುವಿನ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೆವು. ಅವರಿಗೆ ಸೂಕ್ತ ಮನ್ನಣೆ ದೊರೆತಿದ್ದರೆ ಇಂದು ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರು,” ಎಂದರು.

ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಮಾತನಾಡಿದರು. ನಾಟಕಕಾರ ನಾರಾಯಣ ಭಾದ್ರಿ ಅವರಿಗೆ ಜಿ.ಎಚ್. ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.ಈಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಸಂದೇಶ ಜಿ.ಎಚ್., ಭರತ ಜಿ.ಎಚ್., ಅರವಿಂದ ಕುಲಕರ್ಣಿ, ಗಣೇಶ ಜೋಶಿ, ವಾದಿರಾಜ ನಾಗನೂರ, ಜಿ.ಎಚ್‌. ರಾಘವೇಂದ್ರ ಕುಟುಂಬಸ್ಥರು, ಸ್ನೇಹಿತರು, ಇತರರು ಉಪಸ್ಥಿತರಿದ್ದರು.ಶ್ಯಾಮಸುಂದರ ಬಿದರಕುಂದಿ ನಿರೂಪಿಸಿದರು. ನರಸಿಂಹರಾವ್ ವಂದಿಸಿದರು.

ಹಾಗೆ ಮಾಡಿದರೆ ಹಣವೂ ಹಾಳು ಬದುಕೂ ಗೋಳು…

ಡಾ. ಆನಂದ ಪಾಂಡುರಂಗಿ ಅವರ ಕಿವಿಮಾತು:
ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಮತ್ತೊಂದು ವರುಷ ಗತಿಸಿತು. ಹೊಸ ವರ್ಷವೂ ಬಂದಾಯಿತು. ಕಳೆದು ಹೋದ ವರ್ಷದಲ್ಲಿ ಮಾಡಿದ ಸಾಧನೆ, ಸಾಗಿ ಬಂದ ದಾರಿಯತ್ತ ಒಮ್ಮೆ ಇಣುಕಿ ನೋಡಿದರೆ ತೃಪ್ತಿ ತಂದೀತೇ? – ಬಹುತೇಕರಿಗೆ ಸಿಗುವ ಉತ್ತರ ಇಲ್ಲ ಎಂಬುದೇ, ಕೆಲವೇ ಕೆಲವರಿಗೆ ಹಳೆ ವರ್ಷ ತೃಪ್ತಿಕರ ಎನಿಸಿದರೂ ಅದು ಪೂರ್ಣ ಪ್ರಮಾಣದ್ದಲ್ಲ. ಇನ್ನು, ಹೊಸ ವರ್ಷದ ಮೊದಲ ದಿನವೇ ಉತ್ತರ ಪ್ರದೇಶದ ಲಖೋದಲ್ಲಿ ವ್ಯಕ್ತಿಯೊಬ್ಬ ಆಸ್ತಿಗಾಗಿ ಹೆತ್ತ ತಾಯಿ, ನಾಲ್ವರು ಸಹೋದರಿಯರನ್ನು ಭೀಭತ್ಸವಾಗಿ ಕೊಂದ ಘಟನೆ ಕೂಡ ನಡೆಯಿತು. ಹಲವೆಡೆ ಹೊಸ ವರ್ಷಾಚರಣೆ ನಿಮಿತ್ತ ಯುವಕರು ಕುಡಿದ ಮತ್ತಿನಲ್ಲಿ ಅಪಘಾತಕ್ಕೀಡಾದರು, ಇವನ್ನೆಲ್ಲ ನೋಡುತ್ತಿದ್ದರೆ ನಾವು ಎತ್ತ ನಾಗುತ್ತಿದ್ದೇವೆ? ಜೀವನದ ಗುರಿಯಾದರೂ ಏನು? ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಷ್ಟು ಸರಿ? ರಾಷ್ಟ್ರಕ್ಕೆ ಶಾಂತಿ, ಅಹಿಂಸೆ ಮಂತ್ರ ಸಾರಿಹೋದ ಮಹಾತ್ಮಗಾಂಧಿ ಅವರ ಹೆಸರಿನ ಬೆಂಗಳೂರಿನ ರಸ್ತೆಯಲ್ಲಿ ಪಾನಮತ್ತ ಯುವಸಮೂಹದ ಕೇಕೆ ಎಷ್ಟು ನಾಚಿಕೆಗೇಡು? ಏನು ಹೇಳಲು ಹೊರಟಿರುವಿರಿ ನೀವು ಮುಂದಿನ ಪೀಳಿಗೆಗೆ? ಎಂಬೆಲ್ಲ ಪ್ರಶ್ನೆಗಳೇಳುತ್ತವೆ.
