COVID-19 Resources for Mental Health Coaches... Learn More
“ವಿದ್ಯಾದಾನ ಎಲ್ಲದಕ್ಕಿಂತ ಶ್ರೇಷ್ಠ”-ಡಾ. ಆದಿತ್ಯ ಪಾಂಡುರಂಗಿ,
ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದೆ. ವಿದ್ಯಾರ್ಜನೆಗೆ ಸಹಕಾರಿಯಾದ ಶಿಷ್ಯವೇತನ ನೀಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ಕೇಶವ ದೇಸಾಯಿ ಹೇಳಿದರು. ನಗರದ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಇಲ್ಲಿನ ಮಾಳಮಡ್ಡಿಯ ವನವಾಸಿ ಶ್ರೀರಾಮ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಿಂದ ಪಡೆದ ಸಹಾಯವನ್ನು ಸಮಾಜಕ್ಕೆ ಮರಳಿಸುವ ಕೆಲಸವನ್ನು ಪ್ರತಿಷ್ಠಾನದ ಸದಸ್ಯರು ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಷ್ಠಾನಕ್ಕೆ 51 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದರು. ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳ ವಿಷಯದಲ್ಲಿ ಪಾಲಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಟಿ.ವಿ, ಮೊಬೈಲ್‌ಗಳಿಂದ ಅವರನ್ನು ದೂರವಿಟ್ಟು ಹೊಸ ಜಗತ್ತಿನ ಪರಿಚಯ ಮಾಡಿಸಬೇಕು. ಮಕ್ಕಳು ತಮ್ಮ ಸೂಕ್ತ ಕನಸುಗಳನ್ನು ನನಸಾಗಿಸಿಕೊಳ್ಳಲು ವಿದ್ಯಾರ್ಥಿ ವೇತನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಪ್ರೊ. ಮೋಹನ ಸಿದ್ಧಾಂತಿ ಮಾತನಾಡಿ, ಎಲ್ಲರಲ್ಲಿ ಒಂದಿಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದರ ಸದುಪಯೋಗ ಪಡೆದುಕೊಳ್ಳುವ ವ್ಯಕ್ತಿತ ರೂಪಿಸಿಕೊಳ್ಳುವ ಕರ್ತವ್ಯ ನಮ್ಮ ವಿಜಯವಾಣಿ ಚಿತ್ರ ಧಾರವಾಡದ ವನವಾಸಿ ಶ್ರೀರಾಮ ಮಂದಿರದಲ್ಲಿ ಜರುಗಿದ ಶಿಷ್ಯವೇತನ ವಿತರಣೆ ಸಮಾರಂಭವನ್ನು ಕೇಶವ ದೇಸಾಯಿ ಉದ್ಘಾಟಿಸಿದರು. ಡಾ. ಆದಿತ್ಯ ಪಾಂಡುರಂಗಿ, ರಾಜೀವ ಪಾಟೀಲ ಕುಲಕರ್ಣಿ, ವೆಂಕಟೇಶ ದೇಸಾಯಿ, ಪಿ.ಜಿ. ನರಸಾಪುರ, ಮೋಹನ ಸಿದ್ದಾಂತಿ, ಮಧುಕರ ಟಂಕಸಾಲಿ, ಎಸ್.ಎಂ. ದೇಶಪಾಂಡೆ ಇತರರು ಇದ್ದರು. ಮೇಲಿದೆ. ಗುರು ಹಿರಿಯರಲ್ಲಿ ವಿನಯತೆ, ಭಕ್ತಿ, ಶ್ರದ್ದೆಯಿಂದ ನಡೆದವರೆಲ್ಲ ಜೀವನದಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ರಾಜು ಪಾಟೀಲ ಕುಲಕರ್ಣಿ, ಎಸ್.ಆರ್. ಮಣ್ಣೂರಕರ, ಪ್ರಭಾಕರ ಗದರೆ, ಎಚ್.ಬಿ. ಕುಲಕರ್ಣಿ, ಎನ್.ಎಸ್. ಮಠ, ಎಸ್.ಆರ್. ಕಡಕೋಳ, ಶ್ರೀಹರಿ ಅಂಬೇಕರ, ಆರ್.ಜಿ. ಸಿಡೇನೂರ, ಶ್ಯಾಮ ಕುಲಕರ್ಣಿ, ವಿಠಲ ಕಡಕೋಳ, ಸುಧೀಂದ್ರ ದೇಸಾಯಿ, ಶೋಭಾ ದೇಶಪಾಂಡೆ, ರತಿ ಶ್ರೀನಿವಾಸನ್, ಸ್ವಾತಿ ಕುಲಕರ್ಣಿ, ಇತರರು ಇದ್ದರು. ಪಂ. ಗೋಪಾಲಾಚಾರ್ಯ ಕೊಟಬಾಗಿ ವೇದಘೋಷ ನಡೆಸಿದರು. ವೆಂಕಟೇಶ ದೇಸಾಯಿ ಪ್ರತಿಷ್ಠಾನದ ಸಂಚಾಲಕ ಪ್ರೊ. ಪಲ್ಲಾದ ನರಸಾಪುರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ರೋಹಿಣಿ ಕಟ್ಟಿ, ಸೃಜನಾ ಕುಲಕರ್ಣಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಆಕಾಂಕ್ಷ ಜೋಗಳೇಕರ, ವೈಭವ ಮುಜುಮದಾರ ಅವರನ್ನು ಸನ್ಮಾನಿಸಲಾಯಿತು. ಮಧುಕರ ಟಂಕಸಾಲಿ, ಎಸ್.ಎಂ. ದೇಶಪಾಂಡೆ, ಎಸ್. ಆರ್.ಗರಗ, ಆನಂದ ಸಬನೀಸ್, ಪ್ರೊ. ಗೋಪಾಲ ಕಮಲಾಪುರ, ಸ್ವಾಗತಿಸಿದರು. ಮಧುಕರ ಧಾರವಾಡಕರ್ ವರದಿ ವಾಚಿಸಿದರು. ಅನಿಲ ಕಾಖಂಡಕಿ ನಿರೂಪಿಸಿದರು. ಅನಿಲ ಕೊಪ್ಪ ವಂದಿಸಿದರು