COVID-19 Resources for Mental Health Coaches... Learn More
“ಸಾಧನೆಯ ಛಲವಿರಲಿ, ಗುರಿ ತಲುಪಲು ಮನೋಬಲವಿರಲಿ”
ಸಾಧನೆಯ ಛಲವಿರಲಿ, ಗುರಿ ತಲುಪಲು ಮನೋಬಲವಿರಲಿ.
ಸರ್, ನನಗೇಕೋ ಭವಿಷ್ಯದ ಅಭದ್ರತೆ ಮತ್ತು ಅನಿಶ್ಚತತೆ ಕಾಡುತ್ತಿದೆ. ಈಗಾಗಲೇ ಒಂದು ವರ್ಷ ಹೋಯಿತು. ಈ ಬಾರಿಯೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರದಿದ್ದರೆ ಎಂಬ ಭಯ ಮೂಡಲಾರಂಭಿಸಿದೆ. ಏನಾದರೂ ಉಪಾಯ ಸೂಚಿಸಿ. ಮನೆಯವರಿಗೆ ಮುಖ ತೋರಿಸಲು ಆಗದ ಸ್ಥಿತಿ ನನ್ನದು…’
ಇತ್ತೀಚೆಗೆ ನನ್ನ ಭೇಟಿಗೆ ಬಂದಿದ್ದ ಯುವಕನ ಆತಂಕ ಭರಿತ ಮಾತುಗಳಿವು, ಆ ಆತಂಕ ಬೇರಾವುದೂ ಅಲ್ಲ, ಪಿಯುಸಿ ನಂತರದ ಭವಿಷ್ಯ ರೂಪಿಸುವ ಏಣಿ ಹತ್ತಲು ಅಗತ್ಯವಾದ ನೀಟ್ ಅಥವಾ ಜೆಇಇ ಪರೀಕ್ಷೆಯದು.
ಇದು ಒಂದು ಪ್ರಕರಣವಷ್ಟೇ. ಇಂತಹ ನೂರಾರು ಪ್ರಕರಣಗಳು ಇವೆ. ಆದರೆ ಬೆಳಕಿಗೆ ಬಂದಿರುವುದು ಕಡಿಮೆ. ನಮ್ಮ ಸುತ್ತ ಮುತ್ತ ಇರುವ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀಟ್ ಅಥವಾ ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಇಟ್ಟುಕೊಂಡವರು. ಕೆಲವರು ಅದಕ್ಕೆ ಪೂರಕವಾಗಿ ಪರಿಶ್ರಮವನ್ನು ಕೂಡ ಹಾಕುತ್ತಾರೆ. ಆದರೂ ನಿರೀಕ್ಷಿತ ಫಲಿತಾಂಶ ಕಂಡಿರುವುದಿಲ್ಲ. ಪರಿಣಾಮ ಮತ್ತೆ ನೀಟ್ ಬರೆಯಲೆಂದು ಒಂದು ವರ್ಷ ಗ್ಯಾಪ್ ತೆಗೆದುಕೊಳ್ಳುತ್ತಾರೆ. ಈ ಅವಧಿಯಲ್ಲಿ ಅವರಿಗೆ ದೈನಂದಿನ ತರಬೇತಿಗಳು… ಇರುವುದಿಲ್ಲ.
ನೀಟ್ ಅಥವಾ ಜೆಇಇಯಲ್ಲಿ ಉತ್ತಮ ಫಲಿತಾಂಶವೊಂದೇ ಇವರ ಗುರಿ, ಅದಕ್ಕೆ ಹಗಲಿರುಳು ಶ್ರಮಿಸುತ್ತಾರೆ. ಆದರೆ ಈ ವೇಳೆ ಒಂದು ಸಣ್ಣ ಬೇಸರದ ಸಂಗತಿ ಅವರಲ್ಲಿ ಮನೆ ಮಾಡಿರುತ್ತದೆ, ಅದು ಏನೆಂದರೆ ಕಷ್ಟವೋ ನಷ್ಟವೋ ನನ್ನ ಕ್ಲಾಸಮೇಟ್‌ಗಳು ಈಗಾಗಲೇ ಸಿಕ್ಕ ಕೋರ್ಸ್ ಆಯ್ಕೆ ಮಾಡಿಕೊಂಡು ಪದವಿ ಕ್ಲಾಸ್‌ಗಳಿಗೆ ಹೋಗಿದ್ದಾರೆ. ನಾನು ನೀಟ್ ಅಥವಾ ಜಿವಾಗೆ ಜೋತು ಬಿದ್ದು ಒಂದು ವರ್ಷ ಕಳೆದುಕೊಂಡೆ. ಇದು ಒಂದು ತಪ್ಪು ನಿರ್ಧಾರ, ಮೇಲಾಗಿ ಈ ವರ್ಷವೂ ಕಳೆದ ಬಾರಿಯ ಫಲಿತಾಂಶ ಪುನರಾವರ್ತನೆ ಅದರೆ ಹೇಗೆ? ಅಥವಾ ಈ ವರ್ಷ ಉತ್ತಮ ಫಲಿತಾಂಶ ಬಂದೇ ಬರುತ್ತದೆ ಎನ್ನುವ ಬಾಕಿಯಾದರೂ ಏನು? ಇಂತಹದೊಂದು ಗೊಂದಲ ಅನೇಕ ವಿದ್ಯಾರ್ಥಿಗಳಲ್ಲಿ ಉದ್ಭವಿಸಿರುವುದು ಖಚಿತ.
