COVID-19 Resources for Mental Health Coaches... Learn More
“ಸ್ವಸ್ಥವಿದ್ದರೆ ಮನಸ್ಥಿತಿ ಎಲ್ಲವೂ ಸುಸ್ಥಿತಿ”
ದಿನದಿಂದ ದಿನಕ್ಕೆ ಸಮಾಜದಲ್ಲಿ ವಿಕೃತ ಕೃತ್ಯಗಳು ಅಟ್ಟಹಾಸ ಮೆರೆಯುತ್ತಿವೆ. ನಮ್ಮ ಊಹೆಗೂ ಮೀರಿ ಇಂತಹ ಅಸಹಜ ಕೃತ್ಯಗಳು ನಮ್ಮ ಮಧ್ಯೆ ವಿಜೃಂಭಿಸುತ್ತಿವೆ. ಇದಕ್ಕೆ ಉತ್ತಮ ನಿದರ್ಶನ ಮೊನ್ನೆಯಷ್ಟೇ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಅಮಾನುಷವಾಗಿ ಕೊಂದಿರುವ ಸಂಗತಿ ಈ ಘಟನೆ ಇಡೀ ಸಮಾಜವೇ ಒಂದು ಕ್ಷಣ ಹೀಗೂ ಉಂಟೇ ಎಂದು ಉದ್ಗರಿಸುವಂತೆ ಮಾಡಿತು. ಸಮಾಜದಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ. ಮಕ್ಕಳೇ ಆಕೆಗೆ ಸರ್ವಸ್ವ. ಹಾಗೇನಾದರೂ ಆದರೆ ಅದು ಜಗತ್ತಿನ 8ನೇ ಅದ್ಭುತ ಎಂದೆಲ್ಲಾ ಅಂದುಕೊಂಡ ನಮಗೆ ಈ ಘಟನೆ ಮನೋವಿಕೃತಿಯ ಕರಾಳ ಮುಖವನ್ನು ತೋರಿಸಿದೆ. ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಮತ್ತು ಇಂತಹ ಒಂದು ಕಠೋರ ನಿರ್ಧಾರಕ್ಕೆ ಬರುವ ಹಂತಕ್ಕೆ ಆಕೆಯ ಮನಸ್ಥಿತಿ ಹೋದ ಬಗ್ಗೆಯೂ ಚರ್ಚೆ ಹುಟ್ಟು ಹಾಕಿದೆ. ಈ ಕೃತ್ಯ ಎಸಗಿದ ಮಹಿಳೆ ಬಗ್ಗೆ ಎಲ್ಲರೂ ದಿಢೀರ್ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅದೇನೆಂದರೆ ಅದೆಷ್ಟು ನಿಷ್ಕರುಣಿ ತಾಯಿ ಈಕೆ. ಮಕ್ಕಳಾಗಿಲ್ಲ ಎಂದು ಹಗಲಿರುಳು ಕೊರಗುವ ಅನೇಕರಿರುವಾಗ ಭಗವಂತ ಕೊಟ್ಟ ಮಗುವನ್ನೇ ಅದೂ ತನ್ನ ಕೈಯ್ಯಾರೆ ಕೊಲ್ಲುತ್ತಾಳೆ ಅಂದರೆ ಅದೆಷ್ಟು ಕ್ರೂರಿ ಎಂದೆಲ್ಲ ನಾವು ಆಡಿಕೊಳ್ಳುತ್ತೇವೆ. ಆದರೆ ಆ ಮಟ್ಟದ ಹೇಯ ಕೃತ್ಯಕ್ಕೆ ಮುಂದಾಗಲು ಕಾರಣ ಅರಿಯುವ ಯತ್ನ ಮಾಡುವುದಿಲ್ಲ. ಹಾಗಂತ ಆಕೆಯ ಕೃತ್ಯ ಕ್ಷಮಾರ್ಹ ಅಥವಾ ಸರಿ ಎಂತಲ್ಲ. ಪರಿಸ್ಥಿತಿ ಕೈ ಮೀರಿದಾಗ ಆಗುವ ಅನಾಹುತದ ಪರಿಣಾಮದ ಅರಿವಿನ ಬಗ್ಗೆ ನಾವಿಲ್ಲಿ ಯೋಚಿಸಬೇಕಿದೆ. ಆಕೆ ಆ ನಿರ್ಧಾರಕ್ಕೆ ಬಂದ ಹಿನ್ನೆಲೆ ಮುನ್ನೆಲೆಗೆ ಬರಬೇಕು. ಇದನ್ನು ಬೆನ್ನು ಹತ್ತಿದಾಗ ನಮಗೆ ತಿಳಿದು ಬರುವ ಪ್ರಮುಖ ಸಂಗತಿ ಎಂದರೆ ಕೌಟುಂಬಿಕ ಕಲಹದಿಂದ ಆಕೆಗಾದ ಮಾನಸಿಕ ಅಸ್ವಾಸ್ಥ್ಯ, ಆ ಮಹಿಳೆಗೆ ಆಸ್ತಿ ಅಂತಸ್ತಿನ ಕೊರತೆಯಿರಲಿಲ್ಲ. ಅವಲಂಬಿತರ ಪೋಷಣೆಯ ಹೊರೆಯಿರಲಿಲ್ಲ. ತನ್ನದೇ ಸ್ಟಾರ್ಟ್ ಆಪ್, ತಾನೇ ಅದರ ಸಂಸ್ಥಾಪಕ ಸಿಇಒ, ನೂರಾರು ಜನರಿಗೆ ಉದ್ಯೋಗ ನೀಡಿದಾಕೆ. 100 ಬ್ರಿಲಿಯಂಟ್ ವುಮೆನ್ ಇನ್ ಎಐ ಎಡಿಕ್ಸ್ ಎಂಬ ಕೀರ್ತಿಗೆ ಭಾಜನಳಾದವಳು, ಪತಿಯೂ ಒಳ್ಳೆಯ ಉದ್ಯೋಗದಲ್ಲಿರುವಾತ. ಆತನಿಗೂ ಕೈ ತುಂಬಾ ಸಂಬಳ. ಆದೇನೋ ಕಾರಣಕ್ಕೆ ಪತಿ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಬಂದಿದೆ. ಅದು ಪ್ರತಿಷ್ಠೆಯ ಕಾಳಗದ ಮಟ್ಟಿಗೆ S ಹಲೋ ಡಾಕರ್ ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು (0836) 2773878, drpandurangi@yahoo.com
ಹೋದ ಪರಿಣಾಮ 2020ರಲ್ಲಿ ಆಕೆಯ ಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಪತಿಯ ಈ ಕ್ರಮ ಅಕೆಯ ಮನಸ್ಸನ್ನು ತುಂಬಾ ಘಾಸಿಗೊಳಿಸಿದೆ. ಮುಂಬರುವ ದಿನಗಳಲ್ಲಿ ಎಲ್ಲಿ ಮಗುವನ್ನು ಶಾಶ್ವತವಾಗಿ ಕಳೆದುಕೊಳ್ಳುವೆನೋ? ಎಂಬ ಆತಂಕ ಮತ್ತು ದ್ವೇಷಭಾವನೆ ಆಕೆಯಲ್ಲಿ ಮನೆ ಮಾಡಿತ್ತು. ಪತಿ ಮೇಲಿನ ಸಿಟ್ಟು