COVID-19 Resources for Mental Health Coaches... Learn More

0836-2773878

“ಸದೃಢ ಆರೋಗ್ಯಕ್ಕೆ ಭರತನಾಟ್ಯ ಉತ್ತಮ ಕಲೆ”

ಭರತನಾಟ್ಯವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಕಲೆಯಾಗಿದ್ದು, ಅದು ಏಕಾಗ್ರತೆಗೆ ಸಹಕಾರಿಯಾಗಿದೆ ಎಂದು ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಹೇಳಿದರು.

ಸಾಕೇತ ಸ್ಕೂಲ್ ಆಫ್ ಡ್ಯಾನ್ಸ್ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಶ್ರಯದಲ್ಲಿ ಭಾನುವಾರ ಕುಲ ಪುರೋಹಿತ ಆಲೂರ ವೆಂಕಟರಾವ ಭವನದ ರಂಗಮಂದಿರದಲ್ಲಿ ನಡೆದ ನೃತ್ಯೋದಯ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭರತನಾಟ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠ ಪ್ರಕಾರದ ಕಲೆಯಾಗಿದೆ. ಕರ್ನಾಟಕ ಸಂಗೀತ ಮತ್ತು ಭರತನಾಟ್ಯ’ ಒಂದಕ್ಕೊಂದು ಪೂರಕವಾಗಿದ್ದು, ಮನಸ್ಸನ್ನು ಮುದಗೊಳಿಸುವುದರ ಜತೆಗೆ ಹಲವಾರು ಸಮಸ್ಯೆಗಳಿಂದ ದೂರವಿಡಲು ಇದು ಸಹಕಾರಿಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬೆಕ್ಕೇರಿ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೃತ್ಯವು ಸಹಕಾರಿಯಾಗಿದೆ. ಮಕ್ಕಳು ಉಜ್ವಲ ಭವಿಷ್ಯರೂಪಿಸಿಕೊಳ್ಳಲು ಇದು ಅನಕೂಲವಾಗಲಿದೆ ಎಂದರು.

ಡಾ. ಕಿರಣ ಕುಲಕರ್ಣಿ ಮಾತನಾಡಿ, ಸಾಕೇತ ಸ್ಕೂಲ್ ಆಫ್ ಡ್ಯಾನ್ಸ್‌ ಯುವ ಕಲಾವಿದರ ವೇದಿಕೆಯಾಗಿದೆ. ಹಲವಾರು ಸಾಂಸ್ಕೃತಿಕ ಮರೆಗು ನೀಡುವಂತಹ ಕಲೆ ಬಿಂಬಿಸುವಲ್ಲಿ ಶ್ರಮಿಸುತ್ತಿದೆ ಎಂದರು. ನಂತರ ನಡೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ವಿದೂಷಿ ವಾಣಿ ಉಡುಪಿ ಶುಶ್ರಾವ್ಯವಾಗಿ ಹಾಡಿದರು. ತಬಲಾದಲ್ಲಿ ಅನೀಲ ಕೃಷ್ಣಾ ಮೇತ್ರಿ, ವಾಯೋಲೀನ್ ಪಂಡಿತ ಶಂಕರ ಕಬಾಡಿ ಸಾಥ್ ನೀಡಿದರು. ಯುವ ನೃತ್ಯಪಟು ಹುಬ್ಬಳ್ಳಿಯ ವಿದೂಷಿ ರೇವತಿ ಘೋಖಳೆ, ಸುಶ್ರಾವ್ಯ ಕುಲಕರ್ಣಿ, ಅಶ್ವಿನಿ ಜಗ್ಗಲ್, ಸೃಷ್ಟಿ ಪಾಟೀಲ, ಗುರುದೇವಿ ತುಂಬರಗುಡ್ಡಿ, ಸಾಕ್ಷಿ ಕುಲಕರ್ಣಿ, ಶೃದ್ದಾ ನವಲೆ, ಅನನ್ಯ ಪಾಲನಕರ ಸೇರಿದಂತೆ ಅನೇಕರಿಂದ ನೃತ್ಯ ಪ್ರದರ್ಶನ ನಡೆಯಿತು. ಹು-ಧಾ ಹಿರಿಯ, ಕಿರಿಯ ನೃತ್ಯಗುರುಗಳು ಇದ್ದರು.

About Author:

Leave Your Comments

Your email address will not be published. Required fields are marked *