COVID-19 Resources for Mental Health Coaches... Learn More

0836-2773878

ವಾಸ್ತವ ಮುಚ್ಚಿಡದೆ ಸಂಭವನೀಯ ಅನಾಹುತ ತಪ್ಪಿಸಿ.!

ವಾಸ್ತವ ಮುಚ್ಚಿಡದೆ ಸಂಭವನೀಯ ಅನಾಹುತ ತಪ್ಪಿಸಿ.

ಮದುವೆ ಎಲ್ಲರ ಜೀವನದ ಪ್ರಮುಖ ಘಟ್ಟ. ಅದರಲ್ಲೂ ಹೆತ್ತವರಿಗೆ ಮಕ್ಕಳ ಮದುವೆ ಬಲು ದೊಡ್ಡ ಜವಾಬ್ದಾರಿ. ಸಕಾಲದಲ್ಲಿ ಮತ್ತು ಯಶಸ್ವಿಯಾಗಿ ನಿಭಾಯಿಸಿದಲ್ಲಿ ನಿಶ್ಚಿಂತೆ ಎನ್ನುವ ಮಾತು ಲೋಕಾರೂಢಿಯಲ್ಲಿದೆ. ಇದಕ್ಕೆ ಪೂರಕವಾಗಿ ನಮ್ಮ ಹಿರಿಯರು ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡಿಸು ಎಂದಿದ್ದಾರೆ. ಇಬ್ಬರಿಗೂ ಒಳಿತಾಗಲಿ ಎನ್ನುವ ಸದುದ್ದೇಶ ಅವರದು.

ಈ ನಡುವೆ ಎಲ್ಲ ಹುಡುಗ, ಹುಡುಗಿಗೂ ಕೆಲ ಮಾನಸಿಕ ಅಥವಾ ದೈಹಿಕ ಆರೋಗ್ಯದ ಸಮಸ್ಯೆಗಳಿರುತ್ತಿವೆ. ಇದಕ್ಕೆ ಚಿಕಿತ್ಸೆಯನ್ನು ಪಡೆದಿರು ತ್ತಾರೆ ಮತ್ತು ಪಡೆಯುತ್ತಿರುತ್ತಾರೆ. ಇದರಲ್ಲಿ ಕೆಲವು ಅಲ್ಪ ಕಾಲದ್ದು, ಇನ್ನು ಹಲವು ದೀರ್ಘಾವಧಿಯದು. ಆದರೆ ಮನೆಯ ಹಿರಿಯರು ಮಕ್ಕಳ ಮದುವೆ ಮಾಡಬೇಕೆಂದು ನಿಶ್ಚಯಿಸಿದಾಗ ಈ ಅಂಶಗಳ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಗಂಭೀರ ವಿಷಯ ಅಂದುಕೊಳ್ಳುವುದೇ ಇಲ್ಲ. ಆದರೆ ವಾಸ್ತವ ಹಾಗಿರುವುದಿಲ್ಲ. ಆರೋಗ್ಯದ ವಿಚಾರಗಳನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಮುಂದೊಂದು ದಿನ ಸಮಸ್ಯೆ ಸೃಷ್ಟಿಯಾಗಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಅದರ ಗಂಭೀರತೆ ಅರ್ಥವಾಗುತ್ತದೆ. ನಂತರ ಪರಸ್ಪರ ಆರೋಪ, ಪ್ರತ್ಯಾರೋಪ ಕೊನೆಗೆ ವಿಚ್ಛೇದನ ಹಂತದವರೆಗೂ ಬಂದು ನಿಲ್ಲುತ್ತದೆ.

