COVID-19 Resources for Mental Health Coaches... Learn More
“ಶಿಕ್ಷಣಕ್ಕೆ ಶರಣಬಸವೇಶ್ವರ ಸಂಸ್ಥಾನ ಕೊಡುಗೆ ಅಪಾರ”


ಧಾರವಾಡದ ನಂತರ ಶಿಕ್ಷಣ ಕಾಶಿ ಎಂದು ಕಲಬುರಗಿಯನ್ನು ಕರೆಯಬಹುದು. ಏಕೆಂದರೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಂತಹ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅದರಲ್ಲೂ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದು ಮುಗಳನಾಗಾಂವಿ ಕಟ್ಟಿಮನಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು. ఎనోబిఆరా
ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ 2024ನೇ ಶೈಕ್ಷಣಿಕ ಸಾಲಿನ ನೀಟ್, ಐಐಟಿ ಹಾಗೂ ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಬ್ಯಾಂಕ್ ಪಡೆದ ಪ್ರತಿಭಾನ್ವಿತರಿಗೆ మిని ಘಟಿಕೋತ್ಸವದದಲ್ಲಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯು ಅನ್ನ, ಅರಿವು, ಅಕ್ಷರ, ಔಷಧ ದಾಸೋಹ ಗೈಯ್ಯುತ್ತಾ ಈ ಭಾಗದ ಜನರಿಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂಜೀವಿನಿಯಾಗಿದೆ. ಹಡಗುಗಳಿಗೆ ಲೈಟ್ ಹೌಸ್ ದಿಕ್ಕೂಚಿ ಹೇಗೋ ಹಾಗೆಯೇ ಎಸ್‌ಬಿಆರ್ ಶಿಕ್ಷಣಾರ್ಥಿಗಳಿಗೆ ದಿಕ್ಕೂಚಿಯಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿದೆ ಎಂದರು.
ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿ, ನಿಮ್ಮ ಕನಸನ್ನು ಮಕ್ಕಳ ಮೇಲೆ ಹೇರಬೇಡಿ, ಅವರ ಸಾಮರ್ಥ್ಯ ಅರಿತುಕೊಂಡು, ಅವರ ಕನಸನ್ನು ನನಸು ಮಾಡಿಕೊಳ್ಳಲು ಸಹಕಾರ ನೀಡಿ, ಮಕ್ಕಳ ನಡವಳಿಕೆಯ ಮೇಲೆ ಗಮನವಿರಲಿ, ಬಾಹ್ಯ ಆಕರ್ಷಣೆಗಳಿಗೆ ಒಳಗಾಗದಂತೆ ನೋಡಿ ಕೊಳ್ಳಿ, ಅವರ ಜೊತೆ ಸಮಯ ಕಳೆಯಿರಿ ಎಂದು ಪಾಲಕರಿಗೆ ಸಲಹೆ ನೀಡಿದರು.ಶರಣಬಸವ ವಿವಿ ಉಪಕುಲಪತಿ ಅನಿಲಕುಮಾರ ಬಿಡವೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿಶಿಕ್ಷಣ ಕ್ರಾಂತಿ ಮಾಡುತ್ತಿರುವ ಎಸ್‌ಬಿಆರ್ ಕಾಲೇಜಿನ ಕೊಡುಗೆ ಅಮೋಘವಾದುದು. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕ್ರಾಂತಿ ಮಾಡುತ್ತಿದೆ ಎಂದರು.
ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಂಸ್ಥೆಯು 250 ವರ್ಷಗಳಿಂದ ಜ್ಞಾನ ದಾಸೋಹ ಮಾಡುತ್ತಾ ಬಂದಿದೆ. ಡಾ.ಶರಣಬಸಪ್ಪ ಅಪ್ಪಾಜಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಥಮ ಸ್ಥಾನ ಕೊಡುತ್ತಾರೆ. ಅವರಿಂದಲೇ ಕಲ್ಯಾಣ ಕರ್ನಾಟಕ ಭಾಗವು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು.