ಮನಸ್ಸಿನಲ್ಲಿ ದೃಢತೆ ಅಗತ್ಯ: ಈ ಆತಂಕಕ್ಕೆ ಕಾರಣ ಮನಸ್ಸು, ಹೌದು, ಈ ಹಿಂದೆ ಕೈಗೊಂಡ ನಿರ್ಧಾರ ಒಮ್ಮೊಮ್ಮೆ ತಪ್ಪು ಎನಿಸುತ್ತದೆ. ನಾನೂ ಇತರ ಸಹಪಾಠಿಗಳಂತೆ ಓದು ಮುಂದುವರಿಸಿದ್ದರೆ ಒಂದು ನ ವರ್ಷವೂ ಉಳಿಯುತ್ತಿತ್ತು ಎನ್ನುವ ಭಾವನೆ ಮೂಡದಿರದು. ಇಂತಹ ವೇಳೆ ಮನಸ್ಸಿನಲ್ಲಿ ತೊಳಲಾಟ, ಹೊಯ್ದಾಟ ಸಹಜ ಆದರೆ ಇದಕ್ಕೆ ಆತಂಕ ಪಡಬೇಕಿಲ್ಲ. ವಿಶ್ವ ವಿಶಾಲವಿದೆ, ಬದುಕು ದೊಡ್ಡದಿದೆ. ತಪ್ಪೋ ಒಪ್ಪೋ ಕೈಗೊಂಡ ನಿರ್ಧಾರಕ್ಕೆ ವಿಷಾದ ಪಡದೇ ಅನುಸರಿಸಿದ ಮಾರ್ಗದಲ್ಲೇ ಪ್ರಯತ್ನಶೀಲರಾಗುವುದು ಸೂಕ್ತ. ಗುರಿ ಇರಬೇಕು ನಿಜ, ಆದರೆ ಕೆಲವೊಮ್ಮೆ ಗುರಿಯ ಪಥದಲ್ಲಿ ಅಗತ್ಯ ಬದಲಾವಣೆಗಳು ಎದುರಾಗುತ್ತವೆ. ಅವು ಅನಿವಾರ್ಯವೂ ಆಗಿರುತ್ತವೆ. ಆ ಬದಲಾವಣೆಗೆ ಒಗ್ಗಿಕೊಂಡು ಅದರಲ್ಲಿ ಸಾಧನೆ ಮಾಡುವುದು ಜಾಣತನ. ಹಾಗೆ ಮಾಡಿದಲ್ಲಿ ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಗೊಂದಲ, ಆತಂಕ, ಅಭದ್ರತೆ ಮತ್ತು ಅನಿಶ್ಚಿತತೆ ಎದುರಾಗುವುದಿಲ್ಲ.
ಬದುಕಿನಲ್ಲಿ ಸಾಧನೆಯೆಂಬ ಸವಾಲನ್ನು ಎದುರಿಸಲೇಬೇಕು. ಮೊದಲನೆಯದು, ಶೈಕ್ಷಣಿಕ ಹಂತದಲ್ಲಿನ ಸವಾಲುಗಳು, ಕನಿಷ್ಠ ಎರಡು ದಶಕಗಳ ಅವಧಿಯುದ್ದಕ್ಕೂ ನಾವು ಸಾಧನೆಯ ಹಾದಿಯಲ್ಲಿ ಸಾಗಿ ಬಂದರೆ ಜೀವನದಲ್ಲಿ ಅರ್ಧ ಗೆದ್ದಂತೆ, ಒಳ್ಳೆಯ ಶಿಕ್ಷಣ- ಉತ್ತಮ ಅಂಕಗಳನ್ನು ನಮ್ಮದಾಗಿಸುವುದೂ ಸಾಧನೆಯ ಮೊದಲ ಮೆಟ್ಟಿಲು, ಮುಂದೇನು ಓದಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು. ಸ್ನೇಹಿತ ಇದನ್ನು ಓದ್ದುತಾನೆ. ಅದಕ್ಕೆ ನಾನೂ ಓದುವೆ ಎಂಬುದು ತಪ್ಪು. ಆತನ ಆಸಕ್ತಿ, ಸಾಮರ್ಥ್ಯವೇ ಬೇರೆ ಇರುತ್ತದೆ. ಸಿಕ್ಕ ಸಿಕ್ಕ ಪರೀಕ್ಷೆ ಬರೆಯುವುದಲ್ಲ. ಇಂತಹ ಪ್ರಯತ್ನಗಳಲ್ಲಿ ವಿಫಲವಾದಲ್ಲಿ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಮುಖ್ಯವಾಗಿ ಕನಸನ್ನು ನನಸಾಗಿಸುವ ಛಲವಿರಬೇಕು. ಮೊದಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸಾತ್ವಿಕ ಆಹಾರ, ಲಘು ವ್ಯಾಯಾಮ, ದೈಹಿಕ ಆರೋಗ್ಯವನ್ನು ಕಾಪಾಡಿದರೆ, ಯೋಗ ಹಾಗೂ ಪ್ರಾರ್ಥನೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಯಾವುದೇ ಕೋರ್ಸ್ ಅಥವಾ ಪರೀಕ್ಷೆ ಆಯ್ಕೆ ಮಾಡಿಕೊಂಡರೂ – ಪರವಾಗಿಲ್ಲ ಅಧ್ಯಯನದಲ್ಲಿ ಶಿಸ್ತಿರಬೇಕು.