COVID-19 Resources for Mental Health Coaches... Learn More
Independence Day celebrations at SRJVP Shantiniketan English Medium School.
ತಾಯಿ-ತಾಯ್ತಾಡು ಸ್ವರ್ಗಕ್ಕಿಂತ ಮಿಗಿಲು:
ಹುಬ್ಬಳ್ಳಿ: ಇಲ್ಲಿಯ ಎಸ್‌ಜೆಆರ್‌ವಿಪಿ ಮಂಡಳದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಅತಿಥಿಯಾಗಿದ್ದ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಅನೇಕ ಮಹನೀಯರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ನಾವೆಲ್ಲ ಭಾರತೀಯರೆಂಬ ಹೆಮ್ಮೆ ಇರಬೇಕು. ದೇಶಕ್ಕಾಗಿ ದುಡಿಯಬೇಕು. ತಾಯಿ ಹಾಗೂ ತಾಯ್ತಾಡು ಸ್ವರ್ಗಕ್ಕಿಂತ ಮಿಗಿಲಾದದು ಎಂದರು. ಉದ್ಯಮಿ ಕಾಂತಿಲಾಲ ಕೇವಲಚಂದಜೀ, ಶಾಲೆಯ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿದರು.ಕೋಶಾಧಿಕಾರಿ ಪುರಣಕುಮಾರ ನಹಾಟಾ, ಜಂಟಿ ಕಾರ್ಯದರ್ಶಿ ಭರತ ಬಿ. ಜೈನ್, ಜಯಂತಿಲಾಲ್ ಕಟಾರಿಯಾ, ನಿರ್ದೇಶಕರಾದ ಪ್ರವೇಶ್ ಕೊಠಾರಿ, ದಾನೇಶಕುಮಾರ ಕಟಾರಿಯಾ, ಪ್ರಾಚಾರ್ಯ ಡಾ. ಕ್ಯಾಥರಿನ್ ದಿನೇಶ, ಇತರರು ಇದ್ದರು. ವಿದ್ಯಾರ್ಥಿಗಳಿಂದ ಪಥ ಸಂಚಲನ, ದೇಶಭಕ್ತಿ ನೃತ್ಯಗಳು ನಡೆದವು. ಮುಖೇಶ ಕೊಠಾರಿ ಅವರು ತಂದೆ ಮಿಲಾಪ ಚಂದಜೀ ಕೊಠಾರಿ ಅವರ ಸ್ಮರಣಾರ್ಥ ಸಿಹಿ ಹಂಚಿದರು.