ಸರಿಸುಮಾರು 20 ವರ್ಷದ ಹಿಂದಿನ ಮಾತು. ನನ್ನ ಆತ್ಮೀಯ ವಲಯದಲ್ಲಿನ ಕುಟುಂಬದ ಪಾಲಕರು ತಮ್ಮ ಮಗಳ ಮದುವೆಯನ್ನು ಡಾಕ್ಟರ್ ಜತೆ ನಿಶ್ಚಯಿಸಿದರು. ಅವರ ಮಗಳಿಗೆ ಅತಿಯಾದ ಸಂಶಯದ ಕಾಯಿಲೆ ಇತ್ತು. ಪರ್ಸನಾಲಿಟಿ ಸಮಸ್ಯೆ ಕೂಡ ಇತ್ತು. ನಾನೇ ಚಿಕಿತ್ಸೆ ಕೊಡುತ್ತಿದ್ದೆ. ಈ ಮಧ್ಯೆ ಸ್ವ ಆಕೆಯ ಮದುವೆಗೆ ಪಾಲಕರು ಮುಂದಾದರು. ಇದಕ್ಕೂ ಮುನ್ನ ಅವರು ನನ್ನನ್ನು ಸಂಪರ್ಕಿಸಿದರು. ಆಗ ನಾನು ಮದುವೆಯಾಗುವ ಹುಡುಗನಿಗೆ ಎಲ್ಲವನ್ನೂ ಸವಿಸ್ತಾರವಾಗಿ ಮುಚ್ಚು ಮರೆ ಇಲ್ಲದೆ ಮು ಹೇಳಿ ಅವನು ಒಪ್ಪಿದರೆ ಮಾಡಬಹುದು ಎಂದೆ. ಹಾಗೆ ಸುಲ ಹೇಳಿದರೆ ಅವರು ಹೇಗೆ ಮದುವೆ ಮಾಡಿಕೊಳ್ಳುವರು? ಆಕೆ ಎಂದಾಗ ನಿಮಗಾಗದಿದ್ದರೆ ಆ ಹುಡುಗನನ್ನು ನನ್ನ ಹುಡ ಬಳಿ ಕರೆದುಕೊಂಡು ಬನ್ನಿ ಎಂದೆ. ಅವರು ಭಾವಿ ಇಳಿದ ಅಳಿಯನನ್ನು ನನಗೆ ಭೇಟಿ ಮಾಡಿಸಿದರು. ಆಗ ಪಾಲಕರ ಕ ಸಮಕ್ಷಮವೇ ನಾನು ಅವನನ್ನು ಕೂಡಿಸಿಕೊಂಡು ಕಾರ { ಕೆಲ ವಿಚಾರ ಹೇಳಿದೆ. ಮದುವೆ ಹುಡುಗಾಟಿಕೆಯಲ್ಲ. ವಾಸ್ತ 3 ಜನುಮ ಜನುಮಗಳ ಅನುಬಂಧ. ಈ ಸುಮಧುರ ಚಿಕಿತ ತಕ್ಷಣದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಪರಸ್ಪರ ಎಲ್ಲ ವಾಸ್ತವ ಸಂಗತಿಗಳನ್ನು ಹೇಳಿಕೊಳ್ಳುವುದು ಮತ್ತು ತಾತ್ಪ ೨. ತಿಳಿದುಕೊಳ್ಳುವುದು ಒಳಿತು. ಅದರಲ್ಲೂ ಮುಖ್ಯವಾಗಿ ಬದು ದ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸವಿಜ ರ್ ಮುಚ್ಚಿಡಲೇಬಾರದು. ಒಂದು ವೇಳೆ ಹಾಗೆ ಮುಚ್ಚಿಟ್ಟು ಕಾಳ ದ ಮದುವೆ ಮಾಡಿ ನಂತರ ಒಂದು ದಿನ ಆ ಸಮಸ್ಯೆ ಬಗ್ಗೆ ಕಲ್ಮಾ ಸ್ಯೆ ಹುಡುಗ ಅಥವಾ ಹುಡುಗಿಗೆ ಗೊತ್ತಾದಾಗ ಎದುರಾಗುವ ಬಿಕ್ಕಟ್ಟಿನ ಪರಿಣಾಮ ಘೋರವಾದುದು.

