COVID-19 Resources for Mental Health Coaches... Learn More

0836-2773878

“ಸೂಕ್ತ ಮಾರ್ಗದರ್ಶನದಿಂದ ಸ್ವಸ್ಥ ಸಮಾಜ”

“ಕಳೆದ ತಿಂಗಳಲ್ಲಿ ಇಬ್ಬರು ಯುವತಿಯರ ಕೊಲೆ ಪ್ರೀತಿ- ಪ್ರೇಮದ ಹೆಸರಲ್ಲಿ ನಡೆದಿರುವುದು ಯುವಕರ ಮನಸ್ಥಿತಿ ಕುರಿತು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಘಟನೆಗಳನ್ನು ಮನೋರೋಗ ತಜ್ಞರು ವಿಭಿನ್ನವಾಗಿ ನೋಡುತ್ತಾರೆ. ಯುವಕರಲ್ಲಿ ಇಂಥ ಮನೋಭಾವ ಬೆಳೆಯಲು ಕಾರಣಗಳು ಹಾಗೂ ಇದಕ್ಕೆ ಪರಿಹಾರಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯವೂ ಅಲ್ಲದ ಪ್ರೌಢವೂ ಸ್ಥಿತಿಯಲ್ಲಿರುವ ಹದಿಹರೆಯದವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಆವಶ್ಯಕ. ಇದು ಪಾಲಕರ ಹಾಗೂ ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಆಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ.”

ಯ ವತಿಯರ ಕೊಲೆ ಮಾಡಿರುವುದು.. * ಪ್ರೀತಿಯಲ್ಲ, ಕ್ರೌರ್ಯ, ಮಕ್ಕಳ ವಯಸ್ಸಿಗನುಗುಣವಾಗಿ ಪಾಲಕರು ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಮೌಲ್ಯಗಳ ಸಂಸ್ಕಾರ ನೀಡಿದರೆ ಮಕ್ಕಳು ಸರಿಯಾದ ಹಾದಿಯಲ್ಲಿ ಸಾಗುತ್ತಾರೆ. ಹದಿಹರೆಯದ ವಯಸ್ಸು ಆಕರ್ಷಣೆಯ ಅವಧಿ, ಇವರು ಮಕ್ಕಳೂ ಅಲ್ಲ. ಪ್ರೌಢರೂ ಅಲ್ಲ, ದ್ವಂದ್ವ ವಯಸ್ಸು ಇದಾಗಿದ್ದು, ಈ ಹಂತದಲ್ಲಿ ಹೆಚ್ಚಿನ ಕಾಳಜಿ ಅವಶ್ಯ. ರಂಜನೆಯ ಇತಿ ಮಿತಿಯನ್ನು ಹಾಕದಿದ್ದರೆ ಅನಾಹುತಗಳು ನಡೆಯುವ ಸಾಧ್ಯತೆಯಿದೆ. ಯುವತಿಯರೊಂದಿಗಿನ ಆಕರ್ಷಣೆಯನ್ನು ಧನಾತ್ಮಕವಾಗಿಸುವ ಅವಶ್ಯಕತೆಯಿದೆ. ಯುವತಿಯರನ್ನು ನೋಡುವ ದೃಷ್ಟಿಕೋನ ಬದಲಿಸಬೇಕು.

ಪ್ರೀತಿ-ಪ್ರೇಮದ ಕಲ್ಪನೆ ತಿಳಿಸಬೇಕು. ಪರಿಹಾರೋಪಾಯಗಳು: ಸಮಾಜದಲ್ಲಿ ಜಾಗೃತಿಯಾದರೆ ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಸಾಧ್ಯ. ಯುವಕರು ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಪ್ರೇರೇಪಿಸಬೇಕು. ಯುವಜನರು ಮಾನಸಿಕವಾಗಿ ಸದೃಢವಾಗಿರುವುದು ಕೂಡ ಅಭಿವೃದ್ಧಿಯ ಪ್ರಕ್ರಿಯೆ ಎಂಬುದನ್ನು ಜನಪ್ರತಿನಿಧಿಗಳು ಮನಗಾಣಬೇಕು. ಸಂಬಂಧಗಳನ್ನು ಆರೋಗ್ಯಕರವಾಗಿ ಬೆಳೆಸುವ ಕ್ರಿಯೆ ನಡೆಯಬೇಕಿದೆ. ಹಲವು ತಜ್ಞರು ಉಚಿತವಾಗಿ ಯುವಕರಿಗೆ ಮಾನಸಿಕ ಆರೋಗ್ಯ ಕುರಿತು ಮಾರ್ಗದರ್ಶನ ಮಾಡುತ್ತಾರೆ. ಬಡಾವಣೆಗಳಲ್ಲಿ ಯುವಕರ ಮಾರ್ಗದರ್ಶನಕ್ಕಾಗಿಯೇ ತಂಡಗಳ ರಚನೆ ಮಾಡಬೇಕು, ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. * ಡಾ. ಆನಂದ ಪಾಂಡುರಂಗಿ.

About Author:

Leave Your Comments

Your email address will not be published. Required fields are marked *