COVID-19 Resources for Mental Health Coaches... Learn More
“ಸಾಫ್ಟ್ ಉದ್ಯೋಗಿಗಳಿಗೆ ಕೊರೊನಾ ಹಾರ್ಡ್ ಏಟು!”-ಡಾ.ಆದಿತ್ಯ ಪಾಂಡುರಂಗಿ, ಮನೋವೈದ್ಯರು, ಡಿಮ್ಹಾನ್ಸ್ ಧಾರವಾಡ
ಕೆಟ್ಟ ಸಮಯ ಹೋಗಿ ಮತ್ತೆ ಒಳ್ಳೆ ಸಮಯ ಬರುತ್ತದೆ. ಅದು ಬರುವವರೆಗೂ ಧೈರ್ಯ ಇಟ್ಟುಕೊಳ್ಳಬೇಕು. ಮಾನಸಿಕ ಶಕ್ತಿ ಕುಗ್ಗಬಾರದು. ಸಾಮಾಜಿಕ ಅಂತರ, ಆರ್ಥಿಕ ಮಿತಿ, ಅನವಶ್ಯಕ ಸುತ್ತಾಟ ನಿಯಂತ್ರಣದೊಂದಿಗೆ ಮನೆಯಲ್ಲಿಯೇ ಇದ್ದು ಒತ್ತಡ ನಿಗ್ರಹ ಮಾಡಿಕೊಳ್ಳಬೇಕು. ಬೆಳಗ್ಗೆ ಯೋಗ, ಮಧ್ಯಾಹ್ನ ಮನೆಯವರೊಂದಿಗೆ ಹರಟೆ, ಮಕ್ಕಳೊಂದಿಗೆ ಆಟಪಾತ ಇತ್ಯಾದಿಗಳನ್ನು ರೂಢಿಸಿಕೊಳ್ಳುವುದು ಸೂಕ್ತ. ಮಕ್ಕಳಿಗೆ ಕಥೆ ಹೇಳುವುದು, ಅನೌಪಚಾರಿಕ ಶಿಕ್ಷಣ ಮತ್ತು ಸಂಸ್ಕಾರ ನೀಡಲು ಇದು ಹೇಳಿ ಮಾಡಿಸಿದ ಸಮಯ. ಡಾ.ಆದಿತ್ಯ ಪಾಂಡುರಂಗಿ, ಮನೋವೈದ್ಯರು