COVID-19 Resources for Mental Health Coaches... Learn More

0836-2773878

“ಹಳಸದಿರಲಿ ರೋಗಿ ವೈದ್ಯರ ಸಂಬಂಧ..”

ಹಳಸದಿರಲಿ ರೋಗಿ ವೈದ್ಯರ ಸಂಬಂಧ..

“ಭರವಸೆಯ ಬೆಳಕು”

ಮನುಷ್ಯನಿಗೆ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಹಾಗಾದಾಗ ಇದರ ಉಪಶಮನಕ್ಕೆ ಬರುವವರು ವೈದ್ಯರು. ಆರೋಗ್ಯವೇ ಭಾಗ್ಯ ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಮಾತ್ರ ಸುದೃಢ ಸಮಾಜ ನಿರ್ಮಾಣ ಸಾಧ್ಯ ಜುಲೈ 1 ರಂದು ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳಿಗೆಗೆ ತಮ್ಮ ಬದುಕನ್ನು ಸಮರ್ಪಿಸಿ ಕೊಂಡಿರುವ ವೈದ್ಯರಿಗೆ ಆಭಿನಂದಿಸುವ, ಕೃತಜ್ಞತೆ ಸೂಚಿಸುವ ದಿನ ಇಂದಿನದಾಗಿದೆ.

ಯಾವುದೇ ಆಸ್ಪತ್ರೆಗೆ ಹೋಗಿ ನೋಡಿದರೂ ವೈದ್ಯರು ಸಹನೆ ಮತ್ತು ಪ್ರೀತಿಯಿಂದ ರೋಗಿಗಳ ಶುಶೂಜೆ ಮಾಡುತ್ತಿರುವದನ್ನು ನೋಡುತ್ತೆವೆ. ಆಯ್ಯೋ ಅನಾರೋಗ್ಯದ ಕಷ್ಟದ ಸಮಯದಲ್ಲಿ ಮರುಜೀವ ಕೊಟ್ಟರು ಪುಣ್ಯಾತ್ಮ ಎಂಬ ಭಾವ ಕೂಡಾ ಹೃದಯದಲ್ಲಿ ನೆಲೆಸುತ್ತದೆ. ನಾವು ಭೇಟಿ ಮಾಡುವ ವೈದ್ಯರಲ್ಲಿ ಬಹುತೇಕರು ನಮ್ಮನ್ನು ಪ್ರೀತಿಯಿಂದಲೇ ಕಾಣುವ ಅನುಭವವಾಗುತ್ತದೆ.

ಆಸ್ಪತ್ರೆಗಳಲ್ಲಿ ಕಾಣುವ ನೋವು, ಗದ್ದಲ, ನೂಕುನುಗ್ಗಲಿನ ಮಧ್ಯದಲ್ಲಿಯೂ ಕೂಡ, ಇಂತಹ ಸಂಯಮ, ಪ್ರೀತಿ ಹೇಗೆ ಸಾಧ್ಯ ಎಂಬ ಅಚ್ಚರಿಯೂ ಹಲವು ವೈದ್ಯರನ್ನು ನೋಡಿದಾಗ ಆಗುತ್ತದೆ. ಇಂದು ಕೂಡಾ ಉತ್ತಮ ಮನೋಗುಣದ ಜನ ವೈದ್ಯ ವೃತ್ತಿಯಲ್ಲಿ ಇದ್ದಾರೆ. ಇಂದಿನ ದಿನಗಳಲ್ಲಿ ವೈದ್ಯ ಮನೋಭಾವನೆಯ ಗುಣಮಟ್ಟ ಕಡಿಮೆಯಾಗಿದೆ ಎಂಬ ದೂರಿನ ಕೂಗಿದೆ. ಇವು ಕೆಲ ಪ್ರಕರಣಗಳಲ್ಲಿ ನಿಜವಾದರೂ, ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಅನೇಕ ವೈದ್ಯರು ವೃತ್ತಿ ಧರ್ಮದಲ್ಲಿ ಉತ್ತಮ ನಡವಳಿಕೆಯನ್ನೇ ತೋರುತ್ತಾರೆ. ಅಷ್ಟೆ ಅಲ್ಲ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕಾಯಕವನ್ನು ನಿರ್ವಹಿಸುತ್ತಾರೆ. ಎಲ್ಲ ಕ್ಷೇತ್ರಗಳಂತೆ ಇಲ್ಲೂ ವೈಪರೀತ್ಯಗಳಿವೆ ನಿಜ ವೈದ್ಯಕೀಯ ಕ್ಷೇತ್ರ ವಾಣಿಜ್ಯಕರಣಗೊಂಡಿದೆ ಎಂಬ ಆರೋಪದ ಮಧ್ಯೆಯೂ ಸೇವಾಕಾಂಕ್ಷಿಯುಳ್ಳ ವೈದ್ಯರು ನಮ್ಮ ಮಧ್ಯೆ ಅನೇಕರು.

ಇದೊಂದು ಪವಿತ್ರ ವೃತ್ತಿ ಈ ವೃತ್ತಿಯಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಬಹಳ ಮುಖ್ಯ ಇಂಥ ವ್ಯಕ್ತಿತ್ವ ಮತ್ತು ಸ್ವಭಾವ ಇದ್ದ ಆನೇಕ ವೈದ್ಯರನ್ನು ನಮ್ಮ ದೇಶ ಹೊಂದಿರುವುದು ನಮ್ಮ ಭಾಗ್ಯ ಸೇವೆಗೆ ಪ್ರತಿಯಾಗಿ ರೋಗಿ ಕೊಡುವ ಸಂಭಾವನೆ ಫಲಾಪೇಕ್ಷೆಯಿಲ್ಲದೇ ಕಾಯಕದಲ್ಲಿ ಕೈಲಾಸ ಕಂಡವರು ಆನೇಕರು, ಅವರು ಇಂದಿಗೂ ಎಂದೆಂದಿಗೂ ಆದರ್ಶಪ್ರಾಯರು.

