COVID-19 Resources for Mental Health Coaches... Learn More

0836-2773878

ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅಗತ್ಯ

ರಾಮದುರ್ಗ: ಅರಿವು ಮೂಡಿಸುವ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯತೆ ಇದೆ ಎಂದು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬ್ಲಿ ಹೇಳಿದರು. ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ತಾಲೂಕಾ ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡ ಕಾನೂನು ಸಾಕ್ಷರತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಪ್ರಾಪ್ತ ಹುಡುಗ- ವಯಸ್ಸಿನ ಹುಡುಗಿಯರು ತಪ್ಪು ದಾರಿ ಹಿಡಿದು ನ್ಯಾಯಾಲಯಕ್ಕೆ ಪ್ರಕರಣಗಳು ಬರುತ್ತಿವೆ. ಇಂತ ಕೆಟ್ಟ ಪ್ರಕರಣಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತವೆ. ಕಾರಣ ಇದರ ಎಲ್ಲರೂ ಜಾಗೃತಿ ವಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ದಿವಾಣಿ ನ್ಯಾಯಾ ಧೀಶ ಶಿವಕುಮಾರ ದೇಶಮುಖ ರಾಮದುರ್ಗ: ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ನಡೆದ ಕಾನೂನು ಸಾಕ್ಷರತಾ ಶಿಬಿರವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬ್ಲಿ ಉದ್ಘಾಟಿಸಿದರು. ಮಾತನಾಡಿ, ವಿದ್ಯಾರ್ಥಿಗಳು ಕಾಲ ಹರಣ ಮಾಡದೇ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಿಬೇಕು ಎಂದರು. ಧಾರವಾಡದ ಖ್ಯಾತ ಮನೋರೋಗ ತಜ್ಞ ಡಾ। ಆದಿತ್ಯ ಪಾಂಡುರಂಗಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು ಮಾನಸಿಕವಾಗಿ, ಬೌದ್ಧಿಕವಾಗಿ ಸಮಾಜ ದೈಹಿಕವಾಗಿ, ಆರೋಗ್ಯವಂತರಾಗಿದ್ದರೆ ಸಹಜವಾಗಿಯೇ ಆರೋಗ್ಯವಂತವಾಗಿರುತ್ತದೆ ಎಂದರು. ನ್ಯಾಯವಾದಿ ಎಸ್.ಎ. ಜಾಮದಾರ ಮಾತನಾಡಿದರು. ತಹಶೀಲ್ದಾರ್ ಆರ್.ವಿ. ಕಟ್ಟಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಜಿ. ವಜ್ಜರಮಟ್ಟಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಆರ್. ಕಲಾದಗಿ, ನ್ಯಾಯವಾದಿ ಆರ್.ಎಚ್. ತೋಳಗಟ್ಟಿ ಬಿಇಒ ಎಂ.ಆರ್. ಅಲಾಸೆ, ಶಿಶು ಅಭಿವೃದ್ಧಿ ಅಧಿಕಾರಿ ಖಾದರಬಿ ಲಕ್ಷ್ಮೀಶ್ವರ, ಡಿವೈಎಸ್‌ಪಿ ಬಿ.ಎಸ್. ಪಾಟೀಲ, ಪಿಎಸ್‌ಐ ಸುನೀಲಕುಮಾರ ನಾಯಕ, ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್.ಎ. ಪಾಟೀಲ, ನಿರ್ದೇಶಕ ಎಸ್.ಆ‌ರ್. ನವರಕ್ಕಿ ಮುಖ್ಯೋಪಾಧ್ಯಾಯ ಎಚ್. ಎಲ್. ಅಲ್ಲಿಖಾನ, ಪ್ರಾಚಾರ್ಯ ಎಸ್.ಜಿ. ಕಡೇಮನಿ, ವ್ಯವಸ್ಥಾಪಕ ಬಿ.ಎಸ್.ಪಾಟೀಲ ಇದ್ದರು. ಪ್ರಾಚಾರ್ಯ ಎ.ಎನ್. ಮೋದಗಿ ಸ್ವಾಗತಿಸಿದರು. ఎనా.ఎ. ಹಿರೇಮಠ ನಿರೂಪಿಸಿದರು. ಎಫ್.ಎಲ್. ಮದಹಳ್ಳಿ ವಂದಿಸಿದರು.

About Author:

Leave Your Comments

Your email address will not be published. Required fields are marked *