COVID-19 Resources for Mental Health Coaches... Learn More

0836-2773878

ಮಕ್ಕಳ ಮೇಲಿನ ಅತಿಯಾದ ಕಾಳಜಿ ಅವರ ಬಾಲ್ಯ ಕಸಿದುಕೊಂಡಿದೆ: ಡಾ. ಆನಂದ ಪಾಂಡುರಂಗಿ

ಅತಿಯಾದ ಕಾಳಜಿ ಅವರ ಬಾಲ್ಯವನ್ನು ಕಸಿದು ಕೊಂಡಿದೆ. ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿ, ಮಕ್ಕಳ ಕನಸುಗಳು ನನಸಾಗಲು ಸಹಾಯ ಮಾಡಿ, ಹರಿದ ಬಟ್ಟೆ ಉಟ್ಟರೂ ಚಿಂತೆಯಿಲ್ಲ. ಕೈಯಲ್ಲಿ ಒಂದು ಪುಸ್ತಕವಿರಲಿ ಎಂದು ಖ್ಯಾತ ಮನೋರೋಗ ತಜ್ಞ ಹಾಗು ಬರಹಗಾರ ಡಾ. ಆನಂದ ಪಾಂಡುರಂಗಿ ಹೇಳಿದರು. ಜಮಗೋಡ, ಅಕ್ಷರಾ ಫೌಂಡೇಶನ್ ಬೆಂಗಳೂರು ಹಾಗು ಜಿನದೇವ ಪ್ರಕಾಶನ ಹಿಚಕಡ ಇವರ ಆಶ್ರಯದಲ್ಲಿ ಅರ್ಪಿತಾ ಕ್ರಿಯೇಷನ್ಸ್ ಉದ್ಘಾಟನೆ ಹಾಗು ಮನೋಹರ ನಾಯಕರ ಪಂಚ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತ ನಾಡಿ, ಪುಸ್ತಕಗಳನ್ನು ಓದುವ ಮಕ್ಕಳ ಸಂಖ್ಯೆ ಕಡಿಮೆ. ಯಾಗುತ್ತಿದೆ.

ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿ. ಮನೋಹರ ನಾಂಕ ಈ ಕೃತಿಗಳನ್ನು ಬರೆದು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಿದ್ದು ಸಾರ್ಥಕ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಾತನಾಡಿ, ಮನೋಹರ ನಾಯಕರ ಪ್ರತಿಯೊಂದು ಕೃತಿಯು ಪ್ರಾದೇಶಿಕ ಕಾದಂಬರಿಯಂತಿದೆ. ಅರ್ಪಿತಾ ಕ್ರಿಯೇಷನ್ಸ್ ಮೂಲಕ ಆರಂಭದಲ್ಲೇ ಸಹಾಯ ಹಸ್ತ ನೀಡುವ ಮೂಲಕ ಮಾದರಿ ಕಾರ್ಯಕ್ಕೆ ಈ ಸಂಸ್ಥೆ ಮುಂದಾಗಿದೆ. ಮನುಷ್ಯರಿಗೆ ಸಾಂಸ್ಕೃತಿಕ ಮುಖ ಮುಖ್ಯ ಇಂದಿನ ಕಾಲದಲ್ಲಿ ನಿಜವಾದ ತಾಯಿಗೆ ಸನ್ಮಾನ, ಬಾಲೆಗೆ ನೆರವು ಅಕ್ಷರಾ ಫೌಂಡೇಶನ್‌ರವರು ಮನೋಹರ ನಾಯಕರನ್ನು ಸನ್ಮಾನಿಸಿ ಗೌರವಿಸಲು ಮುಂದಾದಾಗ ಈ ಸನ್ಮಾನ ನನ್ನ ತಾಯಿಗೆ ಮಾಡಿ. ಈ 5 ಪುಸ್ತಕಗಳನ್ನು ನನ್ನ ತಾಯಿಗೆ ಅರ್ಪಣೆ ಮಾಡಿದ್ದೇನೆ ಎಂದು ತಿಳಿಸಿದಾಗ ಮನೋಹರ ನಾಯಕರ ತಾಯಿಯವರನ್ನು ಸನ್ಮಾನಿಸಲಾಯಿತು. ಮನೋಹರ ನಾಯಕ ಕುಟುಂಬದ ಪರವಾಗಿಯೂ ಅವರ ತಾಯಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಅರ್ಪಿತಾ ಕ್ರಿಯೇಷನ್ಸ್ ಆರಂಭದಲ್ಲೇ ತಂದೆಯನ್ನು ಕಳೆದುಕೊಂಡಿರುವ ಪುಟ್ಟ ಬಾಲೆ ದೀಕ್ಷಾ ಗೌಡಗೆ ಸುಕನ್ಯಾ ಸಮೃದ್ಧಿ ಯೋಜನೆಯ 10,000 ರು.ಗಳ ಠೇವಣಿ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಿ ಜನ ಮೆಚ್ಚುಗೆಗೆ ಪಾತ್ರವಾಯಿತು. ಐವರಿಂದ ಕೃತಿ ಪರಿಚಯ ಮನೋಹರ ನಾಯಕ ಬರೆದಿರುವ 5 ಕೃತಿಗಳಲ್ಲಿ ನಮ್ಮೂರ ಸುತ್ತ ಎನ್ನುವ ಕೃತಿಯನ್ನು ಪ್ರೊ. ಅರವಿಂದ ಕುಲಕರ್ಣಿ ಧಾರವಾಡ ಪರಿಚಯಿಸಿದರು. 999 ಗಾದೆ ಮಾತುಗಳು ಪುಸ್ತಕವನ್ನು ಅಕ್ಷರಾ ಫೌಂಡೇಷನ್ ಅಧ್ಯಕ್ಷ ಕೆ. ಎಚ್. ನಾಯಕ ಪರಿಚಯಿಸಿದರು. ಮುಸ್ಸಂಜೆ ಕೃತಿಯನ್ನು ಬೀರಣ್ಣ ನಾಯಕ ಮೊಗಟಾ ಪರಿಚಯಿಸಿದರೆ ನಾವು ಪುಸ್ತಕವನ್ನು ಮಂಜುನಾಥ ಗಾಂವಕರ ಬರ್ಗಿ ಪರಿಚಯಿಸಿದರು. ವ್ಯಥೆಯ ಕಥೆ ಪುಸ್ತಕವನ್ನು ವೆಂಟು ಮಾಸ್ತರ ಶಿಳ್ಯಾ ಪರಿಚಯಿಸಿದರು. ನಿಸರ್ಗದತ್ತ ಮರಳುವ ಸಂದೇಶ ಮರಳಿ ನಿಸರ್ಗದತ್ತ ಎಂಬ ಸಂದೇಶವನ್ನು ಸಾರುತ್ತ ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ, ಕೃಷಿ ಹಾಗು ಪರಿಸರ ಜಾಗೃತಿ ಮುಂತಾದ ಕ್ಷೇತ್ರಗಳಲ್ಲಿ ನಮ್ಮಿಂದ ಆದ ಸೇವೆಯನ್ನು ಮಾಡುವ ಗುರಿಯೊಂದಿಗೆ ಬಾಲ್ಯದಲ್ಲಿಯೇ ತಂದೆ-ತಾಯಿ ಯರನ್ನು ಕಳೆದುಕೊಂಡ ಮಕ್ಕಳ ವಿಶೇಷವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮಿಂದ ಆದ ಸಹಾಯಹಸ್ತವನ್ನು ನೀಡುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. > ಮನೋಹರ ನಾಯಕ, ಕೃತಿಕಾರ ರಾಜಶ್ರೀ ಸ್ವಾಗತಿಸಿದರು. ರಾಜೇಶ ಮಾಸ್ತರ ಸೂರ್ವೆ ನಿರ್ವಹಿಸಿದರು. ಅರ್ಪಿತಾ ನಾಯಕ ವಂದಿಸಿದರು. ನಮ್ಮ ಊರು = ರಸ್ತೆ ಪಕ್ಕ ವಿರ ಮನುಷ್ಯರು ನಮಗೆ ಬೇಕಾಗಿದ್ದಾರೆ. ಮನುಷ್ಯ ಮನುಷ್ಯನಾಗಲು ಕಾವ್ಯ ಸಾಹಿತ್ಯವಾಗಬೇಕು. ರಾಜಕೀಯಕ್ಕೆ ಸಾಹಿತ್ಯದ ದೀಕ್ಷೆಯಾಗಬೇಕು. ಉತ್ತಮ ಸಾಹಿತ್ಯ ಸೃಷ್ಟಿಯಾಗಬೇಕು ಎಂದರು

About Author:

Leave Your Comments

Your email address will not be published. Required fields are marked *