COVID-19 Resources for Mental Health Coaches... Learn More
“ಶಿಕ್ಷಣಕ್ಕಿಂತ ಮೌಲ್ಯಗಳು ಮುಖ್ಯ – ಲಯನ್ಸ್ ಸಂಸ್ಥೆಯ ಸ್ನೇಹ ಸಮ್ಮೇಳನದಲ್ಲಿ ಡಾ. ಆನಂದ ಪಾಂಡುರಂಗಿ ಪ್ರೇರಣಾದಾಯಕ ಉಪನ್ಯಾಸ”

ನರಗುಂದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ – ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಅಮೂಲ್ಯ: ಡಾ. ಪಾಂಡುರಂಗಿ
ಲಯನ್ಸ್ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಾದ ಇಂಗ್ಲಿಷ್ ಮಾಧ್ಯಮ ಶಾಲೆ, ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಸ್ವತಂತ್ರ ಪಿಯು ಕಾಲೇಜುಗಳ ವಾರ್ಷಿಕ ಸ್ನೇಹ ಸಮ್ಮೇಳನವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಉದ್ದೇಶ ಶಿಕ್ಷಣಕ್ಕಿಂತಲೂ ಮೌಲ್ಯಾಧಾರಿತ ಜೀವನದ ಅಭಿವೃದ್ದಿಗೆ ಮಕ್ಕಳಲ್ಲಿ ಶಿಸ್ತಿನೊಂದಿಗೆ ಓದು, ಆರೋಗ್ಯ ಹಾಗೂ ಸೃಜನಶೀಲತೆ ಬೆಳೆಸುವುದೇ ಎಂಬ ಸಂದೇಶ ನೀಡುವುದು. ಮುಖ್ಯ ಭಾಷಣ ಮಾಡಿದ ಧಾರವಾಡದ ಪ್ರಸಿದ್ಧ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರು, ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕಡೆ ವಿಶೇಷ ಗಮನ ನೀಡಬೇಕು, ಮೊಬೈಲ್ ವ್ಯಸನದಿಂದ ದೂರವಿಟ್ಟು ಪುಸ್ತಕದ ಓದಿಗೆ ಅಭಿರುಚಿ ಬೆಳೆಸಬೇಕು ಎಂದು ಸಲಹೆ ನೀಡಿದರು. ಮನೆಗಳಲ್ಲಿ ಪುಟ್ಟ ಗ್ರಂಥಾಲಯಗಳನ್ನು ಸ್ಥಾಪಿಸಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಿಸಲು ಪೋಷಕರು ಮುಂದಾಗಬೇಕು ಎಂದರು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಬಲತೆಗಾಗಿ ಅಗತ್ಯವಿದೆ ಎಂಬುದನ್ನು ಅವರು ಒತ್ತಿಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರಾದ ಸಿ.ಸಿ. ಪಾಟೀಲ ವಹಿಸಿದ್ದು, ಲಯನ್ಸ್ ಶಿಕ್ಷಣ ಸಂಸ್ಥೆ ದಿಗ್ಗಜರು ಈಗ IAS, KAS ಅಧಿಕಾರಿಗಳಾಗಿ ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ಗುಣಮಟ್ಟದ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಉಮೇಶಗೌಡ ಪಾಟೀಲ, ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ಬಿ.ಎಂ. ಜಾಬಣ್ಣವರ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೇಯಸ್ ವರ್ಣೇಕರ್ ಮತ್ತು ವಿದ್ಯಾಲಕ್ಷ್ಮಿ ಕವಲೂರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ವೈ.ಪಿ. ಕಲ್ಲನಗೌಡ್ರ ವಾರ್ಷಿಕ ವರದಿ ವಾಚಿಸಿದರು. ಶ್ರದ್ಧಾ ಪಟ್ಟಣಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದರು. ಸ್ನೇಹಾ ಶಿವಪುರ ಮತ್ತು ವಿಜಯಲಕ್ಷ್ಮಿ ನೂರಶೆಟ್ಟರ ನಿರೂಪಣಾ ಕಾರ್ಯ ನಿರ್ವಹಿಸಿದರು