ಸೋಷಿಯಲ್ ಡ್ರಿಂಕಿಂಗ್ ಈಗ ಕಾಮನ್ ಎನ್ನುವ ಉಡಾಫೆ ಮಾತು ಇಂದು ಯುವಕರನ್ನು ಎಂಜಿ ರಸ್ತೆಗೆ ತಂದು ನಿಲ್ಲಿಸಿದೆ. ಮದ್ಯದ ಅಮಲಿನಲ್ಲಿ ತೇಲಾಡುವ ಯುವಪೀಳಿಗೆ ನೋಡಿದರೆ ವಿಷಾದಭಾವ ಮೂಡದಿರದು. ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದ ಅದೆಷ್ಟೋ ಯುವಕ ಯುವತಿಯರ ಹೆತ್ತವರು ದೂರದ ಊರಿನಲ್ಲಿ ಮಗ ಅಥವಾ ಮಗಳು ಕೈತುಂಬಾ ಸಂಬಳ ಪಡೆಯುತ್ತಾಳೆ ಎಂಬುದನ್ನೇ ಹಲವರ ಎದುರು ಹೆಮ್ಮೆಯಿಂದ ಹೇಳಿಕೊಂಡು ಸಮರ್ಥನೆ ಗಿಳಿದಿರುತ್ತಾರೆ. ಆದರೆ ಅವರಿಗೇನು ಗೊತ್ತು ಮಕ್ಕಳ ಈ ಆಟಾಟೋಪ?. ಇಂತಹ ವರ್ಷಾಚರಣೆ ಈಗ ಬೆಂಗಳೂರಿನಾಚೆಯೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಎರಡನೇ ಹಂತದ ನಗರಗಳು ಸೇರಿದಂತೆ ಗ್ರಾಮೀಣ ಮಟ್ಟದಲ್ಲೂ ಈ ಟ್ರೆಂಡ್ ಶುರುವಾಗಿದೆ. ವರ್ಷಾಚರಣೆ ಹಿಂದಿನ ದಿನವೇ 309 ಕೋಟಿ ಮದ್ಯದ ವಹಿವಾಟು ಎಂಬ ಅಂಕಿ ಅಂಶ ನೋಡಿದರೆ ಗೊತ್ತಾಗುತ್ತದೆ ಮದಿರೆಯ ಮತ್ತು. ಈಗಂತೂ ಹೊಸ ವರ್ಷಾಚರಣೆ ಎಂದರೆ ವಯಸ್ಸಿನ ಭೇದಭಾವವಿಲ್ಲದೇ ಎಲ್ಲರೂ ಪಾನಮತ್ತರಾಗಿ ಡಾನ್ಸ್ ಮಾಡುವುದು ಎಂಬುದೇ ಪ್ರತಿಷ್ಠೆಯ ವಿಷಯವಾಗಿದೆ. ಕುಡಿಯದವನೇ ಮೂರ್ಖ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ‘ಏನ್ ಗುರು ನ್ಯೂ ಇಯರ್ ಪಾರ್ಟಿ ಮಾಡಲ್ವಾ? ಎಣ್ಣೆ ಗಿಣ್ಣೆ ಹಾಕಲ್ವಾ? ಧೂ ನಿಂದು ಒಂದೂ ಜನ್ಮಾನಾಗಿ ಎಂದು ಹೀಗಳೆಯುವ ಸ್ನೇಹಿತರ ಮಾತಿನಿಂದ ರೊಚ್ಚಿಗೆದ್ದು ಪಾರ್ಟಿಗೆ ಮುಂದಾಗುವ ಯುವಕರಿಗೇನೂ ಕೊರತೆಯಿಲ್ಲ. ಸಮಾಜ ಆಧುನಿಕತೆಯ ಹೆಸರಲ್ಲಿ ಇಂದು ಶ್ವೇಚ್ಛಾಚಾರಕ್ಕೆ ಇಳಿದಿದೆ. ಎಲ್ಲವೂ ಮುಕ್ತವಾಗಿ ನಡೆಯುತ್ತಿದೆ. ತಿಸ್ತಿನ ಚೌಕಟ್ಟು ಮೀರಿದೆ. ಹಾಗಿದ್ದರೆ ನಾವು ತುಳಿದಿರುವ ಮತ್ತು ಸಾಗುತ್ತಿರುವ ಹಾದಿ ಸರಿಯೇ? ಎಂಬುದನ್ನು