COVID-19 Resources for Mental Health Coaches... Learn More

0836-2773878

“ವೈದರ ಸೂಚನೆ ಪಾಲಿಸಿ ಸಲೀಸಾಗಿ ಸಂಕಷ್ಟ ನಿವಾರಿಸಿ”

ವೈದರ ಸೂಚನೆ ಪಾಲಿಸಿ ಸಲೀಸಾಗಿ ಸಂಕಷ್ಟ ನಿವಾರಿಸಿ.

ಮನಸ್ಸು ದೇಹಕ್ಕಿಂತ ಸೂಕ್ಷ್ಮವಾದುದು. ಶರೀರದಂತೆ ಮನಸ್ಸಿಗೂ ಕಾಯಿಲೆ ಬರುತ್ತದೆ. ಶರೀರಕ್ಕೆ ಆದ ಗಾಯ ವಾಸಿ ಆಗಬಹುದು ಅಥವಾ ಮಾಡಬಹುದು. ಆದರೆ ಮನಸ್ಸಿಗೆ ಆಗುವ ಗಾಯ ಅಥವಾ ಖಿನ್ನತೆಯನ್ನು ಕೂಡಲೇ ವಾಸಿ ಮಾಡುವುದು ಕಷ್ಟ. ಹಾಗಂತ ಅಸಾಧ್ಯವಲ್ಲ. ಅದಕ್ಕೂ ಚಿಕಿತ್ಸಾ ವಿಧಾನಗಳಿವೆ, ಆಪ್ತ ಸಮಾಲೋಚನೆಯಂತಹ ಸೂಕ್ತ ಮದ್ದಿದೆ ಹಾಗೂ ಔಷಧಿಗಳಿವೆ. ಆದರೆ ಈ ತರಹದ ಚಿಕಿತ್ಸೆ ನಡೆಯುತ್ತಿರುವಾಗ ಮನೋವೈದ್ಯರು ಸೂಚಿಸುವ ಕ್ರಮ ಬಿಡಬಾರದು. ಬಿಟ್ಟರೆ ಮತ್ತೆ ಸಂಕಷ್ಟದ ಕೂಪಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೊಂದು ನೈಜ ಪ್ರಕರಣ ಇಲ್ಲಿದೆ.

ಆಕೆ ಒಬ್ಬ ಮಧ್ಯವಯಸ್ಕ ಗೃಹಿಣಿ, ನಾನಾ ಕಾರಣಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಬರೀ ಅಳಬೇಕು ಎನಿಸುವುದು, ಬೇಸರ, ಯಾವುದರಲ್ಲೂ ಸಂತಸವಿಲ್ಲ, ತೃಪ್ತಿಯಿಲ್ಲ. ಎಲ್ಲಿ ಹೋಗಲೂ ಮನಸ್ಸಿಲ್ಲ. ಜೀವನವೇ ಸಾಕಾಗಿದೆ ಎಂದು ಆತ್ಮಹತ್ಯೆಯ ದಾರಿ ತುಳಿಯುವ ಹಂತಕ್ಕೆ ಬಂದು ನಿಂತಿತ್ತು ಆಕೆಯ ಮನಸ್ಥಿತಿ, ಸುದೈವಕ್ಕೆ ಆಕೆಯ ಪತಿ ಸಕಾಲಕ್ಕೆ ಚಿಕಿತ್ಸೆಗೆ ಕರೆದುಕೊಂಡು ಬಂದರು. ಅವಳನ್ನು ನೋಡುತ್ತಿದ್ದಂತೆ ಅವಳಲ್ಲಿನ ಖಿನ್ನತೆಯ ಪ್ರಮಾಣದ ಅರಿವು ನನಗಾಗಿತ್ತು. ಏನಾಗಿದೆ ಎಂದು ವಿಚಾರಿಸಿದೆ. ಕ್ಷಣ ಕಾಲ ಆಕೆ ಉತ್ತರಿಸಲಿಲ್ಲ. ನಂತರ ತುಸು ಸುಧಾರಿಸಿಕೊಂಡು, ‘ಜೀವನವೇ ಸಾಕಾಗಿದೆ. ಯಾಂತ್ರಿಕವಾಗಿ ಈ ಬದುಕಿನ ದಿನಗಳನ್ನು ಕಳೆಯುತ್ತಿರುವೆ. ಯಾವುದರಲ್ಲೂ ಸಂತಸ ಎನಿಸುವುದೇ ಇಲ್ಲ’ ಎಂದು ದುಃಖದಿಂದ ಹೇಳಿದಳು.