“ಬದಲಾಗಿರುವ ಸಂಗತಿ”

ಬದಲಾದ ಸನ್ನಿವೇಶದಲ್ಲಿ ವೈದ್ಯ ಮತ್ತು ರೋಗಿಗಳ ಮನೆಯ ಸಂಬಂಧ ದಾರಿ ತಪ್ಪಿದೆ. ಇದಕ್ಕೆ ಕಾರಣ ನೂರೆಂಟು ಒಂದು, ವೈದ್ಯರು ಸೂಚಿಸಿದ ಪದ್ಧತಿ ಅನುಸರಿಸದೇ ಎಡವಟ್ಟು ಮಾಡಿಕೊಂಡಿರುವುದು, ಇನ್ನೊಂದು ಯಾರದೋ ಮಾಖ ಕಳ ಆಥವಾ ಗಣಿ ಗುಣಮುಖನಾಗಿಲ್ಲ ಎಂಬ ಕಾರಣಕ್ಕೆ ವೈದ್ಯರನ್ನು ದೂರುವುದು, ಇದರ ಜೊತೆಗೆ ವೈದ್ಯರಲ್ಲಿ ತಾಳ್ಮೆ, ಸಹನೆಯ ಕೊರತೆಯೂ ಇರಬಹುದು. ಇವರಿಬ್ಬರ ನಡಾವಿಂಬಂಧ ಒಂದುಕಾಯಿಲೆ ಗುಣಮುಖವಾಗುವಪ್ಪಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಆದೊಂದು ಅವಿನಾಭಾವ ಸಂಬಂಧ. ಬೆಲೆ ಕಟ್ಟಲಾಗದ ಅನುಬಂಧ,

ಇತ್ತೀಚಿನ ದಿನಗಳಲ್ಲಿ ದೇಶದ ವಿವಿದೆಡೆ ವೈದರ ಮೇಲೆ ಹಲ್ಲೆಯಾಗಿರುವ ಘಟನೆಗಳು ಕೇಳಿಬರುತ್ತವೆ. ಇದನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೋವು ಆಗುತ್ತದೆ. ಯಾವದೇ ವೈದ್ಯನಾದರೂ ಸಹ ರೋಗಿಗೆ ತನ್ನ ಶಕ್ತಿ ಮೀರಿ ಒಳ್ಳೆಯ ಸೇವೆ ಮತ್ತು ಚಿಕಿತ್ಸೆ ಕೊಡಲು ಪ್ರಯತ್ನಿಸುತ್ತಾನೆ. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ದಿನಗಳಲ್ಲಿ ಮಾನವೀಯ ಸಂಬಂಧಗಳು ನರಿಸಿ ಹೋಗುತ್ತಿರುವ ಕಾಲಘಟದಲ್ಲಿ ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ. ಆದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ, ತನ್ನ ವೃತ್ತಿ ಜೀವನ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತನ್ನ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು, ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನವೇ ವೈದ್ಯರ ದಿನ.

ಅದೇನೇ ಇರಲಿ. ನಮಗೆ ಹಲವಾರು ಬಾರಿ ನಮ್ಮ ಕಷ್ಟಗಳಿಂದ ವಿಮುಕ್ತಿ ಕೊಟ್ಟು ನಮ್ಮ ಬದುಕನ್ನು ಸಹ್ಯವಾಗಿ ಮಾಡಿರುವ ಹಲವಾರು ವೈದ್ಯರಿಗೆ ನಮ್ರವಾಗಿ ನಮಿಸೋಣ. ನಮ್ಮ ದೇಶದಲ್ಲಿ ಇಂತಹ ಹೃದಯವಂತ ವೈದ್ಯರ ಸಂಖ್ಯೆ ಹೆಚ್ಚಾಗಲಿ, ಹೃದಯವಂತ ವ್ಯಕ್ತಿಗಳನ್ನು ನಿರ್ಮಿಸುವ ಶಕ್ತಿ ನಮ್ಮ ಸಮಾಜಕ್ಕೆ ಹೆಚ್ಚಾಗಲಿ, ವೈದ್ಯರು ಮಾನಸಿಕ, ಶಾರೀರಕ ಕಾಯಿಲೆಗಳಿಂದ ಕಾಪಾಡುತ್ತಾರೆ. ಆದ್ದರಿಂದಲೇ ಅವರಿಗೆ ದೇವರ ಸ್ಥಾನ ಕೊಡಲಾಗಿದೆ. ಹಾಗೆ ಮಾನಸಿಕ, ಶಾರೀರಕ ಕಾಯಿಲೆಗಳಿಂದ ಉಪಶಮನವನ್ನು ನೀಡಬೇಕಾದರೆ ಒಟ್ಟು ವೈದ್ಯ ತಾಯಿ ತಂದೆ ಗುರು ಪಾತ್ರಗಳಲ್ಲಿ ತಪ್ಪದೇ ಜೀವಿಸಬೇಕು. ಹಾಗೆ ಜೀವಿಸಿದಾಗಲೇ ವೈದ್ಯೋ ನಾರಾಯಣೋ ಹರಿ ಎಂಬುವ ಪದಪ್ರಯೋಗ ಆ ವೈದ್ಯನಿಗೆ ಅನ್ವಯಿಸುತ್ತದೆ.

About Author:

Leave Your Comments

Your email address will not be published. Required fields are marked *