ಒಂದೆಡೆಯಾದರೆ ಆ ಪತಿಯ ಬಳಿ ಮಗು ಹೋದರೆ ನನ್ನ ಗತಿ ಏನು? ಎನ್ನುವ ಆತಂಕಭರಿತ ವಿಚಾರ ಇನ್ನೊಂದೆಡೆ, ಇದರ ಪರಿಣಾಮ ತನ್ನ ಪತಿಗೆ ಯಾವುದೇ ಕಾರಣಕ್ಕೂ ತನ್ನ ಮಗು ಸಿಗಬಾರದು ಎಂಬ ಹಟ ಆಕೆಯನ್ನು ಇಂತಹ ಕೃತ್ಯ ಎಸಗುವ ಮಟ್ಟಕ್ಕೆ ತಂದು ನಿಲ್ಲಿಸಿರಬಹುದು. ಇದಕ್ಕೆ ಮನೋವೈದ್ಯಕೀಯ ಪರಿಭಾಷೆಯಲ್ಲಿ ಮನೋವೈಕಲ್ಯ ಎಂದು ಕರೆಯುತ್ತಾರೆ. ಮಗುವಿನ ಮೇಲಿನ ಅತಿಯಾದ ಮಮಕಾರದ ಜತೆಗೆ ನನಗೆ ಸಿಗದ್ದು ಪತಿಗೂ ಸಿಗಬಾರದು ಎಂಬ ದ್ವೇಷಯುಕ್ತ ಆಲೋಚನೆ ಅಥವಾ ಮನಸ್ಥಿತಿ ಈ ತರಹದ ಅನಾಹುತಕ್ಕೆ ಕಾರಣವಾಗುತ್ತದೆ. ದಾಂಪತ್ಯ ಜೀವನ ವಿಚ್ಚೇದನ ಹಂತಕ್ಕೆ ಹೋದದ್ದರಿಂದ ಆಕೆಗೆ ಈ ಸಮಯದಲ್ಲಿ ತನ್ನವರಿಂದ ನಿರೀಕ್ಷಿತ ಬೆಂಬಲ ಸಿಗದೇ ಇರುವುದು ಕೂಡ ಆಕೆಯಲ್ಲಿ ಭಿನ್ನತೆ ಮೂಡಿಸುತ್ತದೆ. ಆಗ ಆವರಿಸುವುದು ಏಕಾಂಗಿತನ, ಇದನ್ನು ಸಮರ್ಥವಾಗಿ ಎದುರಿಸಲಾಗದೇ ಉದ್ವೇಗ ಅಥವಾ ಉದ್ರೇಕಕ್ಕೆ ಒಳಗಾಗುವುದರ ಪರಿಣಾಮ ಇಂತಹ ಅಸಹಜ ಅನಾಹುತಗಳಾಗುತ್ತವೆ. ಅದರಲ್ಲೂ ಪ್ರಸವೋತ್ತರ ಮಹಿಳೆಯಲ್ಲಿ ಕೆಲ ಮಾನಸಿಕ ಸಮಸ್ಯೆಗಳು ಇರುತ್ತವೆ. ಹೀಗೆ ಮನಸ್ಥಿತಿ ಮತ್ತು ಪರಿಸ್ಥಿತಿ ಕೈ ಮೀರದಂತೆ ಕುಟುಂಬ, ಸಮಾಜ ಆದ್ಯತೆ ನೀಡಿದಲ್ಲಿ ದುರ್ಘಟನೆಗಳು ಸಂಭವಿಸುವುದಿಲ್ಲ. ಹಕ್ಕೆ, ಆತ್ಮಹತ್ಯೆಯಂತಹ ಪ್ರಕರಣಗಳಿಗೆ ಆಸ್ಪದವೇ ಇರುವುದಿಲ್ಲ. ಆ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಮನಸ್ಸು ಸ್ವಸ್ಥವಾಗಿ ಬೆಂಕಿಸಬೇಕು. ಮನಸ್ಸು ಒಮ್ಮೆ ಆಕಾಶಕ್ಕೂ ಹಾರಬಹುದು. ಪಾತಾಳಕ್ಕೂ ನೂಕಲ್ಪಡುವುದು. ಈ ಎರಡೂ ಅತಿಗಳ ಮಧ್ಯೆ ಇರುವುದೇ ಸೌಖ್ಯ ಜೀವನ.