ಇಬ್ಬರು ಮಕ್ಕಳು, ಪತಿಯನ್ನೊಳಗೊಂಡ ಸುಂದರ ಕುಟುಂಬ ಈ ಅವರದು. ಆದರೆ ಆಕೆ ಮಾತ್ರ ಮಾನಸಿಕ ಖಿನ್ನತೆಯ ಕೂಪಕ್ಕೆ – ಸಿಲುಕಿ ಕುಗ್ಗಿ ಹೋಗಿದ್ದಳು. ಆಕೆಗೆ ಆಪ್ತ ಸಮಾಲೋಚನೆ ಹಾಗೂ ಔಷಧಚಿಕಿತ್ಸೆಗೆ ಒಳಪಡಿಸಿದೆ. ಜೀವನ ಎಷ್ಟೊಂದು ಸುಂದರ – ಎನ್ನುವುದರ ಅರಿವು ಮೂಡಿಸುವ ಯತ್ನ ಮಾಡಿದೆ. ಸಾಧಕರ ಯಶೋಗಾಥೆ ವಿವರಿಸಿದೆ. ಕಡುಕಷ್ಟದ ಕಾಲದಲ್ಲೂ ಹೋರಾಟ ಮೂಲಕ ಯಶಸ್ಸಿನ ರುಚಿ ಕಂಡವರ ಕಥೆ ಹೇಳಿದೆ. ಆಗ ಆಕೆಗೆ ಗು – ಒಂದಿಷ್ಟು ಧೈರ್ಯ ಬಂದಿತು. ಬದುಕಬೇಕೆನ್ನುವ ಛಲ ಕ್ರಮೇಣ ಬರತೊಡಗಿತು. ಹಂತ ಹಂತವಾಗಿ ವೈಜ್ಞಾನಿಕ ಚಿಕಿತ್ಸೆಯನ್ನೂ ಸ ಆರಂಭಿಸಲಾಯಿತು. ಇವೆರಡರ ಪರಿಣಾಮ ಎರಡು ವರ್ಷದಲ್ಲಿ ಆಕೆಯ ಬದುಕಿನ ಚಿತ್ರಣವೇ ಬದಲಾಯಿತು. ಅವರ ಸಂಸಾರ ಆನಂದ ಸಾಗರವಾಯಿತು.