ಆದ್ದರಿಂದ ಮುಂಚಿತವಾಗಿಯೇ ಎಲ್ಲವನ್ನೂ ಪಾರದರ್ಶಕವಾಗಿ ತಿಳಿಸಿ ಒಪ್ಪಿಗೆ ಪಡೆದ ನಂತರವೇ ಮದುವೆ ಮಾಡಿದರೆ ಅವರಿಗೂ ಒಳಿತು ಹೆತ್ತವರಿಗೂ ನೆಮ್ಮದಿ ಎಂದಾಗ ಆ ಹುಡುಗ, “ಡಾಕ್ಟರೇ ಸಮಸ್ಯೆ ಎಲ್ಲರಲ್ಲೂ ಇದ್ದದ್ದೇ. ಅದು ದೈಹಿಕ ಇರಬಹುದು, ಇಲ್ಲವೇ ಮಾನಸಿಕ ಇರಬಹುದು. ಆದರೆ ನಿಮ್ಮ ಚಿಕಿತ್ಸೆಯೊಂದಿದ್ದರೆ ನನಗೆ ಅವಳನ್ನು ಮದುವೆಯಾಗಲು ಅಭ್ಯಂತರವಿಲ್ಲ’ ಎಂದು ಸ್ಪಷ್ಟಪಡಿಸಿದ. ಮುಂದೆ ಅವರಿಬ್ಬರ ಮದುವೆಯೂ ಆಯಿತು. ಅಂದಿನಿಂದ ಇಂದಿಗೂ ಈ ಜೋಡಿ ಸಂತಸದಿಂದಿದೆ. ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಹುಡುಗಿಯ ಪಾಲಕರು ಮಗಳ ಮಾನಸಿಕ ಕಾಯಿಲೆ ಮುಚ್ಚಿಟ್ಟು ಮದುವೆ ಮಾಡಿದ್ದರು. ಕೆಲ ದಿನ ಎಲ್ಲವೂ ಸುಲಲಿತವಾಗಿಯೇ ಸಾಗಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಆಕೆಯ ಮಾನಸಿಕ ಕಾಯಿಲೆ ಉಲ್ಬಣಿಸಿದ ಪರಿಣಾಮ ಹುಡುಗನ ಕಡೆಯವರು ಬೇಸರಗೊಂಡು ಜಗಳಕ್ಕೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಮುಂದೆ ಆ ಜೋಡಿ ವಿಚ್ಛೇದನ ಹಂತಕ್ಕೆ ಬಂದರು. ಇಷ್ಟೆಲ್ಲಾ ಆಗಲು ಕಾರಣ ಒಂದು ಸತ್ಯ ಮಚ್ಚಿಟ್ಟಿದ್ದು. ಅದಕ್ಕೆ ಹೇಳೋದು ವಾಸ್ತವ ವಿಚಾರ ಮತ್ತು ಅದರ ನಿವಾರಣಿಗೆ ಕೈಗೊಂಡ ಚಿಕಿತ್ಸಾ ಕ್ರಮಗಳ ಬಗ್ಗೆ ಮೊದಲೇ ತಿಳಿಸಿಬಿಟ್ಟರೆ ಈ ಎಲ್ಲ ಅನಾಹುತ ಎದುರಾಗುತ್ತಿರಲೇ ಇಲ್ಲ.

ತಾತ್ಪರ್ಯವಿಷ್ಟೇ: ನಿಮ್ಮ ಮಗ ಅಥವಾ ಮಗಳು ಬದುಕಿರುವವರೆಗೂ ಹಾಯಾಗಿ ದಾಂಪತ್ಯದ ಸವಿಜೇನು ಸೇವಿಸಬೇಕೆಂದರೆ ಹೆತ್ತವರು ಕಾಳಜಿ ವಹಿಸಬೇಕು, ಇರುವ ವಿಷಯ ತಿಳಿಸಿ ಕಲ್ಯಾಣ ಮಾಡಿದರೆ ನೀವೂ ನಿರಾಳ ಅವರೂ ಹಾಯಾಗಿರುತ್ತಾರೆ.

About Author:

Leave Your Comments

Your email address will not be published. Required fields are marked *