COVID-19 Resources for Mental Health Coaches... Learn More
“ಸತತ ಪ್ರಯತ್ನ ಯಶಸ್ಸಿಗೆ ಹಾದಿ”

ಅಭ್ಯಾಸದಲ್ಲಿ ನಿಮ್ಮ ಪ್ರಯತ್ನ ಶೇ.100 ರಷ್ಟಿರಬೇಕು. ಕಾಲ್ಪನಿಕತೆಯಿಂದ ಹೊರಬಂದು ವಾಸ್ತವಿಕವಾಗಿ ಚಿಂತಿಸಬೇಕು,” ಎಂದು ಡಾ.ಆನಂದ ಪಾಂಡುರಂಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸ್ಥಳೀಯ ಭಂಡಾರಿ ಮಹಾವಿದ್ಯಾಲಯದಲ್ಲಿ ಸಾರಥಿ ಫೌಂಡೇಶನ್ ಹಮ್ಮಿಕೊಂಡಿದ್ದ ಪರೀಕ್ಷಾ ಸಂಭ್ರಮ ಸಂವಾದ ಟಾನಿಕ್-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕಲಿಯುವ ಹುಚ್ಚು ಮತ್ತು ಕಿಚ್ಚು ಇರಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ದಿನಗಳಿವೆ. ಸರಿಯಾದ ಯೋಜನೆ ರೂಪಿಸಿ ಅದರಂತೆ ತಯಾರಿ ಮಾಡಿಕೊಳ್ಳಬೇಕು. ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಬಾರದು,” ಎಂದರು.
ಡಾ.ಅನುಪಮಾ ಪಾಂಡುರಂಗಿ ಕಾರ್ಯಕ್ರಮ ಉದ್ಘಾಟಿಸಿ, ” ದೈಹಿಕವಾಗಿ ದುರ್ಬಲರಾದಾಗ ನಮಗೆ ಟಾನಿಕ್ ಬೇಕು. ಅದೇ ರೀತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಮಾನಸಿಕ ಟಾನಿಕ್ ಬೇಕು,” ಎಂದರು. ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಶ್ರೀ ಸಾನ್ನಿಧ್ಯವಹಿಸಿದ್ದರು. ಪಿಇ ಟ್ರಸ್ ನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ರಾಠಿ ಹಾಗೂ ಕಾವಡೆ ಶಾಲೆಯ ಚೇರಮನ್ ಆಶೋಕ ಹೆಗಡಿ, ಸಾರಥಿ ಫೌಂಡೇಶನ್ ಅಧ್ಯಕ್ಷೆ ಎಲ್.ಪಿ.ಹೆಗಡಿ, ಸಂಚಾಲಕ ಡಾ.ಪಿ.ಎಸ್. ಹೆಗಡಿ, ಕೆ.ಆರ್.ರಾಯಚೂರ, ಮುರಗೇಶ ಶೇಖಾ, ಶ್ರೀಕಾಂತ ಹುನಗುಂದ, ನೀಲಪ್ಪ ಗಾಣಿಗೇರ, ಮಲ್ಲು ತಾಂಡೂರ, ನಿಂಗಪ್ಪ ಅಲದಿ, ಗಂಗಾಧರ ಪತ್ತಾರ ಇದ್ದರು. ಗುಳೇದಗುಡ್ಡ ಪಟ್ಟಣದಲ್ಲಿ ಹುಬ್ಬಳ್ಳಿಯ ಸಾರಥಿ ಫೌಂಡೇಶನ್ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ.ಆನಂದ ಪಾಂಡುರಂಗಿ ಮಾತನಾಡಿದರು.
