COVID-19 Resources for Mental Health Coaches... Learn More
‘ಕಾಲೇಜುಗಳಲ್ಲಿ ಆಪ್ತ ಸಲಹಾ ಕೇಂದ್ರಸೂಕ್ತ’
ಧಾರವಾಡ: ಬ್ರೆಕ್-ಅಪ್ (ಪ್ರೇಮದ ಅಂತ್ಯ) ಸಮಸ್ಯೆಯನ್ನು ಬದುಕಿಗೆ ಪೂರಕವಾಗಿ ನಿರ್ವಹಿಸುವ ಕಲೆ ಕಲಿಸುವುದು ಇಂದಿನ ಅವಶ್ಯಕತೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟಿದ್ದಾರೆ. ಬ್ರೆಕ್-ಅಪ್ ಹೆಚ್ಚುತ್ತಿರುವುದು ಈಗಿನ ವಾಸ್ತವ. ಆದ್ದರಿಂದ ಹದಿಹರೆಯಕ್ಕೆ ಕಾಲಿಡುತ್ತಿರುವವರು ಹಾಗೂ ಯೌವನಾವಸ್ಥೆಯಲ್ಲಿರುವವರು ಓದುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ‘ಕೌನ್ಸೆಲಿಂಗ್’ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸಲಹೆ ಮಾಡಿದ್ದಾರೆ. ‘ಸಂಯುಕ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು ‘ಹೈಸ್ಕೂಲ್ ಮತ್ತು ಕಾಲೇಜು ಹಂತದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬ್ರೆಕ್-ಅಪ್ ನಿರ್ವಹಣೆ ಕಲಿಸುವ ಆಪ್ತ ಸಲಹಾ ಕೇಂದ್ರಗಳು ಇರುವುದನ್ನು ಕಡ್ಡಾಯಗೊಳಿಸಬೇಕು’ ಎಂದಿದ್ದಾರೆ.
‘ಡಿಜಿಟಲ್ ಮಾಧ್ಯಮಕ್ಕೆ ಯುವ ಜನಾಂಗ ತುಂಬ ತೆರೆದುಕೊಂಡಿದೆ. ಅತ್ಯಂತ ಸೂಕ್ಷ್ಮ ವಯಸ್ಸು ಎನ್ನಲಾಗುವ 20- 22 ರ ಅವಧಿಯಲ್ಲಿ ಈ ಮಾಧ್ಯಮಗಳಿಂದ ಆಕರ್ಷಿತರಾಗಿ, ಸ್ನೇಹ- ಪ್ರೇಮ ಇತ್ಯಾದಿಗಳಿಗೂ ಆಕರ್ಷಿತರಾಗುತ್ತಾರೆ. ‘ಜೀವನದ ನೈಜತೆ, ಮುಂದಿನ ಜೀವನದ ಹಾದಿ ಇವ್ಯಾವುಗಳ ಬಗ್ಗೆಯೂ ಪ್ರೌಢಿಮೆ ಇರುವುದಿಲ್ಲ. ಹೀಗಾಗಿ ಅನಾಹುತಗಳಿಗೆ ದಾರಿಯಾಗುತ್ತದೆ. ಯುವ ಜನಾಂಗಕ್ಕೆ ಪ್ರಬುದ್ಧತೆ ಬರುವಂತೆ ಮಾಡಬೇಕಾಗಿದೆ. ಪಾಲಕರು ಮತ್ತು ಶಿಕ್ಷಕರು ಈಗ ಬರೀ ಯಶಸ್ಸಿನ ಮಂತ್ರವೊಂದನ್ನೇ ಮಕ್ಕಳಿಗೆ ಕಲಿಸುತ್ತಿದ್ದಾರೆ. ಇದು ತಪ್ಪು. ಯಶಸ್ಸಿನ ಜೊತೆಗೆ ವೈಫಲ್ಯವನ್ನು ಒಪ್ಪಿಕೊಳ್ಳುವುದನ್ನೂ ಕೂಡ ಮಕ್ಕಳಿಗೆ ಕಲಿಸಬೇಕಾಗಿದೆ. ‘ವೈಫಲ್ಯಗಳನ್ನು ಒಪ್ಪಿಕೊಳ್ಳುವುದು ಕಲಿತಾಗ ಈಗಿನ ಕಾಲದಲ್ಲಿ ಸಾಮಾನ್ಯವಾಗುತ್ತಿರುವ ಬ್ರೆಕ್-ಅಪ್ ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಯುವ ಜನಾಂಗಕ್ಕೆ ಸಹಜವಾಗುತ್ತದೆ’ ಎಂದು ಡಾ. ಪಾಂಡುರಂಗಿ ವಿವರಿಸಿದ್ದಾರೆ. ಪಾಲಕರು ಮತ್ತು ಶಿಕ್ಷಕರು ವೈಫಲ್ಯ ಅಪ್ಪಿಕೊಳ್ಳುವುದನ್ನು ಕಲಿಸಿದರೆ, ಶಿಕ್ಷಣ ಸಂಸ್ಥೆಗಳಲ್ಲೂ ಬ್ರೆಕ್ ಅಪ್ ಕೌನ್ಸೆಲಿಂಗ್ ಕೇಂದ್ರಗಳು ಮಕ್ಕಳಿಗೆ ಪ್ರೇಮದ ಅಂತ್ಯವನ್ನು ಒಪ್ಪಿಕೊಳ್ಳುವುದನ್ನು ಕಲಿಸಬೇಕು. ಇದು ಹಾರ್ಮೋನ್‌ಗಳು ಬದಲಾಗುವ ವಯಸ್ಸು. ಹೀಗಾಗಿ ನಿರಂತರವಾಗಿ ಅವರಿಗೆ ಪರ್ಯಾಯ ಸಾಧ್ಯತೆಗಳನ್ನು ತಲೆಯಲ್ಲಿ ಹಾಕಿದರೆ ಬ್ರೆಕ್-ಅಪ್‌ಗಳನ್ನು ಸಹಜವಾಗಿ ಸ್ವೀಕರಿಸಿ ತಮ್ಮ ಬದುಕನ್ನು ಮುಂದುವರಿಸುತ್ತಾರೆ. ಇದೊಂದೇ ಜೀವನವಲ್ಲ ಎಂಬುದು ಅರ್ಥವಾಗುತ್ತದೆ. ಪ್ರೇಮ ನಿರಾಕರಣೆಯಾದ ಅಥವಾ ಅಂತ್ಯವಾದ ಕಾರಣಕ್ಕೆ ಕಾಲೇಜು ಮಕ್ಕಳು ಕೊಲೆ- ಅಪರಾಧ ಕೃತ್ಯಗಳಿಗೆ ಇಳಿಯುವುದನ್ನು ಇದರಿಂದ ತಪ್ಪಿಸಬಹುದು ಎಂದು ಡಾ.ಪಾಂಡುರಂಗಿ ಹೇಳಿದ್ದಾರೆ. ‘ಡಿಜಿಟಲ್ ಮಾಧ್ಯಮಕ್ಕೆ ಜೋತು ಬಿದ್ದಿರುವ Hubli Edition Apr 21, 2024 Page No. 05 Powered by: erelego.com