ಒಮ್ಮೆ ಗಂಭೀರವಾಗಿ ಅವಲೋಕಿಸಿದರೆ ಸಿಗುವ ಉತ್ತರ ಖಂಡಿತವಾಗಿಯೂ ‘ಪರಿಯಲ್ಲ’ ಎಂಬುದೇ. ಮೊದಲನೆಯದಾಗಿ ಜನವರಿ ಒಂದರ ಹೊಸ ವರ್ಷ ನಮ್ಮ ಭಾರತೀಯದ ಹೊಸ ವರ್ಷ ಅಲ್ಲವೇ ಅಲ್ಲ. ಮೇಲಾಗಿ ಇದು ಇಂಗ್ಲಿಷ್ ಕ್ಯಾಲೆಂಡರ್ ಬದಲಾಗುವ ವಿಷಯವಷ್ಟೇ, ಇರಲಿ ಅದನ್ನೆಲ್ಲ ಮರೆತು ಇದನ್ನು ಸ್ವಾಗತಿಸೋಣ. ಆದರೆ ಕುಡಿತ ಅನಿವಾರ್ಯ ಅಲ್ಲವಲ್ಲ. ಸಹಜವಾಗಿ ಮನೆಮಂದಿ ಜತೆ ಕೂಡಿಕೊಂಡು ಸಹಭೋಜನ ಮಾಡಿ ಆಚರಿಸಬಹುದಲ್ಲವೇ? ಇಂದು ಸಲ್ಪ ಪ್ರಮಾಣದಿಂದ ಶುರುವಾಗುವ ಈ ಕುಡಿತ ಕ್ರಮೇಣ ಹಲವು ಪಾರ್ಟಿ, ಸಂದರ್ಭ, ಸನ್ನಿವೇಶಗಳನ್ನು ತಾನೇ ಸೃಷ್ಟಿಸುತ್ತದೆ. ‘ಏನಾಗಲ್ಲ. ಸ್ವಲ್ಪ ತಗೊ’ ಎಂದು ಹೇಳುವ ಸಮಾನಮನಸ್ಕ ಸ್ನೇಹಿತರ ಮಾತಿಗೆ ‘ಒಲ್ಲೆ’ ಎನ್ನಲಾರದ ಸ್ಥಿತಿಗೆ ಬಂದು ಬಿಡುತ್ತೇವೆ. ಅದರ ಬದಲು ಆರಂಭದಲ್ಲೇ ಅದಕ್ಕೆ ಬ್ರೇಕ್ ಹಾಕುವುದು ಸೂಕ್ತ ಇದರಿಂದ ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ಎಲ್ಲರಿಗೂ ಕ್ಷೇಮ.
ಈ ಎಲ್ಲ ವಿದ್ಯಮಾನಗಳನ್ನು ನೋಡಿದಾಗ ನಮ್ಮ ಜೀವನದ ಗುರಿ ಇದಲ್ಲ ಎಂಬ ನಗ್ನಸತ್ಯ ಎಲ್ಲರಿಗೂ ಆದರಲ್ಲೂ ವಿಶೇಷವಾಗಿ ಯುವಪೀಳಿಗೆಗೆ ಅರ್ಥವಾಗಬೇಕು. ಹಿರಿಯ ಸಾಧಕರ ಜೀವನ ಅರಿಯಬೇಕು. ಅದೆಷ್ಟೋ ಕಷ್ಟಕೋಟಲೆಗಳ ಮಧ್ಯೆ ಏನೂ ಸೌಲಭ್ಯಗಳಿಲ್ಲದಿದ್ದಾಗೂ ಸಾಧನೆಯ ಶಿಖರ ಏರಿದ ಮಹನೀಯರ ನಡೆನುಡಿ ನಮಗೆ ಆದರ್ಶವಾಗಬೇಕು. ಬದುಕಿನ ಗುರಿ ಬಗ್ಗೆ ಸ್ಪಷ್ಟತೆ ಇರಬೇಕು. ಆರ್ಥಿಕ ಸದೃಢತೆಯ ಶಕ್ತಿ ಈ ರೀತಿ ಪೋಲಾಗಬಾರದು. ಸಮಾಜದಲ್ಲಿ ಅದೆಷ್ಟೋ ಜನ ಇಂದಿಗೂ ಶಿಕ್ಷಣ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಅವರ ನೆರವಿಗೆ ಕೈ ಚಾಚಿದರೆ ಅದು ಜೀವನದ ಸಾರ್ಥಕತೆ. ಅದರ ಬದಲು ದುಡಿದ ಹಣದಲ್ಲಿ ಹೀಗೆ ಕುಡಿದು ಮೋಜು ಮಸ್ತಿ ಮಾಡಿದರೆ ಹಣವೂ ಹಾಳು ಆರೋಗ್ಯವೂ ಹೋಳು ಬದುಕೂ ಗೋಳು ಇದು ಮನದಟ್ಟಾದರೆ ಸಾಕು.

About Author:

Leave Your Comments

Your email address will not be published. Required fields are marked *