COVID-19 Resources for Mental Health Coaches... Learn More

0836-2773878

ವ್ಯಸನಮುಕ್ತ ಸಮಾಜವಾಗಲಿ- ಡಾ. ಆದಿತ್ಯ ಪಾಂಡುರಂಗಿ

ಧಾರವಾಡ: ವ್ಯಸನಮುಕ್ತ ಸಮಾಜದಿಂದ ಅಪರಾ ಧರಹಿತ ವಾತಾವರಣ ನಿರ್ಮಾಣ ಸಾಧ್ಯ ಎಂದು ಮನೋರೋಗ ತಜ್ಞ ಡಾ.ಆದಿತ್ಯ ಪಾಂಡುರಂಗಿ ಅಭಿಪ್ರಾಯಪಟ್ಟರು. ಗುರುವಾರ ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ವತಿಯಿಂದ ನಗರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮನೋಪರಿವರ್ತನೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಭಾರತದಲ್ಲಿ ಇತ್ತೀಚೆಗೆ ನಡೆದ ಮಾನಸಿಕ ಆರೋಗ್ಯ ಕುರಿತ ಸಮೀಕ್ಷೆಯಲ್ಲಿ ದುಶ್ಚಟಗಳಿಂದ ಅಪರಾಧಗಳು ಜರುಗುತ್ತವೆ ಎಂಬುದು ಕಂಡು ಬಂದಿದೆ. ಯುವಕರಲ್ಲಿನ ದುಶ್ಚಟಗಳು ಅಪರಾಧ ಕೃತ್ಯಕ್ಕೆ ಕಾರಣಗಳು. ಪ್ರೌಢಾವಸ್ಥೆಯಲ್ಲಿಯೂ ಪುರುಷರಂತೆ ಮಹಿಳೆಯರೂ ಕೂಡ ವ್ಯಸನಕ್ಕೆ ಸಿಲುಕುತ್ತಿರುವುದು ಖೇದಕರ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಯಾವುದೋ ಒತ್ತಡ, ಖಿನ್ನತೆ ಇನ್ನಿತರ ಕಾರಣಗಳಿಂದ ಅಪರಾಧಗಳನ್ನು ಎಸಗುವ ಮುನ್ನ ಮಾನಸಿಕವಾಗಿ ಆರೋಗ್ಯ ವಂತರಾಗಬೇಕು. ಇನ್ನೂ ಬ್ಬರ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಈ ಮೂಲಕ ಮುಂಜಾಗ್ರತೆಯಿಂದ ಕಾನೂನು ಉಲ್ಲಂಘಿಸಿ ಬಂಧನಕ್ಕೊಳಗಾಗುವ ಪರಿಸ್ಥಿತಿಯಿಂದ ಪಾರಾಗಬಹುದು. ಆಕಸ್ಮಿಕವಾಗಿ ಕಾರಾಗೃಹದಲ್ಲಿ ಬಂಧಿಯಾಗಿದ್ದರೆ, ಮಾನಸಿಕವಾಗಿ ಸಂಪೂರ್ಣ ಪರಿವರ್ತನೆ ಹೊಂದಿ ಉತ್ತಮ ಬದುಕು ರೂಪಿಸಿಕೊಳ್ಳಲು ಆಸಕ್ತಿ ತೋರಿಸಿ ಎಂದರು. உலக ம ಹಿರಿಯ ಹೃದಯರೋಗ ತಜ್ಞ ಡಾ.ಪ್ರಕಾಶ ರಾಮನಗೌಡ್ರ ಮಾತನಾಡಿ, ಮಾನಸಿಕ ಸ್ವಾಸ್ಥ್ಯದ ಜೊತೆ ಶಾರೀರಿಕ ಸ್ವಾಸ್ಥ್ಯದ ಕಡೆಗೂ ಗಮನ ಹರಿಸಬೇಕು. ಆರೋಗ್ಯವಂತ ಸದೃಢತೆಯಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ಈ ನಿಟ್ಟಿನಲ್ಲಿ ದೈಹಿಕವಾಗಿಯೂ ಆರೋ ಗ್ಯವಂತರಾಗಲು ಅಗತ್ಯ ಕಾಲಜಿವಹಿಸಿ ಎಂದು ಕೈದಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಕಾರಾಗೃಹದ ಅಧೀಕ್ಷಕ ಎಂ.ಎಂ.ಮರಿಗೌಡ ಮಾತನಾಡಿ, ಕಾರಾಗೃಹದಲ್ಲಿ ಕೈದಿಗಳ ಮನಪರಿವರ್ತನೆಗೆ ಎಲ್ಲ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಸಂಘ-ಸಂಸ್ಥೆಗಳ ನೆರವು ಕೂಡ ಪಡೆಯಲಾಗುತ್ತಿದೆ. ಕೈದಿಗಳ ಮನಪರಿ ವರ್ತನೆಗೆ ಕಾರ್ಯಕ್ರಮ ಆಯೋಜಿಸಿರುವ ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ಪದಾಧಿಕಾರಿಗಳಿಗೆ ಮರಿಗೌಡ ಕೃತಜ್ಞತೆ ಸಲ್ಲಿಸಿದರು. ಸಹಾಯಕ ಅಧೀಕ್ಷಕ ಎಸ್.ಡಿ.ಗಲ್ಲಿ, ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್‌ನ ಕಾರ್ಯದರ್ಶಿ ದೀಪಕ ಆಕಳವಾಡಿ ವೇದಿಕೆಯಲ್ಲಿದ್ದರು. ಜ್ಯೋತಿ ರಾವ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ಅಧ್ಯಕ್ಷ ಶಿವಯೋಗಿ ಅಮಿನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ.ಕುರಬೆಟ್ಟನಿರೂಪಿಸಿ, ವಂದಿಸಿದರು. ರೋಟರಿ ಕ್ಲಬ್ ಧಾರವಾಡ ಮಿಡ್‌ಟೌನ್ ಸದಸ್ಯರು, ಕಾರಾಗೃಹ ಸಿಬ್ಬಂದಿ ಮತ್ತು ಕೈದಿಗಳು ಕಾರ್ಯಕ್ರಮದಲ್ಲಿದ್ದರು.

About Author:

Leave Your Comments

Your email address will not be published. Required fields are marked *