ಮುಂದೆ ಅವರು ನಾನು ನೀಡಿದ ಮಾತ್ರಗಳನ್ನು ನಿರಂತರ ರು ತೆಗೆದುಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಫೋನ್ ಮಾಡಿ ಕುಶಲೋಪರಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಕಳೆದ – ವಾರ ಆ ಗೃಹಿಣಿ ನನಗೆ ಕರೆ ಮಾಡಿ ಅಳಲಾರಂಭಿಸಿದಳು. ಅರೆರೆ, – ಮತ್ತೇನಾಯಿತು ಎಂದು ಕೇಳಿದೆ. 8 ವರ್ಷದ ರೂಬಿ ನನ್ನನ್ನು ಬಿಟ್ಟು ಬಾರದ ಲೋಕಕ್ಕೆ ಹೋದಳು. ಅವಳೆಂದರೆ ನನಗೆ ಪಂಚಪ್ರಾಣ. ನನಗೆ ಮತ್ತೆ ಜೀವನವೇ ಸಾಕು ಎನಿಸಿದೆ. ನೀವು ಕೊಟ್ಟ ಮಾತ್ರೆ ರ ಸೇವನೆಯನ್ನೂ ನಿಲ್ಲಿಸಿರುವೆ ಎಂದಳು. ಯಾರು ರೂಬಿ ಮಗಳೇ? ಯಾಕೆ ಸಾವನ್ನಪ್ಪಿದಳು? ಎಂದೆ. ಆಗ ಆಕೆ ಹೇಳಿದ್ದು ಸತ್ತದ್ದು ದ ಮಗಳಲ್ಲ ಡಾಕ್ಟರೇ ನನ್ನ ಮುದ್ದಿನ ನಾಯಿ ಎಂದು. ಒಂದು ಕ್ಷಣ – ನನಗೆ ಸಖೇದಾಶ್ಚರ್ಯವಾಯಿತು. ಸಾಮಾನ್ಯವಾಗಿ ನಾಯಿಗಳ ಜತೆ ಮನುಷ್ಯ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಅವು ಕೂಡ ಅಷ್ಟೇ ಭಾವನಾತ್ಮಕವಾಗಿ ಸ್ಪಂದಿಸುತ್ತವೆ. ಇವರ ಪ್ರಕರಣದಲ್ಲಿ ಅದದ್ದೂ ಅದುವೇ. ಹೀಗೆ ಆತ್ಮೀಯರೊಬ್ಬರು ಅಗಲಿದಾಗ ಆಗುವ ನೋವು, ಬೇಸರ ಈಕೆಗೂ ಆಗಿತ್ತು. ಪರಿಣಾಮ ಆಕೆ ಮಾನಸಿಕ ನೆಮ್ಮದಿ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದಳು. ಎಲ್ಲಕ್ಕಿಂತ ಮೇಲಾಗಿ ನಾನು ಕೊಟ್ಟ ಮಾತ್ರ ಸೇವಿಸುವುದನ್ನು ಬಿಟ್ಟಿದ್ದಳು. ಇದರ ಪರಿಣಾಮವೇ ಹೆಚ್ಚು. ಮತ್ತೆ ನಾ ಆಕೆಗೆ ಮಾತ್ರೆ ಸೂಚಿಸಿದೆ. ಅ ಮೂಲಕ ಸಮಸ್ಯೆ ಪರಿಹಾರವಾಯಿತು. ಆದರೆ ಮಾತ್ರ ಸೇವನೆಯ ಜಾಲ ನಿಂತಿದ್ದೇ ಆಕೆಯ ಸಂಕಷ್ಟಕ್ಕೆ ಕಾರಣವಾಗಿತ್ತು.

ಹಾಗೆ ಮಾಡಬೇಡಿ: ಯಾವುದೇ ವೈದ್ಯರಿರಲಿ, ಅವರು ಸೂಚಿಸಿದ ಚಿಕಿತ್ಸಾ ಕ್ರಮವನ್ನು ಎಂದಿಗೂ ಬಿಡಬಾರದು. ಅವರು ಸೂಚಿಸುವ ಮಾತ್ರೆಗಳ ಸೇವನೆ ಅವರು ಸಾಕು ಎಂದು ಹೇಳುವವರೆಗೆ ಬಿಡಬಾರದು. ಅದರ ಪರಿಣಾಮದ ಪ್ರಮಾಣ ವಿಕೋಪಕ್ಕೆ ತಿರುಗುವ ಸಾಧ್ಯತೆ ಹೆಚ್ಚು. ಬಿಡುವುದಾದರೆ ಅವರನ್ನು ಕೇಳಿ ಬಿಡಬೇಕು. ಇಲ್ಲದೇ ಹೋದರೆ ಮತ್ತೆ ಹಳೆ ಸಂಕಷ್ಟಕ್ಕೆ ಸಿಲುಕುವುದು ನೂರಕ್ಕೆ ನೂರರಷ್ಟು ಖಚಿತ. ಅದಕ್ಕೆ ಮನೋವೈದ್ಯರು, ವೈದ್ಯರು ಸೂಚಿಸುವ ಕ್ರಮ ತಪ್ಪದೇ ಪಾಲಿಸಿ. ಸಂಕಷ್ಟ ತಪ್ಪಿಸಿ.

About Author:

Leave Your Comments

Your email address will not be published. Required fields are marked *