COVID-19 Resources for Mental Health Coaches... Learn More

0836-2773878

“ಶ್ರೀ ಕೋಡಿಮಠ ಮಹಾಸಂಸ್ಥಾನ, ಹಾರನಹಳ್ಳಿಯಲ್ಲಿ ಭಕ್ತಿಭಾವ ಮತ್ತು ಬೌದ್ಧಿಕ ಚಿಂತನೆಯ ಸಮನ್ವಯದೊಳಗೆ ಜ್ಞಾನದ ಜ್ಯೋತಿ ಬೆಳಗಿಸಿದ ಡಾ. ಆನಂದ ಪಾಂಡುರಂಗಿ”


ಆಧುನಿಕತೆ ಬೆಳೆದಂತೆ ಮನೋವಿಜ್ಞಾನ ಚಿಕಿತ್ಸಾ ಕ್ಷೇತ್ರವೂ ವಿಸ್ತರಿಸಿರುವುದು ಮಹತ್ವದ ಸಂಗತಿ ಎಂದು ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಮಹದೇಶ್ವರ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಮನೋ ವೈದ್ಯ ಮತ್ತು ವಿಜಯವಾಣಿ ಅಂಕಣಕಾರ ಧಾರವಾಡದ ಡಾ. ಆನಂದ ಕೆ.ಪಾಂಡುರಂಗಿ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಪರಿಹಾರ ನೀಡಲಿವೆ: ಸುಖ ಜೀವನ ಹೆಚ್ಚಾದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದಾನೆ. ಒತ್ತಡ ಬದುಕಿನ ಯಾಂತ್ರಿಕ ಜೀವನದಲ್ಲಿ ಸಂಬಂಧ, ಮಾನವೀಯ ಮೌಲ್ಯಗಳು ಮರೆಯಾಗಿವೆ. ಆಪ್ತ ಸಂವಾದ ಮತ್ತು ಸಲಹೆಗಳು ತುಮುಲಗಳಿಗೆ ಪರಿಹಾರ ನೀಡಲಿವೆ. ಈ ನಿಟ್ಟಿನಲ್ಲಿ ಪಾಂಡುರಂಗಿ ಅವರ ಜ್ಞಾನ, ಸರಳತೆ, ಸಜ್ಜನಿಕೆಗಳು ನೊಂದ ಸಾವಿರಾರು ಜನರಿಗೆ ಆತ್ಮಸ್ಥೆರ್ಯ ತುಂಬಿವೆ . ಇದು ಮಹತ್ತರ ಸೇವೆ ಎಂದರು. ಬಹುಜನರ ಮನೋವೇದನೆಯನ್ನು ತಮ್ಮ ಮೃದು ಮಾತುಗಳಿಂದಲೇ ಬಹುಪಾಲು ಗುಣಪಡಿಸುತ್ತ, ಸುಂದರ ಸಮಾಜ ನಿರ್ಮಾಣಕ್ಕೆ ಪಾಂಡುರಂಗಿ ಅವರು ಬದುಕನ್ನು ಮೀಸಲಾಗಿ ಇಟ್ಟಿದ್ದಾರೆ ಎಂದು ಸ್ವಾಮೀಜಿ ನುಡಿದರು. ಹದಿಹರೆಯದ ಸಮಸ್ಯೆ, ಬಾಲಕಾರ್ಮಿಕ ಮುಕ್ತ ಅರಸೀಕೆರೆ ಸಮೀಪದ ಕೋಡಿಮಠದಲ್ಲಿ ಸೋಮವಾರ ಮಹದೇಶ್ವರ ಜಾತ್ರೆ ಸಂದರ್ಭದಲ್ಲಿ ವಿಜಯವಾಣಿ ಅಂಕಣಕಾರ ಮತ್ತು ಖ್ಯಾತ ಮನೋವೈದ್ಯ ಡಾ. ಆನಂದ ಕೆ.ಪಾಂಡುರಂಗಿ ಅವರನ್ನು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಗೌರವಿಸಿದರು. ಉದ್ಯಮಿ ಮೃತ್ಯುಂಜಯ ಸಂಕೇಶ್ವರ ಇತರರು ಇದ್ದರು. ಸಮಾಜಕ್ಕಾಗಿ ಆನಂದ ಪಾಂಡುರಂಗಿ ಅಪಾರ ಕೊಡುಗೆ ನೀಡಿದ್ದಾರೆ. ಮಠದ ಗೌರವದಿಂದ ಇವರ ಸೇವಾ ವ್ಯಾಪ್ತಿ ವೇಗ ಹೆಚ್ಚಾಗಲಿ ಎಂದು ಸ್ವಾಮೀಜಿ ಆಶಿಸಿದರು. ಸಮಾರಂಭದಲ್ಲಿ ಉದ್ಯಮಿ ಮೃತ್ಯುಂಜಯ ಸಂಕೇಶ್ವರ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು. ಭಿಕ್ಷಾಟನೆ ಮಾಡಿದ ಸ್ವಾಮೀಜಿ ಅರಸೀಕೆರೆಗ್ರಾಮಾಂತರ: ಸುಕ್ಷೇತ್ರ ಕೋಡಿಮಠದಲ್ಲಿ ಶ್ರೀ ಮಹಾದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವದ ಎರಡನೇ ದಿನವಾದ ಭಾನುವಾರ ಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಚೇತನ್ ಮರಿದೇವರು ಸಂಪ್ರದಾಯದಂತೆ ಹಾರನಹಳ್ಳಿ ಗ್ರಾಮದಲ್ಲಿ ಭಿಕ್ಷಾಟನೆ ಮಾಡಿದರು.
ಶ್ರೀಗಳು ತಮ್ಮ ಗ್ರಾಮಕ್ಕೆ ಭಿಕ್ಷಾಟನೆಗೆ ಬರುವ ಸಂಪ್ರದಾಯವನ್ನು ಅರಿತಿದ್ದ ಗ್ರಾಮಸ್ಥರು, ಮಾತೆಯರು ಶ್ರದ್ಧಾ, ಭಕ್ತಿಗಳಿಂದ ಸ್ವಾಮೀಜಿ ಪಾದಪೂಜೆ ಮಾಡಿ, ಧಾನ್ಯಗಳನ್ನು ಜೋಳಿಗೆಗೆ ತುಂಬಿದರು. ಭಿಕ್ಷಾಟನೆಗೆ ಬರುವ ಮಾರ್ಗಗಳಲ್ಲಿ ಗ್ರಾಮದ ಯುವಕರು ತಳಿರು-ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸಿ ಮೆರುಗು ನೀಡಿದ್ದರು. ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಉತ್ತರಾಧಿಕಾರಿ ಚೇತನ್ ಮರಿದೇವರು ಹಾರನಹಳ್ಳಿ ಗ್ರಾಮದಲ್ಲಿ ಭಿಕ್ಷಾಟನೆ ಮಾಡುತ್ತಿರುವುದು.

About Author:

Leave Your Comments

Your email address will not be published. Required fields are marked *