COVID-19 Resources for Mental Health Coaches... Learn More
ಶ್ರೀ ಮೃತ್ಯುಂಜಯ ಕಾಲೇಜಿನಲ್ಲಿ ನಡೆದ “ದೀಕ್ಷಾರಂಭ” ಸಮಾರಂಭದಲ್ಲಿ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿದರು.


ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿದರು. ಭಾವನಾತ್ಮಕ ಮತ್ತು ಸಾಮಾಜಿಕ ಕ್ಷಮತೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅರಳಿಸುತ್ತವೆ ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಥಮ ವರ್ಷದ ಬಿ.ಎ. ಹಾಗೂ ಬಿ.ಕಾಂ. ವಿದ್ಯಾರ್ಥಿಗಳ ದೀಕ್ಷಾರಂಭಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಶೈಕ್ಷಣಿಕ ಜೀವನದಲ್ಲಿ ದಾರಿ ತಪ್ಪಬಹುದು. ಆದರೆ ದಿಕ್ಕು ತಪ್ಪಬಾರದು. ಮೊಬೈಲ್ ಫೋನ್ ಬಳಕೆ ಮಿತಿಯಲ್ಲಿರಬೇಕು ಎಂದರು.ಕೀಳರಿಮೆಯಿಂದ ಇರಬಾರದು. ಬದುಕನ್ನು ನೋಡುವ ದೃಷ್ಟಿ ಸರಿ ಇರಬೇಕು. ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಎರಡರಿಂದ ಮೂರು ಗಂಟೆ ಓದಬೇಕು ಎಂದದರು.
ಪ್ರಾಚಾರ್ಯೆ ನೀಲಕ್ಕ .ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಿ.ಎಚ್. ಅಂಗಡಿ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷೆ ವೀಣಾ ಹೂಗಾರ, ತಾರಾ ಬಿ.ಎನ್., ರೆಹಮಾನ್ ಗೊರಜನಾಳ, ಪ್ರೊ. ಸಂಜನಾ ಹೊಳಿಮಠ, ಪ್ರೊ. ನಾಗರಾಜ ಪಾಲ್ಗೊಂಡಿದ್ದರು.










